ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಫೋಟ: ಕೇಂದ್ರ ನೀತಿಯೇ ವೈಫಲ್ಯಕ್ಕೆ ಕಾರಣ: ಅಡ್ವಾಣಿ (L.K. Advani | Mumbai | Opera House | Pakistan | Government | Kashmir)
ಸ್ಫೋಟ: ಕೇಂದ್ರ ನೀತಿಯೇ ವೈಫಲ್ಯಕ್ಕೆ ಕಾರಣ: ಅಡ್ವಾಣಿ
ಮುಂಬೈ, ಗುರುವಾರ, 14 ಜುಲೈ 2011( 18:11 IST )
PTI
ಮುಂಬೈ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಗುಪ್ತಚರ ವೈಫಲ್ಯವಿಲ್ಲ. ಆದರೆ ಕೇಂದ್ರ ಸರಕಾರದ ನೀತಿಗಳ ವೈಫಲ್ಯವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಕಟುವಾಗಿ ಟೀಕಿಸಿದ್ದಾರೆ.
ದೇಶದೊಳಗಿನ ಉಗ್ರಗಾಮಿ ಸಂಘಟನೆಗಳಿಗೆ ಅಥವಾ ನೆರೆ ರಾಷ್ಟ್ರಗಳ ಉಗ್ರಗಾಮಿಗಳಿಗೆ ಮುಂಬೈ ಫೇವರಿಟ್ ಸ್ಥಳವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಭಯೋತ್ಪಾದನೆ ವಿರುದ್ಧದ ತನ್ನ ನೀತಿಯನ್ನು ಸ್ಪಷ್ಟಪಡಿಸಬೇಕು. ನಿನ್ನೆ ನಡೆದ ಉಗ್ರರ ದಾಳಿಯ ನಂತರ ಭಯೋತ್ಪಾದನೆ ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕು ಎಂದು ಅಡ್ವಾಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಕೆಲ ದಶಕಗಳಿಂದ ದೇಶದ ಅವಿಭಾಜ್ಯ ಅಂಗವಾದ ಕಾಶ್ಮಿರ ಪ್ರದೇಶವನ್ನು ವಿವಾದಾತ್ಮಕ ಪ್ರದೇಶ ಎಂದು ವಿಶ್ವಕ್ಕೆ ಸಾರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕಾಶ್ಮಿರದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು ಭಯೋತ್ಪಾದನೆಯಲ್ಲ ಎಂದು ಪಾಕಿಸ್ತಾನ ಹಕ್ಕು ಸಾಧನೆ ತೋರುತ್ತಿದೆ ಎಂದು ಎಲ್.ಕೆ.ಅಡ್ವಾಣಿ ಆರೋಪಿಸಿದ್ದಾರೆ.
ಕೇಂದ್ರ ಸರಕಾರ, ಪಾಕ್ ಆಕ್ರಮಿತ ಕಾಶ್ಮಿರದಲ್ಲಿರುವ ಉಗ್ರರ ಶಿಬಿರಗಳನ್ನು ನಾಶಗೊಳಿಸುವರೆಗೆ ಪಾಕಿಸ್ತಾನದೊಂದಿಗಿನ ಮಾತುಕತೆಗಳಿಗೆ ಯಾವುದೇ ರೀತಿಯ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗಳು ಪಾಕಿಸ್ತಾನ ಪ್ರೇರಿತವಾಗಿವೆ. ಭಯೋತ್ಪಾದನೆ ವಿರುದ್ಧ ಕೇಂದ್ರ ಸರಕಾರ ಶೂನ್ಯ ತಾಳ್ಮೆಯನ್ನು ಅನುಸರಿಸಿ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಮುಂಬೈಯಲ್ಲಿ ನಡೆದ ಬಾಂಬ್‌ಸ್ಫೋಟ ಪ್ರಕರಣಗಳಲ್ಲಿ ಇಂಡಿಯನ್ ಮುಜಾಹಿದಿನ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇಂಡಿಯನ್ ಮುಜಾಹಿದಿನ್ ಸಂಘಟನೆ ಸ್ಫೋಟ ನಡೆಸಿದ್ದರೂ ಪಾಕಿಸ್ತಾನ ಬೆಂಬಲ ಪಡೆದೇ ಇಂತಹ ಕೃತ್ಯ ನಡೆಸಿರುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಆರೋಪಿಸಿದ್ದಾರೆ.
ಮುಂಬೈನ ಓಪೆರಾ ಹೌಸ್‌ನಲ್ಲಿ ನಡೆದ ಬಾಂಬ್‌ಸ್ಫೋಟದ ಸ್ಥಳಕ್ಕೆ ಎಲ್.ಕೆ.ಅಡ್ವಾಣಿ ಭೇಟಿ ನೀಡಿ, ಗಾಯಾಳುಗಳನ್ನು ಸಂತೈಸಿದರು.