ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಭ್ರಷ್ಟ ಸಾಮ್ರಾಜ್ಯದ ಪ್ರಾಮಾಣಿಕ ದೊರೆ: ಸಿದ್ದು (Navjot Singh Sidhu | Manmohan Singh | Corrupt regime honest king | UPA)
ಹಣದುಬ್ಬರ ಅಥವಾ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾದ ಪ್ರಧಾನಿ ಮನಮೋಹನ್ ಸಿಂಗ್, "ಭ್ರಷ್ಟ ಸಾಮ್ರಾಜ್ಯದ ಪ್ರಾಮಾಣಿಕ ದೊರೆ" ಎಂದು ದೆಹಲಿಯಲ್ಲಿ ಪಕ್ಷದ ಬಲವರ್ಧನೆಯ ಹೊಣೆಯನ್ನು ಹೊತ್ತಿರುವ ಪಂಜಾಬ್‌ನ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ವರ್ಣಿಸಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ಹಣದುಬ್ಬರ ದರ ಶೇ.9ಕ್ಕೆ ಏರಿಕೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಕೂಡಾ ಹಣದುಬ್ಬರ ಇಷ್ಟು ಗರಿಷ್ಠ ಮಟ್ಟಕ್ಕೆ ಏರಿರಲಿಲ್ಲ ಎಂದು ಸಿದ್ಧು ಆರೋಪಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಣದುಬ್ಬರ ದರ ಏರಿಕೆಯಿಂದ ಶ್ರೀಮಂತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಭ್ರಷ್ಟ ಸಾಮ್ರಾಜ್ಯದ ಪ್ರಾಮಾಣಿಕ ದೊರೆಯಾಗಿದ್ದಾರೆ ಎಂದು ಸುದ್ದಿಗಾರರಿಗೆ ಸಿದ್ಧು ತಿಳಿಸಿದರು.

ಸರಕಾರದ ಪ್ರಾಯೋಜಿತ ಅಭಿವೃದ್ಧಿ ಪರ ಯೋಜನೆಗಳು ಬಡ ಜನತೆಗೆ ತಲುಪುತ್ತಿಲ್ಲ. ಹಣದುಬ್ಬರ ದರ ಮತ್ತು ಭ್ರಷ್ಟಾಚಾರ ವ್ಯವಸ್ಥೆ ಜನಸಾಮಾನ್ಯರ ಬೆನ್ನೆಲುಬು ಮುರಿದಿವೆ ಎಂದು ಮಾಜಿ ಕ್ರಿಕೆಟಿಗ ಸಿದ್ಧು ಕಿಡಿಕಾರಿದ್ದಾರೆ.

ದೆಹಲಿಯ ಬಿಜೆಪಿ ಘಟಕದ ಗತ ವೈಭವವನ್ನು ಮರಳಿಸುವ ನಿಟ್ಟಿನಲ್ಲಿ ತನಗೆ ಜವಾಬ್ದಾರಿ ಒಪ್ಪಿಸಿರುವುದು ಗೌರವದ ಸಂಗತಿಯಾಗಿದೆ. ನಗರದ ಪ್ರತಿಯೊಂದು ಬಡಾವಣೆಗಳಿಗೆ ಭೇಟಿ ನೀಡಿ, ಪಕ್ಷಕ್ಕೆ ಹೆಚ್ಚಿನ ಚೇತರಿಕೆ ನೀಡಲು ನೆರವಾಗುತ್ತೇನೆ ಎಂದು ತಿಳಿಸಿರುವ ಅವರು, ದೆಹಲಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸೋಲು ಕಂಡಿರುವ ಬಿಜೆಪಿ ವೈಫಲ್ಯದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ರಾಜಧಾನಿಯಲ್ಲಿ ಪಕ್ಷ ಸೋಲು ಕಂಡಿದೆ. ಆದರೆ, ಸಂಪೂರ್ಣವಾಗಿ ನಶಿಸಿ ಹೋಗಿಲ್ಲ ಎಂದು ಉತ್ತರಿಸಿದರು.

ಚುನಾವಣೆಗಳ ಸೋಲಿನ ಬಗ್ಗೆ ಚಿಂತಿಸಲು ಇದು ಸೂಕ್ತ ಸಮಯವಲ್ಲ. ಬದಲಾಗಿ ಪಕ್ಷದ ನಾಯಕರು ಆತ್ಮಶೋಧನೆ ಮಾಡಿಕೊಳ್ಳುವುದರೊಂದಿಗೆ ಯುಪಿಎ ಸರಕಾರದ ವೈಫಲ್ಯಗಳನ್ನು ಬಂಡವಾಳವನ್ನಾಗಿಸಿಕೊಳ್ಳಬೇಕಾಗಿದೆ ಎಂದರು.

ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ವಿಜೇಂದ್ರಾ ಗುಪ್ತಾ ಮಾತನಾಡಿ, ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಯುಪಿಎ ಸರಕಾರ ದೀಕ್ಷಿತ್ ಅವರನ್ನು ಗುರಾಣಿಯಂತೆ ರಕ್ಷಿಸುತ್ತಿದೆ ಎಂದು ಆರೋಪಿಸಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ