ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲು ದುರಂತ: ನಾನೇನೂ ಮಂತ್ರಿಯಲ್ಲ, ಹೋಗಲ್ಲ ಎಂದ ಸಹ ಮಂತ್ರಿ (Railway Accident | Mamata Banerjee | Mukul Roy | Railway Minister)
ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದರಿಂದ ಆ ಸ್ಥಾನವು ತೆರವಾಗಿದ್ದು, ಭಾನುವಾರ ಉತ್ತರ ಪ್ರದೇಶದಲ್ಲಿ ಹಲವರ ಸಾವಿಗೆ ಕಾರಣವಾದ ರೈಲು ಹಳಿ ತಪ್ಪಿದ ಘಟನಾ ಸ್ಥಳಕ್ಕೆ 'ನಾನು ಹೋಗುವುದಿಲ್ಲ, ನಾನೇನೂ ರೈಲ್ವೇ ಮಂತ್ರಿಯಲ್ಲ' ಎಂದು ರೈಲ್ವೇ ರಾಜ್ಯ ಸಚಿವರು ಗುರುಗುಟ್ಟಿದ್ದರಿಂದ ನಮ್ಮನ್ನು ಆಳುವವರ ಮನಸ್ಥಿತಿಯೂ ಬಯಲಾಗಿದ್ದು, ಇದೀಗ ಕೇಂದ್ರ ಸಂಪುಟ ಪುನಾರಚನೆಯನ್ನು ಆದಷ್ಟು ತ್ವರಿತಗೊಳಿಸುವಂತೆ ಪ್ರಧಾನಿಯ ಮೇಲೆ ಒತ್ತಡ ಹೇರಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾನುವಾರ ಹೌರಾ-ಕಲ್ಕಾ ಮೇಲ್ ರೈಲು ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿ 65ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ನಾನು ಅಲ್ಲಿಂದ 1000 ಕಿ.ಮೀ. ದೂರದಲ್ಲಿದ್ದೇನೆ. ನಾನೇನೂ ರೈಲ್ವೇ ಮಂತ್ರಿಯೂ ಅಲ್ಲ. ಪ್ರಧಾನಿ ಹೇಳಿದರೆ ಮಾತ್ರವೇ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ಮುಕುಲ್ ರಾಯ್ ಹೇಳಿದ್ದರು. ಇದೀಗ ಘಟನಾ ಸ್ಥಳಕ್ಕೆ ತೆರಳುವಂತೆ ಸ್ವತಃ ಪ್ರಧಾನಿಯೇ ಸೂಚನೆ ನೀಡಿದ್ದಾರೆ.

ಕೋಲ್ಕತಾದಲ್ಲಿದ್ದುಕೊಂಡೇ ಕೇಂದ್ರ ರೈಲ್ವೇ ಖಾತೆಯನ್ನು ನಿಭಾಯಿಸುತ್ತಿದ್ದ 'ಪಾರ್ಟ್ ಟೈಂ' ರೈಲ್ವೇ ಸಚಿವರಿದ್ದರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ರೈಲ್ವೇ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಇಚ್ಛಿಸದ ಅವರು, ತಮ್ಮದೇ ಪಕ್ಷದ ಮುಕುಲ್ ರಾಯ್ ಅವರನ್ನು ಹಿಂದೆಯೇ ರಾಜ್ಯ ಸಚಿವರಾಗಿ ಸೇರಿಸಿಕೊಂಡಿದ್ದರು.

ಈ ಹಿಂದೆಯೂ 'ಸಮ್ಮಿಶ್ರ ರಾಜಕಾರಣ'ದ ಒತ್ತಡದಿಂದಾಗಿ ಪ್ರಧಾನಿಯವರು ಪ್ರಮುಖ ಖಾತೆಗಳನ್ನು ಮಿತ್ರಪಕ್ಷಗಳಿಗೆ ಕೊಡಬೇಕಾದ ಸಾಕಷ್ಟು ಅನಿವಾರ್ಯತೆಗಳಿದ್ದವು. ಅವುಗಳಲ್ಲಿಯೂ ದೇಶದ ಆದಾಯದ ಪ್ರಮುಖ ಖಾತೆಗಳಾದ ರೈಲ್ವೇ (ಹಿಂದೆ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ, ಈಗ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್), ಟೆಲಿಕಾಂ (ಡಿಎಂಕೆ), ಕೃಷಿ (ಶರದ್ ಪವಾರ್ ಅವರ ಎನ್‌ಸಿಪಿ) ಮುಂತಾದವು ಪ್ರಾದೇಶಿಕ ಪಕ್ಷಗಳ ಕೈಗೆ ಹೋಗಿದ್ದವು.

ಮಿತ್ರ ಪಕ್ಷಗಳ ನಿಯಂತ್ರಣದಲ್ಲೇ ಇದ್ದ ರೈಲ್ವೇ ಖಾತೆಯು ತಾನೇ ನಿಗದಿಪಡಿಸಿದ್ದ ಕಾರ್ಪೊರೇಟ್ ಸುರಕ್ಷತಾ ಯೋಜನೆಯ (2003-2013) ಗುರಿಯನ್ನೂ ಸಾಧಿಸುವಲ್ಲಿ ವಿಫಲವಾಗಿದ್ದು, ಇದರಲ್ಲಿ ಹಲವು ವರ್ಷಗಳಿಂದ ಪ್ರಯಾಣಿಕರ ಸುರಕ್ಷತೆ ಎಂಬುದು ನಿರ್ಲಕ್ಷ್ಯಕ್ಕೀಡಾಗಿತ್ತು. ಸಿಗ್ನಲ್ ಉಪಕರಣಗಳ ಆಧುನೀಕರಣ, ಡಿಕ್ಕಿ-ನಿರೋಧಕ ಸಾಧನಗಳ ಸ್ಥಾಪನೆ, ರೈಲ್ವೇ ಆಸ್ತಿಪಾಸ್ತಿಯ ರಕ್ಷಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಖಾಲಿ ಹುದ್ದೆ ತುಂಬುವುದೇ ಮೊದಲಾದ ಕ್ರಮಗಳಲ್ಲಿ ರೈಲ್ವೇ ಇಲಾಖೆ ತೀರಾ ಹಿಂದೆ ಬಿದ್ದಿದೆ ಎಂಬುದನ್ನು ಸಿಎಜಿ ಕೂಡ ತನ್ನ ವರದಿಯಲ್ಲಿ ಪ್ರಮುಖವಾಗಿ ಬಿಂಬಿಸಿತ್ತು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ