ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದ ರಾಸಲೀಲೆ: 'ಸನ್‌ ಟಿವಿ' ಮಾರನ್ ವಿರುದ್ಧ ದೂರು (Nithyananda ashram | Kalanithi Maran | Sun Network | Hansraj Saxena)
WD
ನಿತ್ಯಾನಂದ ಸ್ವಾಮೀಜಿ ಚಿತ್ರನಟಿಯೊಂದಿಗೆ ರಾಸಲೀಲೆ ನಡೆಸುವಂತೆ ದೃಶ್ಯಾವಳಿಗಳನ್ನು ಮಾರ್ಪಡಿಸಿ ಪ್ರಸಾರ ಮಾಡಿದ್ದಾರೆ ಎಂದು ಆಪಾದಿಸಿರುವ ನಿತ್ಯಾನಂದ ಆಶ್ರಮವು, ಸನ್‌ ನೆಟ್‌ವರ್ಕ್‌ ಸಮೂಹದ ಮಾಲೀಕ ಕಲಾನಿಧಿ ಮಾರನ್‌ ಹಾಗೂ ಆ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಕುರಿತು ಚೆನ್ನೈ ನಗರ ಪೊಲೀಸ್‌ ಕಮಿಷನರ್ ಜೆ.ಕೆ.ತ್ರಿಪಾಠಿ ಅವರಿಗೆ ದೂರು ನೀಡಿರುವ ಬೆಂಗಳೂರಿನ ನಿತ್ಯಾನಂದ ಧ್ಯಾನ ಪೀಠಂ, ಆಶ್ರಮದೊಳಗೆ ಟಿವಿ ಚಾನಲ್‌ ಸಿಬ್ಬಂದಿ ಅತಿಕ್ರಮಣ ಮಾಡಿದ್ದಲ್ಲದೆ, ಆಶ್ರಮವಾಸಿಗಳಿಗೆ ಹಲ್ಲೆ ಮಾಡಿರುವುದಕ್ಕೆ ಮಾರನ್‌ ಹಾಗೂ ಟಿವಿ ಚಾನಲ್‌ನ ಸಿಓಓ ಹಂಸರಾಜ್‌ ಸಕ್ಸೇನಾ ಅವರೇ ಹೊಣೆಗಾರರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಧ್ಯಾನ ಪೀಠದ ನಿತ್ಯ ಸರ್ವಾನಂದ, 2010ರ ಮಾರ್ಚ್‌ 3ರಂದು ಸನ್‌ ಟಿವಿ ಪ್ರಕಟಿಸಿದ ದೃಶ್ಯಾವಳಿಯು ನಮ್ಮ ಧ್ಯಾನಪೀಠಕ್ಕೆ ಕೆಟ್ಟ ಹೆಸರು ತಂದಿದೆ. ಆದ್ದರಿಂದ ನಾವು ಕಲಾನಿಧಿ ಮಾರನ್‌ ಹಾಗೂ ಹಂಸರಾಜ ಸಕ್ಸೇನಾ ಅವರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

ಕಲಾನಿಧಿ ಮಾರನ್‌ ಅವರು 2ಜಿ ಹಗರಣದ ಹಿನ್ನೆಲೆಯಲ್ಲಿ ಗುರುವಾರ ರಾಜೀನಾಮೆ ನೀಡಿದ ಕೇಂದ್ರ ಜವಳಿ ಖಾತೆ ಸಚಿವ ದಯಾನಿಧಿ ಮಾರನ್‌ ಅವರ ಸಹೋದರ ಹಾಗೂ ಡಿಎಂಕೆ ಮುಖಂಡ ಕರುಣಾನಿಧಿ ಅವರ ಸೋದರಳಿಯನ ಮಗ.

ಚತ್ರನಟಿ ರಂಜಿತಾ ಅವರೊಂದಿಗೆ ನಿತ್ಯಾನಂದ ಸ್ವಾಮೀಜಿ ಇದ್ದ ಬಿಸಿಬಿಸಿ ದೃಶ್ಯಗಳುಳ್ಳ ವೀಡಿಯೋಗಳನ್ನು ವಿವಿಧ ಚಾನೆಲ್‌ಗಳು 2010ರ ಮಾರ್ಚ್‌ 3ರಂದು ಪ್ರಸಾರ ಮಾಡಿದ್ದವು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮೀಜಿ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಆಶ್ರಮವು, ಇದು ಸ್ವಾಮೀಜಿ ಅವರಿಗೆ ಕೆಟ್ಟ ಹೆಸರು ತರಲು ನಡೆಸಿರುವ ಒಳಸಂಚು ಎಂದು ಬಣ್ಣಿಸಿತ್ತು.

ಈ ದೃಶ್ಯಾವಳಿಗಳನ್ನು ಮಾಧ್ಯಮಗಳು ತಿದ್ದುಪಡಿ ಮಾಡಿದ್ದು, ಈ ದೃಶ್ಯಾವಳಿ ಪ್ರಸಾರವಾದ ನಂತರ ಆಶ್ರಮದ ಸಿಬ್ಬಂದಿಯ ಮೇಲೆ ವಿವಿಧೆಡೆ ಹಲ್ಲೆ ನಡೆಸಲಾಗಿತ್ತು ಎಂದು ನಿತ್ಯಾನಂದ ಧ್ಯಾನ ಪೀಠ ಆಪಾದಿಸಿದೆ.

ಅತ್ಯಾಚಾರ ಮತ್ತಿತರೆ ಕ್ರಿಮಿನಲ್‌ ಆಪಾದನೆಯ ಮೇರೆಗೆ ನಿತ್ಯಾನಂದ ಸ್ವಾಮಿಯನ್ನು ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಬಂಧಿಸಿದ್ದರು. ಈ ಕುರಿತ ಕೇಸಿನ ವಿಚಾರಣೆಯು ಬೆಂಗಳೂರಿನ ರಾಮನಗರ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಚಿತ್ರ ವಿತರಕ ಸಲೀಂ ಎಂಬುವವರು ಸನ್‌ ಟಿವಿ ಸಿಒಒ ಹಂಸರಾಜ್‌ ಸಕ್ಸೇನಾ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಅವರು ಈಗಾಗಲೇ ಪೊಲೀಸ್‌ ವಶದಲ್ಲಿದ್ದಾರೆ.