ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಪುಟದಿಂದ ಚಿದು, ಸಿಬಲ್ ಕೈಬಿಡಿ: ಬಿಜೆಪಿ ಒತ್ತಾಯ (BJP | Cabinet reshuffle | Central govt | Manmohan Singh)
ಅವ್ಯವಹಾರ ಆರೋಪಗಳನ್ನು ಎದುರಿಸುತ್ತಿರುವ ಗೃಹ ಸಚಿವ ಪಿ. ಚಿಂದಬರಂ ಹಾಗೂ ದೂರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್‌ರನ್ನು ಕೇಂದ್ರ ಸಂಪುಟದಿಂದ ಕೈಬಿಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂದು ಅಥವಾ ನಾಳೆ ಸಂಪುಟ ಪುನರ್ರಚನೆಯಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಬಿಜೆಪಿ ಇಂತಹದೊಂದು ಬೇಡಿಕೆಯಿರಿಸಿದೆ. ಪ್ರಧಾನಿ ತಮ್ಮಷ್ಟಕ್ಕೆ ಶುದ್ಧ ಹಸ್ತರೆನಿಸಿಕೊಂಡಿದ್ದಾರೆ. ಆದರೆ ಸಂಪುಟ ಸಚಿವರೆಲ್ಲರು ಭ್ರಷ್ಟರಾಗಿದ್ದಾರೆ. ಹೀಗಾಗಿ ಅವರಿಗೆಲ್ಲ ಹೊರಹೋಗುವ ದಾರಿ ತೋರಿಸಬೇಕಾಗಿದೆ ಎಂದು ಬಿಜೆಪಿ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಲ್ಲರಿಗೂ ತಿಳಿದಂತೆ 1.76 ಲಕ್ಷ ಕೋಟಿ ರೂಪಾಯಿಗಳ 2ಜಿ ಸ್ಪೆಕ್ಟ್ರಂ ಹಗರಣದ ಸಮಯದಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದರು. ಮತ್ತೊಬ್ಬ ಸಚಿವ ಎ. ರಾಜಾ ಈಗಾಗಲೇ ಸಂಪುಟದಿಂದ ಹೊರಗಿದ್ದಾರೆ. ಆದರೆ ಹಗರಣದಲ್ಲಿ ಭಾಗಿಯಾಗಿರುವ ಚಿದಂಬರಂ ಇನ್ನೂ ಸಂಪುಟದಲ್ಲಿದ್ದಾರೆ. ಹೀಗಾಗಿ ಉಚಿತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ದೇಶ ಬಯಸುತ್ತಿದೆ ಎಂದು ಹೇಳಿದರು.

ಸಿಬಲ್ ವಿರುದ್ಧ ಆರೋಪ ಟೀಕೆ ಮುಂದುವರಿಸಿದ ಶಹನವಾಜ್, ಶಾಸಗಿ ಸಂಸ್ಥೆಯೊಂದು ಪ್ರತಿ ವಲಯಕ್ಕೆ 50 ಕೋಟಿ ರೂಪಾಯಿಗಳಂತೆ 650 ಕೋಟಿ ರೂಪಾಯಿಗಳ ದಂಡ ಶುಲ್ಕ ಪಾವತಿಸಬೇಕಾಗಿದೆ. ಆದರೆ ಸಿಬಲ್ ಅದನ್ನು ಪ್ರತಿ ವಲಯಕ್ಕೆ 5 ಕೋಟಿ ರೂಪಾಯಿಗಳಿಗೆ ಇಳಿಸಿದ್ದಾರೆ. ಅವರಿಗೆ ಅಂತಹ ಅಧಿಕಾರವನ್ನಾದರೂ ನೀಡದವರು ಯಾರು? ಎಂದು ಪ್ರಶ್ನಿಸಿದ ಅವರು ಸಂಪುಟದಿಂದ ಕಳಂಕಿತರನ್ನು ಕೈಬಿಡುವಂತೆ ಆಗ್ರಹಿಸಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇಂದು ವಿಸ್ತರಣೆ ಅಸಂಭವ...
ಏತನ್ಮಧ್ಯೆ ಸಂಪುಟ ಪುನರ್‌ರಚನೆ ಸೋಮವಾರ ನಡೆಯುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಮುಂದಿನೆರಡು ದಿನಗಳಿಗೆ ಮುಂದೂಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಪುಟದಿಂದ ಯಾರನ್ನು ಕೈಬಿಡಬೇಕು? ಯಾರನ್ನು ಮುಂದುವರಿಸಬೇಕು? ಎಂಬುದರ ಕುರಿತಾಗಿ ಮೊದಲ ಸುತ್ತಿನ ಮಾತುಕತೆ ನಡೆದಿದೆ. ಆದರೆ ಎ. ಕೆ. ಆಂಟನಿ, ಎಸ್. ಎಮ್. ಕೃಷ್ಣ, ಪ್ರಣಬ್ ಮುಖರ್ಜಿ ಹಾಗೂ ಚಿದಂಬರಂ ಖಾತೆಗಳು ಬದಲಾಗುವ ಸಾಧ್ಯತೆ ಕಡಿಮೆಯಾಗಿದೆ.

ಕೆಲವು ಸಚಿವರ ರಾಜೀನಾಮೆಯಿಂದಾಗಿ ತೆರವಾಗಿರುವ ಖಾತೆಗಳ ಭರ್ತಿ ಹಾಗೂ ಕೆಲವರಿಗೆ ಭಡ್ತಿ ಹಿನ್ನಲೆಯಲ್ಲಿ 10ರಿಂದ 12 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದರೆ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಕ್ಕಿಬಿದ್ದಿರುವ ಡಿಎಮ್‌ಕೆ ಪಕ್ಷದ ದಯಾನಿಧಿ ಮಾರನ್ ಹಾಗೂ ಎ. ರಾಜಾ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಪರ್ಯಾಯ ನಾಯಕರರನ್ನು ಕರುಣಾನಿಧಿ ಸೂಚಿಸದಿರುವ ಹಿನ್ನಲೆಯಲ್ಲಿ ಈ ಸ್ಥಾನಕ್ಕೆ ಸದ್ಯಕ್ಕೆ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆ ಕಡಿಮೆಯಾಗಿದೆ.
ಇವನ್ನೂ ಓದಿ