ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಸ್ಪತ್ರೆಗೆ ರಾಹುಲ್ ಭೇಟಿಗೆ ಭದ್ರತೆ: ಚಿಕಿತ್ಸೆ ಸಿಗದೆ ಪೊಲೀಸ್ ಸಾವು (Rahul Gandhi | Kalka Mail Mishap | Kanpur | Lala Lajpath Roy Hospital)
PTI
ಕಳೆದ ವರ್ಷ ಪ್ರಧಾನ ಮಂತ್ರಿಯ ಭದ್ರತಾ ವ್ಯವಸ್ಥೆಯಿಂದಾಗಿ ಅಮಾನ್ ಎಂಬ 10 ವರ್ಷದ ಬಾಲಕನ ಸಾವು ದೇಶಾದ್ಯಂತ ಸುದ್ದಿ ಮಾಡಿತ್ತು. ಈಗ ಕಾಂಗ್ರೆಸ್‌ನ ಭಾವೀ ಪ್ರಧಾನಿ ರಾಹುಲ್ ಗಾಂಧಿ ಭದ್ರತೆಯ ಸರದಿ. ಕಲ್ಕಾ ಮೇಲ್ ರೈಲು ದುರಂತದಲ್ಲಿ ಗಾಯಗೊಂಡವರನ್ನು ಮಾತನಾಡಿಸಲೆಂದು ರಾಹುಲ್ ಗಾಂಧಿ ಅವರು ಮಂಗಳವಾರ ಇಲ್ಲಿನ ಲಾಲಾ ಲಜಪತ ರಾಯ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಭಾರೀ ಭದ್ರತೆಯಿಂದಾಗಿ, ತುರ್ತು ಚಿಕಿತ್ಸೆ ಸಿಗದ ಪೊಲೀಸ್ ಒಬ್ಬರು ಆಸ್ಪತ್ರೆ ಗೇಟಿನಲ್ಲಿ ಮೃತಪಟ್ಟಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಳೆದ ವರ್ಷದ ಜುಲೈ 3ರಂದು ಇದೇ ಊರಿನಲ್ಲಿ ಅಮಾನ್ ಎಂಬ ಬಾಲಕ ಆಟವಾಡುತ್ತಾ, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ. ಆದರೆ ಪ್ರಧಾನಮಂತ್ರಿ ಮನಮೋಹನ್ ಭೇಟಿ ಪ್ರಯುಕ್ತ ಭಾರೀ ಭದ್ರತೆ ಏರ್ಪಡಿಸಿದ್ದ ಕಾರಣದಿಂದಾಗಿ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಈ ಬಾಲಕನಿಗೆ ಸಕಾಲದಲ್ಲಿ ಆಸ್ಪತ್ರೆ ತಲುಪುವುದು ಸಾಧ್ಯವಾಗದೆ ದಾರಿಯಲ್ಲೇ ಮೃತಪಟ್ಟಿದ್ದ.

ಮಂಗಳವಾರ ಬಂದಿರುವ ವರದಿಗಳ ಪ್ರಕಾರ, ಅತ್ತಾರ ಪೊಲೀಸ್ ಠಾಣೆಯ 40ರ ಹರೆಯದ ಕಾನ್‌ಸ್ಟೇಬಲ್ ಧರ್ಮೇಂದ್ರ ಕುಮಾರ್ ಎಂಬವರು ಫತೇಪುರದ ಭಿಂಡ್ಕಿ ಎಂಬಲ್ಲಿ ಮಂಗಳವಾರ ಮುಂಜಾನೆ ನಡೆದ ಭೀಕರ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ ರಾಹುಲ್ ಗಾಂಧಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳ ಭೇಟಿಗೆ ಬಂದಿದ್ದರಿಂದ, ಸುಮಾರು 45 ನಿಮಿಷಗಳ ಕಾಲ ಆಸ್ಪತ್ರೆ ಗೇಟಿನಲ್ಲೇ ಕಾಯಬೇಕಾಯಿತು.

ರಾಹುಲ್ ಅವರ ಭದ್ರತಾ ಸಿಬ್ಬಂದಿಗಳು ಧರ್ಮೇಂದ್ರ ಅವರನ್ನು ತುರ್ತು ನಿಗಾ ಘಟಕಕ್ಕೆ ಕರೆದೊಯ್ಯಲು ಅವಕಾಶ ನೀಡಲಿಲ್ಲ ಎಂದು ಸಹ-ಪೊಲೀಸರು ಆರೋಪಿಸಿದ್ದಾರೆ. ಆದರೆ ರಾಹುಲ್ ಬಂದು ಹೋದ ಬಳಿಕವಷ್ಟೇ ಅವರಿಗೆ ಒಳಗೆ ಕರೆದೊಯ್ಯಲು ಅವಕಾಶ ನೀಡಲಾಗಿತ್ತು. ಅಷ್ಟು ಹೊತ್ತಿಗೆ ಧರ್ಮೇಂದ್ರ ಪ್ರಾಣಪಕ್ಷಿ ಹಾರಿಹೋಗಿತ್ತು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ