ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಪೆಕ್ಟ್ರಂ ಸಭೆ ದಾಖಲೆ ನಾಪತ್ತೆ: ಚಿದು ರಾಜೀನಾಮೆಗೆ ಬಿಜೆಪಿ ಆಗ್ರಹ (2G Spectrum Scam | Telecom Scam | Chidambaram | A Raja)
ಎ.ರಾಜಾ, ದಯಾನಿಧಿ ಮಾರನ್ ಆಯ್ತು, ಇದೀಗ 2ಜಿ ಹಗರಣಕ್ಕೆ ಸಂಬಂಧಿಸಿ ಹಿಂದಿನ ವಿತ್ತ ಸಚಿವರಾಗಿದ್ದ ಗೃಹ ಸಚಿವ ಪಿ.ಚಿದಂಬರಂ ಅವರ ತಲೆದಂಡಕ್ಕೆ ಬಿಜೆಪಿ ಆಗ್ರಹಿಸಿದೆ. ಟೆಲಿಕಾಂ ತರಂಗಗುಚ್ಛ ಹಂಚಿಕೆಯ ಅವ್ಯವಹಾರದಲ್ಲಿ ಅವರು ಕೂಡ ಭಾಗಿಯಾಗಿರುವ ಬಗ್ಗೆ ಈಗಾಗಲೇ ವರದಿಗಳಿರುವುದರಿಂದ ತಕ್ಷಣವೇ ಪ್ರಧಾನಿ ಚಿದಂಬರಂ ಅವರನ್ನು ಕೈಬಿಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2008ರಲ್ಲಿ ಅಂದಿನ ವಿತ್ತ ಸಚಿವ ಚಿದಂಬರಂ ಹಾಗೂ ಅಂದಿನ ಟೆಲಿಕಾ ಸಚಿವ ಎ.ರಾಜಾ ಅವರ ನಡುವೆ ನಡೆದ ಸಭೆಗೆ ಸಂಬಂಧಿಸಿ ದಾಖಲೆಗಳನ್ನೇ ಇರಿಸಲಾಗಿಲ್ಲ ಎಂದು ವಿತ್ತೀಯ ವ್ಯವಹಾರಗಳ ಇಲಾಖೆಯು ಹಗರಣದ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಒತ್ತಾಯ ಮಾಡಿದೆ.

ಕೇಂದ್ರ ಸಂಪುಟದ ಪ್ರಮುಖ ಸಚಿವರ ನಡುವಿನ ಸಭೆಯ ಕುರಿತಾದ ದಾಖಲೆಗಳನ್ನು ಯಾಕೆ ಕಾಯ್ದಿಡಲಿಲ್ಲ ಎಂಬ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್, ಈ ಬಗ್ಗೆ ಪ್ರಧಾನ ಮಂತ್ರಿಯೇ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

2008ರ ಮೇ 29ರಂದು ಉಭಯ ನಾಯಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಸ್ಪೆಕ್ಟ್ರಂ (ತರಂಗಗುಚ್ಛ) ಹಂಚಿಕೆಯ ಕುರಿತು ಎರಡೂ ಸಚಿವರು 'ಒಪ್ಪಂದ'ಕ್ಕೆ ಬಂದಿದ್ದಾರೆ ಮತ್ತು ಈ ನಿರ್ಧಾರವನ್ನು ಸ್ಪೆಕ್ಟ್ರಂ ಪರವಾನಗಿ ವಿತರಣೆಯಾದ ನಾಲ್ಕು ತಿಂಗಳ ಬಳಿಕ ಕೈಗೊಳ್ಳಲಾಗಿದೆ ಎಂದು ಪ್ರಧಾನಿಗೆ ತಿಳಿಸಿದ್ದಾರೆ ಎಂಬುದು ಬಿಜೆಪಿ ಆರೋಪ.

ಹಿರಿಯ ಕಾಂಗ್ರೆಸ್ ನಾಯಕರೂ ಇದರಲ್ಲಿ ಭಾಗಿಯಾಗಿರುವುದು ಈಗೀಗ ಬೆಳಕಿಗೆ ಬರತೊಡಗಿದೆ ಎಂದ ಅವರು, ಭವಿಷ್ಯದಲ್ಲಿ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕಿದ್ದರೆ ಅವುಗಳನ್ನು ಹರಾಜು ಹಾರಬೇಕು, ಆದರೆ ಹಿಂದೆ ವಿತರಿಸಲಾದವುಗಳು ಆಗಿ ಹೋದ ಸಂಗತಿ, ಅದರ ಬಗ್ಗೆ ಏನೂ ಮಾಡಬಾರದೆಂದು ಚಿದಂಬರಂ ಅವರು ಪ್ರಧಾನಿಗೆ 2008ರ ಜನವರಿ ತಿಂಗಳಲ್ಲಿ ಸಲಹೆ ನೀಡಿದ್ದೇಕೆ ಎಂದು ಪ್ರಶ್ನಿಸಿದರು.

ಚಿದಂಬರ ಸಾಹೇಬ್ರು ತಪ್ಪು ಮಾಡಿಲ್ಲ: ಸಿಬಲ್
ಈ ಮಧ್ಯೆ, ಚಿದು ಅವರನ್ನು ಸಮರ್ಥಿಸಿರುವ ಕೇಂದ್ರ ಟೆಲಿಕಾಂ/ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಕಪಿಲ್ ಸಿಬಲ್, "2ಜಿ ತರಂಗಗುಚ್ಛ ಹಂಚಿಕೆಯಲ್ಲಿ ಚಿದಂಬರಂ ಸಾಹೇಬ್ರ ಪಾತ್ರ ಏನೇನೂ ಇಲ್ಲ. ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಕುತಂತ್ರ" ಎಂದು ಆರೋಪಿಸಿದರು.

ಚಿದಂಬರಂ ಮತ್ತು ಎ.ರಾಜಾ ನಡುವಿನ ಸಭೆಯ ಅಂಶಗಳನ್ನು ದಾಖಲಿಸಲಾಗಿಲ್ಲ. ಯಾಕೆಂದರೆ, ಅದು ಅಗತ್ಯವೇ ಇರಲಿಲ್ಲ. ಚಿದಂಬರಂ ಏನೇ ನಿರ್ಧಾರ ಕೈಗೊಂಡಿದ್ದರೂ ಬೇರೆಯವರೊಂದಿಗೆ ಮಾತುಕತೆ ನಡೆಸಿಯೇ ನಿರ್ಣಯಿಸುತ್ತಿದ್ದರು ಎಂದವರು ಸಮರ್ಥಿಸಿಕೊಂಡರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ