ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರಡು ಸಮಿತಿ: ಪ್ರಧಾನಿಗೆ ಮೊಯ್ಲಿ ಪತ್ರ ತೀರಾ 'ವೈಯಕ್ತಿಕ' (RTI | Lokpal Bill | Civil Society | Veerappa Moily)
ಜಂಟಿ ಲೋಕಪಾಲ ಕರಡು ಸಮಿತಿ ಸದಸ್ಯನಾಗಿ ಕೇಂದ್ರ ಕಾನೂನು ಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ಮಾಡಿರುವ ಶಿಫಾರಸನ್ನು ಬಹಿರಂಗಗೊಳಿಸಲು ಕೇಂದ್ರ ಕಾನೂನು ಸಚಿವಾಲಯವು ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸಿರುವ ಕಾನೂನು ಸಚಿವಾಲಯ, ಅದು "ರಾಜಕೀಯ ಪಕ್ಷವೊಂದರ ಚಿಂತಕನಾಗಿ ಅವರ ವೈಯಕ್ತಿಕ ಅಭಿಪ್ರಾಯ" ಎಂಬ ಕಾರಣವನ್ನು ನೀಡಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲೋಕಪಾಲ ಮಸೂದೆಯ ಕುರಿತು ವೀರಪ್ಪ ಮೊಯಿಲಿ ಅವರು ರಾಜಕೀಯ ಪಕ್ಷದ ಚಿಂತಕನ ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆಯೇ ಹೊರತು, ಕಾನೂನು ಸಚಿವನಾಗಿ ಅಲ್ಲ. ಹೀಗಾಗಿ ಅವನ್ನು ಬಹಿರಂಗಪಡಿಸುವುದು ಸರಿಯಲ್ಲ ಎಂದು ಕಾನೂನು ಸಚಿವಾಲಯ ಹೇಳಿದೆ.

ಕರಡು ಲೋಕಪಾಲ ಮಸೂದೆಯ ಕುರಿತು ಜಂಟಿ ಕರಡು ಸಮಿತಿ ರಚನೆಗಾಗಿ ಯಾವುದೇ ಸಲಹೆಗಳೂ ಸೇರಿದಂತೆ ಮಾತುಕತೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಅಭಿಪ್ರಾಯಗಳು, ವೈಯಕ್ತಿ. ಇದು ಆರ್‌ಟಿಐ ಕಾಯ್ದೆ, 2005ರ ಸೆಕ್ಷನ್ 8(1)(j) ಅಡಿ ಬರುತ್ತದೆ ಎಂದಿದೆ ಸಚಿವಾಲಯ. ಈ ಸೆಕ್ಷನ್ ಪ್ರಕಾರ, ಸಾರ್ವಜನಿಕ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದ ಅಥವಾ ಹಿತಾಸಕ್ತಿಯೇನೂ ಇಲ್ಲದ ಹಾಗೂ ಅನಗತ್ಯವಾಗಿ ಖಾಸಗಿತನಕ್ಕೆ ಧಕ್ಕೆಯುಂಟುಮಾಡುವಂತಹಾ ವೈಯಕ್ತಿಕ ಮಾಹಿತಿ ನೀಡುವುದಕ್ಕೆ ವಿನಾಯಿತಿ ಇದೆ.

ಹೀಗಾಗಿ ಕರಡು ಸಮಿತಿ ರಚನೆ ಕುರಿತಾಗಿ ಮೊಯಿಲಿ ಅವರು ಪ್ರಧಾನಿಗೆ ಬರೆದ 'ವೈಯಕ್ತಿಕ' ಪತ್ರವನ್ನು ಬಹಿರಂಗಪಡಿಸಲಾಗದು ಎಂದು ಅರ್ಜಿದಾರ ಎಸ್.ಸಿ.ಅಗರವಾಲ್ ಎಂಬವರಿಗೆ ಸಚಿವಾಲಯವು ಉತ್ತರಿಸಿದೆ.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು 98 ಗಂಟೆಗಳ ಉಪವಾಸ ಪ್ರತಿಭಟನೆ ನಡೆಸಿದ ಬಳಿಕ ಕೇಂದ್ರ ಸರಕಾರವು ಏಪ್ರಿಲ್ 9ರಂದು ಲೋಕಪಾಲ ಮಸೂದೆ ಕರಡು ಸಮಿತಿಗೆ ನಾಗರಿಕ ಸಮಾಜದ ಪ್ರತಿನಿಧಿಗಳನ್ನೂ ಸೇರಿಸಿಕೊಂಡಿತ್ತು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ