ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಥಳೀಯರೇ ಅಳವಡಿಸಿದ್ದ ಸಿಸಿಟಿವಿಗೆ ಮೊರೆ ಹೋದ ಪೊಲೀಸರು (CCTVs | Bombed sites | Footage | Opera House | Serial blasts | Mumbai)
PTI
ಬಾಂಬ್ ಸ್ಫೋಟ ನಡೆದ ಸ್ಥಳಗಳಲ್ಲಿ ಸಿಸಿಟಿವಿ ಸೌಲಭ್ಯದ ಕೊರತೆಯಿಂದಾಗಿ ಉಪಯುಕ್ತ ಮಾಹಿತಿ ಪಡೆಯಲು ಪರದಾಡುತ್ತಿರುವ ಪೊಲೀಸರು, ಒಪೆರಾ ಹೌಸ್‌ ಬಳಿಯಿರುವ ನಿವಾಸಿಗಳೇ ಅಳವಡಿಸಿದ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಂಬ್‌ಸ್ಫೋಟ ನಡೆದ ಮೂರು ಸ್ಥಳಗಳಲ್ಲಿ ಯಾವುದೇ ಕ್ಯಾಮರಾಗಳನ್ನು ಅಳಡಿಸದಿರುವುದರಿಂದ, ಸಂಶಯಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಸುಳಿವು ದೊರೆತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಝವೇರಿ ಬಜಾರ್, ಒಪೆರಾ ಹೌಸ್ ಮತ್ತು ದಾದರ್ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿಲ್ಲ. ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಮಾತ್ರ ಕ್ಯಾಮರಾಗಳನ್ನು ಬಳಸಲಾಗುತ್ತದೆ. ಆದರೆ ಸ್ಫೋಟ ನಡೆದ ಸ್ಥಳಗಳು ಜನನಿಬಿಡ ಪ್ರದೇಶಗಳಿಂದ ದೂರವಿರುವುದರಿಂದ, ಸಿಸಿಟಿವಿ ಕ್ಯಾಮರಾಗಳಲ್ಲಿ ಯಾವುದೇ ಚಿತ್ರಗಳು ಸೆರೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಒಪೆರಾ ಹೌಸ್ ಬಳಿಯಿರುವ ಪಂಚರತ್ನ ಸೂಸೈಟಿ ಕಾರ್ಯದರ್ಶಿ ನರೇಶ್ ಮೆಹತಾ ಮಾತನಾಡಿ, ಕಟ್ಟಡದ ಹಿಂಭಾಗದಲ್ಲಿ ಇನ್‌ಫ್ರಾರೆಡ್ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. 15 ದಿನಗಳ ವರೆಗಿನ ಮಾಹಿತಿಯನ್ನು ಕಲೆಹಾಕುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆ ನಿಗ್ರಹ ದಳದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಸ್ಫೋಟದ ಬಗ್ಗೆ ಕೆಲ ಮಹತ್ವದ ಸುಳಿವುಗಳು ಲಭ್ಯವಾಗುವ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ