ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುರುಷ ಸಲಿಂಗ ಕಾಮ 'ಸಾಂಕ್ರಾಮಿಕ ರೋಗ': ಆರೋಗ್ಯ ಸಚಿವ (Gay Sex | MSM | Ghulam Nabi Azad | Health Minister)
ಕೇಂದ್ರ ಆರೋಗ್ಯ ಸಚಿವರ ಮಟ್ಟಿಗೆ ಸಲಿಂಗ ಕಾಮವು "ಅಸಹಜ" ಮಾತ್ರವಷ್ಟೇ ಅಲ್ಲ, ಅದೊಂದು "ಸಾಂಕ್ರಾಮಿಕ ರೋಗ"ವೂ ಹೌದು. ಅವರ ಪ್ರಕಾರ ಈ ರೋಗವು ಭಾರತಕ್ಕೆ ಬಂದಿದ್ದು ವಿದೇಶಗಳಿಂದ ಮತ್ತು ಭಾರತೀಯ ಸಮಾಜ ಇದನ್ನು ಎದುರಿಸಲು ಸಿದ್ಧವಾಗಿರಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. "ಇಂತಹಾ ವ್ಯಕ್ತಿಗಳ" ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದುರದೃಷ್ಟಕರ ಎಂದೂ ಅವರು ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ರೀತಿಯ ಅವರ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಲಿಂಗಿಗಳು ಆರೋಗ್ಯ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪರಿಷತ್ ಅಧ್ಯಕ್ಷರು ಮತ್ತು ಮೇಯರ್‌ಗಳ ಸಮಾವೇಶವೊಂದರಲ್ಲಿ ಸೋಮವಾರ ಮಾತನಾಡುತ್ತಿದ್ದ ಅವರು, "ಪುರುಷರು-ಪುರುಷರು ಲೈಂಗಿಕತೆಯಲ್ಲಿ ತೊಡಗುವ ರೋಗವು ಅಸಹಜ ಮತ್ತು ಭಾರತೀಯ ಸಮಾಜಕ್ಕೆ ಆರೋಗ್ಯಕರವಲ್ಲ. ಇಂತಹವರನ್ನು ಗುರುತಿಸುವುದೇ ಒಂದು ಸವಾಲು. ಮಹಿಳಾ ಲೈಂಗಿಕ ಕಾರ್ಯಕರ್ತರನ್ನಾದರೆ ಗುರುತಿಸಬಹುದಾಗಿದೆ ಮತ್ತು ಅವರೆಲ್ಲರೂ ಒಗ್ಗಟ್ಟಿನಿಂದ ಗುಂಪಾಗಿ ವಾಸಿಸುತ್ತಿರುವುದರಿಂದ ಅವರಿಗೆ ತಿಳಿಹೇಳುವುದೂ ಸುಲಭ. ಆದರೆ ಪುರುಷ ಸಲಿಂಗ ಕಾಮಿಗಳಲ್ಲಿ ಇದು ದುಸ್ತರ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ದೇಶದ ಆರೋಗ್ಯ ಸಚಿವರ ಈ ಹೇಳಿಕೆಗಳು ನಾಗರಿಕ ಸಮಾಜದಲ್ಲಿ ಮಾತ್ರವಷ್ಟೇ ಅಲ್ಲದೆ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಒಕ್ಕೂಟ (ನ್ಯಾಕೋ)ದಿಂದಲೂ ಆಕ್ರೋಶಕ್ಕೆ ಕಾರಣವಾಗಿದೆ.

"ಅದೊಂದು ರೋಗ ಅಂತ ಹೇಳೋದಾದ್ರೂ ಹೇಗೆ? ಅದು ಕೇವಲ ಒಂದು ಲೈಂಗಿಕ ವಿಧಾನವಷ್ಟೇ. ಖಂಡಿತಾ ಅಸಹಜವಲ್ಲ" ಎಂದು ನ್ಯಾಕೋ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪುರುಷ ಸಲಿಂಗ ಕಾಮಿಗಳನ್ನು ಗುರುತಿಸಿ, ಸಮಾಜದಲ್ಲಿ ಅವರಿಗೂ ಒಂದು ಸ್ಥಾನ ಕಲ್ಪಿಸಲು ನ್ಯಾಕೋ ಪ್ರಯತ್ನಿಸುತ್ತಿದ್ದು, ಸಲಿಂಗ ಕಾಮಿಗಳ ವಿವಾಹಕ್ಕೆ ಕೂಡ ಇತ್ತೀಚೆಗೆ ನ್ಯಾಯಾಲಯವು ಅನುಮತಿ ನೀಡಿದ್ದು ಇಲ್ಲಿ ಸ್ಮರಣಾರ್ಹ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ