ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಮೇಲಿನ ನಿಧಿ ದುರುಪಯೋಗ ಕೇಸು ರದ್ದು (Anna Hazare | Social activist | Hemant Patil | Misappropriation funds)
PTI
ಭ್ರಷ್ಟಾಚಾರ ವಿರುದ್ಧ ಸಮರ ಸಾರುತ್ತಾ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ನಡುಗಿಸಿದ್ದ ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಮೇಲೂ ಭ್ರಷ್ಟಾಚಾರ ಕೇಸುಗಳನ್ನು ಹಾಕಿಸಲಾಗಿರುವುದು ನಿಮಗೆ ಗೊತ್ತೇ ಇದೆ. ಇದೀಗ ಹಿಂದ್ ಸ್ವರಾಜ್ ಟ್ರಸ್ಟ್‌ನಲ್ಲಿ ನಿಧಿಯ ದುರುಪಯೋಗ ಮಾಡಿದ್ದಾರೆ ಎಂಬ ಆರೋಪಗಳಿಂದ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ.

ಹೇಮಂತ್ ಪಾಟೀಲ್ ತಾವು ನೀಡಿದ್ದ ದೂರನ್ನು ಹಿಂಪಡೆದ ಬಳಿಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ಟಿ. ಘಾಡ್ಗೆ
ನೇತೃತ್ವದ ಪೀಠವು ಅಣ್ಣಾ ಹಜಾರೆ ನಿರಾಪರಾಧಿ ಎಂದು ಘೋಷಿಸಿ ತೀರ್ಪು ನೀಡಿತು. ಹಜಾರೆ ಪರ ಹರ್ಷದ್ ನಿಂಬಾಳ್ಕರ್ ಮತ್ತು ಮಿಲಿಂದ್ ಪವಾರ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಆದರೆ, ಅಣ್ಣಾ ಹಜಾರೆಯವರ ಇಳಿ ವಯಸ್ಸು, ಆರೋಗ್ಯ ಹಾಗೂ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆದಿರುವುದನ್ನು ಪರಿಗಣಿಸಿ, ಕಳೆದ 2005ರಲ್ಲಿ ದಾಖಲಿಸಲಾದ ದೂರನ್ನು ಹಿಂದಕ್ಕೆ ಪಡೆದಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.

ತಮ್ಮೂರಾದ ರಾಲೆಗಣ ಸಿದ್ಧಿಯಲ್ಲಿ ತಮ್ಮ 61ನೇ ಜನ್ಮದಿನವನ್ನು ಆಚರಿಸಿಕೊಳ್ಳಲೆಂದು ಹಜಾರೆ ಅವರು ಈ ಟ್ರಸ್ಟ್‌ನಿಂದ 2.2 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪಾಟೀಲ್ ಆರೋಪಿಸಿದ್ದರು.

ಆದರೆ, ಫಿರ್ಯಾದಿದಾರರ ಆರೋಪಗಳನ್ನು ತಳ್ಳಿಹಾಕಿದ್ದ ಅಣ್ಣಾ ಹಜಾರೆ, ತಮಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲೇ ನಂಬಿಕೆಯಿಲ್ಲ. ಟ್ರಸ್ಟ್‌ನಲ್ಲಿ ಹಣದ ಪ್ರತಿಯೊಂದು ವ್ಯವಹಾರಕ್ಕೂ ಲೆಕ್ಕವಿರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಇವನ್ನೂ ಓದಿ