ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಓಟಿಗಾಗಿ ನೋಟು' ತನಿಖೆ ಎಲ್ಲೀವರೆಗೆ ಬಂತು: ಕೇಂದ್ರಕ್ಕೆ ಸುಪ್ರೀಂ (Supreme Court | UPA | Cash For Vote Scam | Congress | Nuclear Deal)
2008ರ ಜುಲೈ ತಿಂಗಳಲ್ಲಿ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಸರಕಾರವು ಸಂಸದರಿಗೆ 'ಓಟಿಗಾಗಿ ನೋಟು' ನೀಡಲಾದ ಹಗರಣದ ಕುರಿತ ತನಿಖೆ ಎಲ್ಲಿಯವರಗೆ ಬಂದಿದೆ ಎಂದು ಸುಪ್ರೀಂ ಕೋರ್ಟು ದೆಹಲಿ ಪೊಲೀಸರನ್ನು ಪ್ರಶ್ನಿಸಿ, ತನಿಖಾ ಪ್ರಗತಿಯ ವರದಿ ಸಲ್ಲಿಸಲು ಸೂಚಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಪ್ರಕರಣದಲ್ಲಿ ಒಂದು ಎಫ್ಐಆರ್ ದಾಖಲಿಸಲಾಗಿದೆ ಮತ್ತು ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳಲಿದೆ ಎಂಬ ಕೇಂದ್ರ ಸರಕಾರದ ವಾದದಿಂದ ತೃಪ್ತವಾಗದ ನ್ಯಾಯಮೂರ್ತಿ ಅಫ್ತಾಬ್ ಆಲಂ ನೇತೃತ್ವದ ನ್ಯಾಯಪೀಠವು, ಜುಲೈ 15ರೊಳಗೆ ತನಿಖಾ ಪ್ರಗತಿಯ ಕುರಿತು ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.

ಇನ್ನೂ ಎರಡು ತಿಂಗಳೆಂದರೆ ತುಂಬಾ ವಿಳಂಬವಾಗುತ್ತದೆ. ತನಿಖೆಯ ಗತಿ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನು ನಮಗೆ ತಿಳಿಸಿ ಎಂದು ಆದೇಶಿಸಿದ ನ್ಯಾಯಪೀಠವು, ಜುಲೈ 15ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ಸಂಸತ್ತಿನಲ್ಲಿ "ಓಟಿಗಾಗಿ ನೋಟು" ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ.ಲಿಂಗ್ಡೋ ಅವರು ಸಲ್ಲಿಸಿದ ಅರ್ಜಿಯನ್ವಯ ಸುಪ್ರೀಂ ಕೋರ್ಟು ಈ ಆದೇಶ ಜಾರಿಗೊಳಿಸಿದೆ.

ಜುಲೈ ತಿಂಗಳಲ್ಲಿ ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದವು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡುತ್ತಿದ್ದ ಬೆಂಬಲ ಹಿಂತೆಗೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಅಲ್ಪಮತಕ್ಕೆ ಇಳಿದು, ಪತನದ ಹಂತದಲ್ಲಿತ್ತು. ಆದರೆ, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ದಿಢೀರನೇ ರಾಶಿ ರಾಶಿ ನೋಟುಗಳು ಸಂಸತ್ತಿನಲ್ಲಿ ಪ್ರದರ್ಶನಗೊಂಡು, ವಿಶ್ವಾಸಮತ ಯಾಚನೆಯ ಮತದಾನದ ಸಂದರ್ಭದಲ್ಲಿ ಓಟಿಗಾಗಿ ಕಾಂಗ್ರೆಸ್ ಸರಕಾರವು ನೋಟುಗಳನ್ನು ನೀಡಿದೆ, ಸಂಸದರನ್ನು ಖರೀದಿಸಲು ಯತ್ನಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಕೊನೆಗೂ ಯುಪಿಎ ಸರಕಾರವು ಕೆಲವೇ ಮತಗಳ ಅಂತರದಲ್ಲಿ ವಿಜಯ ಸಾಧಿಸಿ, ಸರಕಾರ ಉಳಿಸಿಕೊಳ್ಳಲು ಸಮರ್ಥವಾಗಿತ್ತು.

ಸುಪ್ರೀಂ ಕೋರ್ಟು ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯುಪಿಎ ಸರಕಾರದ ಮೇಲೆ ಒಂದಾದ ಮೇಲೊಂದರಂತೆ ಚಾಟಿ ಬೀಸುತ್ತಲೇ ಇದೆ. 2ಜಿ ಹಗರಣ, ಕಪ್ಪು ಹಣ, ಸಿಡಬ್ಲ್ಯುಜಿ ಹಗರಣ, ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ, ತೆರಿಗೆ ವಂಚನೆ ಇತ್ಯಾದಿ ಪ್ರಕರಣಗಳ ಕುರಿತಾಗಿ ಈಗಾಗಲೇ ಸುಪ್ರೀಂ ಕೋರ್ಟ್ ಯುಪಿಎ ಸರಕಾರಕ್ಕೆ ಚುರುಕು ಮುಟ್ಟಿಸುತ್ತಲೇ ಇರುವುದು ಗಮನಾರ್ಹ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ