ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ: ಮತ್ತೆ ಉಗ್ರರ ಕೆಂಗಣ್ಣು, ಸರಣಿ ಸ್ಫೋಟ, ಹಲವರು ಸಾವು (Mumbai Blast | Terror | Pakistan | Zaveri Bazar | Kabutar Khana)
PR

ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಈಗಾಗಲೇ ತತ್ತರಿಸಿರುವ ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೆ ಮೂರು ಕಡೆ ನಿಗೂಢ ಸ್ಫೋಟಗಳು ನಡೆದಿದ್ದು. ಸುಮಾರು 13ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಆರಂಭಿಕ ಮಾಹಿತಿಗಳು ತಿಳಿಸಿದ್ದು, ಇದು ಭಯೋತ್ಪಾದನಾ ಕೃತ್ಯ ಎಂಬುದನ್ನು ಕೇಂದ್ರ ಗೃಹ ಸಚಿವಾಲಯವು ಖಚಿತಪಡಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮೂರು ಕಡೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಈ ಸ್ಫೋಟ ನಡೆಸಲಾಗಿದ್ದು, ಇದರಲ್ಲಿ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂಬುದನ್ನು ಕೇಂದ್ರ ಗೃಹ ಇಲಾಖೆ ತಿಳಿಸಿರುವುದರೊಂದಿಗೆ, ಮುಂಬೈ ಮೇಲೆ ಮತ್ತೆ ಉಗ್ರರ ಕೆಂಗಣ್ಣು ಬೀರಿರುವುದು ಸ್ಪಷ್ಟವಾಗಿದೆ. ಒಂದು ಕಡೆ ಎಸ್ಟೀಮ್ ಕಾರೊಂದರಲ್ಲಿ ಇರಿಸಲಾಗಿದ್ದ ಬಾಂಬು ಸ್ಫೋಟಗೊಂಡಿದ್ದರೆ, ಇನ್ನೊಂದೆಡೆ ಬೈಕಿನಲ್ಲಿ ಬಾಂಬ್ ಸ್ಫೋಟಿಸಿದೆ.

ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಜನಜಂಗುಳಿಯಿರುವ ಚರ್ನಿ ರೋಡ್ ಪ್ರದೇಶದ ಝವೇರಿ ಬಜಾರ್, ಒಪೆರಾ ಹೌಸ್‌ನ ಪ್ರಸಾದ್ ಚೇಂಬರ್‌ನಲ್ಲಿ ಹಾಗೂ ದಾದರ್‌ನ ಕಬೂತರ್‌ಖಾನಾ ಪ್ರದೇಶಗಳಲ್ಲಿ ಬುಧವಾರ ಸಂಜೆ ಏಳೂ ಕಾಲು ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದೆ ಎಂದು ಆರಂಭಿಕ ಮಾಹಿತಿಗಳು ತಿಳಿಸಿದ್ದು, ಕನಿಷ್ಠ ಪಕ್ಷ 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂರೂ ಪ್ರದೇಶಗಳು ಸಂಜೆ ವೇಳೆಗೆ ಅತ್ಯಂತ ಜನಜಂಗುಳಿಯಿಂದ ಕೂಡಿರುತ್ತದೆ. ಈ ಮೂರು ಪ್ರದೇಶಗಳು ವಾಣಿಜ್ಯ ನಗರಿಯ ವ್ಯಾಪಾರದ ಕೇಂದ್ರ ಭಾಗಗಳು. ಝವೇರಿ ಬಜಾರ್ ಅಂತೂ ಚಿನ್ನಾಭರಣಗಳ ಮಳಿಗೆಗಳಿಗೆ ಪ್ರಸಿದ್ಧಿ ಪಡೆದಿದೆ.

ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ವರದಿಯಾಗಿಲ್ಲ. ಉಗ್ರಗಾಮಿಗಳ ಕೃತ್ಯಗಳು ನಿಯಂತ್ರಣದಲ್ಲಿವೆ ಎಂದು ಹೇಳಿಕೆ ನೀಡಿದ್ದರು.

ಎಲ್ಲೆಡೆ ಕಟ್ಟೆಚ್ಚರ
ಈಗಾಗಲೇ ವಿಶೇಷ ಭದ್ರತಾ ದಳಗಳನ್ನು (ಎನ್ಎಸ್‌ಜಿ) ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ರವಾನಿಸಲಾಗಿದ್ದು, ಪೊಲೀಸರು ನಗರದೆಲ್ಲೆಡೆ ಕಟ್ಟೆಚ್ಚರ ಘೋಷಿಸಿದ್ದಾರೆ. ಇದೇ ವೇಳೆ, ದೇಶದ ಇತರ ಪ್ರಮುಖ ಮಹಾನಗರಗಳಾದ ದೆಹಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮುಂತಾದೆಡೆಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿದೆ.

ಎಲ್ಲ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿದ್ದು, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಸಂಪರ್ಕಿಸಿ ಮಾತುಕತೆಯಲ್ಲಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ