ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಭಯೋತ್ಪಾದಕರಿಗೆ 13, 26 ಅಂದ್ರೆ ಅದೇಕೆ ಅಷ್ಟು ಇಷ್ಟ? (Ahmedabad | Blasts Dadar | West German Bakery | Blast Mumbai | Blasts Opera House)
ಈ ಭಯೋತ್ಪಾದಕರಿಗೆ 13, 26 ಅಂದ್ರೆ ಅದೇಕೆ ಅಷ್ಟು ಇಷ್ಟ?
ನವದೆಹಲಿ, ಗುರುವಾರ, 14 ಜುಲೈ 2011( 13:57 IST )
PTI
ಭಾರತದ ಆರ್ಥಿಕತೆಯ ಕೇಂದ್ರ ಬಿಂದು ಮತ್ತು ಬಾಲಿವುಡ್ ನೆಲೆಯಾಗಿರುವ ಮುಂಬೈನಲ್ಲಿ ನಡೆದ ಸ್ಫೋಟ ಪ್ರಕರಣವನ್ನು, ಕಳೆದ ಕೆಲ ವರ್ಷಗಳ ಹಿಂದೆ ದೇಶದ ವಿವಿಧ ನಗರಗಳಲ್ಲಿ ನಡೆದ ಹಲವು ಸ್ಫೋಟ ಪ್ರಕರಣಗಳಿಗೆ ಹೋಲಿಸಿದಲ್ಲಿ ಕೇವಲ ಎರಡು ದಿನಾಂಕಗಳ ಹೋಲಿಕೆಯಾಗುತ್ತಿರುವುದು ಕಂಡುಬಂದಿದೆ.
ದೇಶದ ವಿವಿಧ ನಗರಗಳಲ್ಲಿ ನಡೆದ ಬಹುತೇಕ ಸ್ಫೋಟದ ಪ್ರಕರಣಗಳು, ತಿಂಗಳಿನ 13 ಅಥವಾ 26ನೇ ದಿನಾಂಕದಂದು ನಡೆದಿರುವುದು ವಿಶೇಷತೆಯಾಗಿದೆ.
ಜೈಪುರ್ ನಗರದಲ್ಲಿ ಕೇವಲ 12 ನಿಮಿಷಗಳ ಅಂತರದಲ್ಲಿ ನಡೆದ ಎಂಟು ಸರಣಿ ಬಾಂಬ್‌ಸ್ಫೋಟಗಳು 2008ರ ಮೇ 13 ರಂದು ನಡೆದಿತ್ತು. ಘಟನೆಯಲ್ಲಿ 65 ಮಂದಿ ಸಾವನ್ನಪ್ಪಿದ್ದು, 150 ಮಂದಿ ಗಾಯಗೊಂಡಿದ್ದರು.
ಅದೇ ವರ್ಷ ಅಹ್ಮದಾಬಾದ್ ನಗರದಲ್ಲಿ ಜುಲೈ 26 ರಂದು ಸ್ಫೋಟ ನಡೆದಿತ್ತು. ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
2008ರ ಸೆಪ್ಟೆಂಬರ್ 13 ರಂದು ನವದೆಹಲಿಯಲ್ಲಿ ನಡೆದ ಬಾಂಬ್‌ಸ್ಫೋಟದಲ್ಲಿ, 30 ಮಂದಿ ಮೃತರಾಗಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
2008ರ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ, 166 ಮಂದಿ ಹತರಾಗಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪುಣೆಯ ಜರ್ಮನಿ ಬೇಕರಿಯಲ್ಲಿ ನಡೆದ ಸ್ಫೋಟ ಕೂಡಾ 2010ರ ಫೆಬ್ರವರಿ 13 ರಂದು ನಡೆದಿತ್ತು. ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 45 ಮಂದಿ ಗಾಯಗೊಂಡಿದ್ದರು.