ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾವತಿ ನಾಡಿನಲ್ಲಿ ಮತ್ತೆ ರೈತರ ಬಳಿಗೆ ರಾಹುಲ್ ನಡಿಗೆ (Mayavati | Uttar Pradesh Election 2012 | Rahul Gandhi | Congress)
ರೈತರ ಪರವಾಗಿ 'ಹೋರಾಟ' ಮಾಡುತ್ತಾ ಬಂಧಿಸಲ್ಪಟ್ಟ ಸರಿಸುಮಾರು ಎರಡು ತಿಂಗಳ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಭಾವೀ ಪ್ರಧಾನಿ ರಾಹುಲ್ ಗಾಂಧಿ ಇದೀಗ ಮುಖ್ಯಮಂತ್ರಿ ಮಾಯಾವತಿಗೆ ಮತ್ತೆ ಸವಾಲು ಹಾಕಲು ಅದೇ ಅವಳಿ-ಹಳ್ಳಿಗಳಿಗೆ ಆಗಮಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭೂಸ್ವಾಧೀನ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದ ಭಟ್ಟಾ, ಪರ್ಸಾಲ್ ಗ್ರಾಮಗಳಿಂದಲೇ ಮಂಗಳವಾರ ಬೆಳಿಗ್ಗೆ 'ಕಿಸಾನ್ ಸಂದೇಶ ಯಾತ್ರೆ' ಆರಂಭಿಸಿರುವ ರಾಹುಲ್ ಗಾಂಧಿ, ಆಲಿಗಢದಲ್ಲಿ ಶನಿವಾರ ನಡೆಯುವ 'ಕಿಸಾನ್ ಮಹಾಪಂಚಾಯತ್' ರ‌್ಯಾಲಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿರುವ ಕರ್ನಾಟಕದಲ್ಲಿಯೂ ಇದೇ ರೀತಿ 'ಕಾಂಗ್ರೆಸ್ ನಡಿಗೆ ಜನರ ಬಳಿಗೆ' ಎಂಬ ಯಾತ್ರೆಯನ್ನು ಹಮ್ಮಿಕೊಂಡಿರುವುದು ಇಲ್ಲಿ ಗಮನಾರ್ಹ. ಈ ಹಿಂದೆಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿತ್ತು.

ಬೆಳಿಗ್ಗೆ 6 ಗಂಟೆಗೇ ಕಾರಿನಲ್ಲಿ ಆಗಮಿಸಿದ ಅವರು ತಮಟೆ, ವಾದ್ಯ ಇತ್ಯಾದಿಗಳೊಂದಿಗೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಆರಂಭಿಸಿದರು.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾದರಿಯ ರಾಜಕೀಯ ನಡೆಗಳೆಲ್ಲವೂ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ಹಲವು ಅತ್ಯಾಚಾರ ಪ್ರಕರಣಗಳು, ಹತ್ಯೆ ಇತ್ಯಾದಿಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವುದು ಸಾಮಾನ್ಯ. ಇದೀಗ ರೈತರ ಹೋರಾಟವೂ ಮಾಯಾವತಿ ಅವರ ಬಿಎಸ್ಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಹೋರಾಟವಾಗಿ ಬದಲಾಗುತ್ತಿದೆ.

ಭಟ್ಟಾ-ಪರ್ಸಾಲ್‌ನಲ್ಲಿ ರ‌್ಯಾಲಿ ಏರ್ಪಡಿಸುವ ರಾಹುಲ್ ಗಾಂಧಿ ನಿರ್ಧಾರಕ್ಕೆ ಮಾಯಾವತಿ ತಡೆಯೊಡ್ಡಿದ್ದು, ಅವಕಾಶ ನಿರಾಕರಿಸಿದ ಕಾರಣದಿಂದಾಗಿ ಈ ಸಮಾವೇಶವನ್ನು ಆಲಿಗಢದಲ್ಲಿ ಆಯೋಜಿಸಲು ರಾಹುಲ್ ನಿರ್ಧರಿಸಿದ್ದರು.

ಎರಡು ತಿಂಗಳ ಹಿಂದೆ, ಮೇ 11ರಂದು ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯ ಸರಕಾರದ ಆದೇಶ ಮೀರಿ ಅಲ್ಲಿಗಾಗಮಿಸಿದ ರಾಹುಲ್ ಗಾಂಧಿಯನ್ನು ರಾತೋರಾತ್ರಿ ಬಂಧಿಸಿ, ನವದೆಹಲಿಗೆ ವಾಪಸ್ ಕಳುಹಿಸಲಾಗಿತ್ತು. ಆ ಬಳಿಕ ಭೂಸ್ವಾಧೀನಕ್ಕೆ ಸಂಬಂಧಿಸಿ ಕೇಂದ್ರವು ಸೂಕ್ತ ಕಾನೂನು ರೂಪಿಸಿಲ್ಲ ಎಂದು ಆರೋಪಿಸಿದ್ದ ಮಾಯಾವತಿ ಸರಕಾರವು, ತಾನಾಗಿಯೇ ಹೊಸ ಕಾಯ್ದೆಯನ್ನು ರೂಪಿಸಿಕೊಂಡಿತ್ತು.

ಇದೀಗ, ಹಳ್ಳಿ ಹಳ್ಳಿಗೆ ಹೋಗಿ, ಹೊಸ ಕಾನೂನಿನ ಬಗ್ಗೆ ಜನತೆಯ, ವಿಶೇಷವಾಗಿ ರೈತರ ಅಭಿಪ್ರಾಯ ಪಡೆಯುತ್ತೇನೆ, ಎಲ್ಲಿ, ಹೇಗೆ ಮತ್ತು ಯಾರಿಂದ ಈ ಕಾನೂನು ಅನುಷ್ಠಾನಗೊಳಿಸಲಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು ರಾಹುಲ್ ಗಾಂಧಿ.

ಇದು ರಾಜಕೀಯ ನಾಟಕ ಎಂದಿತು ಬಿಜೆಪಿ
ರಾಹುಲ್ ಗಾಂಧಿಯ ರೈತರ ಓಲೈಕೆ ಪ್ರಕರಣವನ್ನು "ರಾಜಕೀಯ ನಾಟಕ" ಎಂದು ಬಣ್ಣಿಸಿರುವ ಬಿಜೆಪಿ ಮಾಜಿ ಅಧ್ಯಕ್ಷ, ಉತ್ತರ ಪ್ರದೇಶದ ಬಿಜೆಪಿ ಬಲಾಢ್ಯ ರಾಜನಾಥ್ ಸಿಂಗ್, ಇದೆಲ್ಲವೂ ಚುನಾವಣೆಗಾಗಿ ರಾಹುಲ್ ಗಾಂಧಿ ಮಾಡುತ್ತಿರುವ ಸ್ಟಂಟ್ ಎಂದಿದ್ದಾರೆ.

ಭೂಸ್ವಾಧೀನ ತಿದ್ದುಪಡಿ ಮಸೂದೆಯು ಸದನದಲ್ಲಿ ಅಂಗೀಕಾರವಾಗಿ ಕಾಯ್ದೆಯಾಗುವವರೆಗೂ ರೈತರ ಪರಿಸ್ಥಿತಿಯೇನೂ ಸುಧಾರಿಸುವುದಿಲ್ಲ. ಈ ಮಸೂದೆಯು ಈಗಾಗಲೇ ರಾಹುಲ್ ಅವರ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೈಯಲ್ಲೇ ಇದೆ. ಹೀಗಾಗಿ ಈ ಮಸೂದೆಯು ಜಾರಿಗೆ ಬರುವಂತೆ ಮಾಡುವ ಜವಾಬ್ದಾರಿ ಯುಪಿಎ ಹಾಗೂ ರಾಹುಲ್ ಗಾಂಧಿಯ ಮೇಲಿದೆ ಎಂದು ರಾಜನಾಥ್ ಹೇಳಿದರು.

2007ರಿಂದಲೂ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಸರಕಾರ ತನ್ನ ಬಳಿಯೇ ಇಟ್ಟುಕೊಂಡು ವಿಳಂಬ ಮಾಡುತ್ತಿದೆ. ಸರಕಾರಕ್ಕೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದ್ದದ್ದೇ ಆದಲ್ಲಿ, ಅದು ಈ ಮಸೂದೆಯನ್ನು ಸಂಸತ್ತಿನ ಮುಂದಿಡಬೇಕಿತ್ತು ಎಂದು ಅವರು ಹೇಳಿದರು. ಹೀಗಾಗಿ, ರಾಹುಲ್ ಗಾಂಧಿಯವರು ದೊಡ್ಡ ರಾಜಕೀಯ ಪಕ್ಷವೊಂದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಈ ರೀತಿಯ ಕ್ರಮ ಕೈಗೊಳ್ಳುವ ಮೊದಲು ಒಂದಿಷ್ಟು ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ