ಬಾಲಕಿಯ ಮೃತದೇಹವು ಎಸ್ಟೇಟೊಂದರ ಸಮೀಪದ ಕೊಳದಲ್ಲಿ ಪತ್ತೆಯಾಗಿತ್ತು. ಈ ಬಾಲಕನು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಅದನ್ನು ವಿರೋಧಿಸಿದ ಬಾಲಕಿ ಕೊಳಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಇಡುಕ್ಕಿ ಎಸ್‌ಪಿ ಜಾರ್ಜ್ ವರ್ಗೀಸ್ ತಿಳಿಸಿದ್ದಾರೆ.
ಶಾಲೆ ಮುಗಿಸಿಕೊಂಡು ಆಟೋರಿಕ್ಷಾದಲ್ಲಿ ಬರುತ್ತಿದ್ದ ಬಾಲಕಿಗೆ ಆಮಿಷವೊಡ್ಡಿ ಕೊಳದ ಬಳಿ ಕರೆದುಕೊಂಡು ಬಂದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾಲಕ ಮನೆಯಲ್ಲಿ ಅಶ್ಲೀಲ ವೀಡಿಯೋ ನೋಡಿದ್ದರಿಂದಾಗಿ ಈ ಕೃತ್ಯವನ್ನು ಎಸಗಿದ್ದಾನೆ. ಬಂಧಿತ ಬಾಲಕನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.