ದಾದರ್‌ನಲ್ಲಿ ನಡೆದ ಬಾಂಬ್‌ಸ್ಫೋಟ ಭಾರಿ ಭೀಕರವಾಗುವ ಸಾಧ್ಯತೆಗಳಿದ್ದವು. ಆದರೆ. ಉಗ್ರನ ತಪ್ಪು ನಿರ್ಧಾರದಿಂದ ಹಲವು ಜನರ ಜೀವ ಉಳಿಸಲು ಕಾರಣವಾಗಿದೆ.
ಬುಧವಾರದಂದು ದಾದರ್‌ನಲ್ಲಿ ನಡೆದ ಬಾಂಬ್‌ಸ್ಫೋಟದಲ್ಲಿ ಉಗ್ರರು ಬಸ್‌ನಿಲ್ದಾಣದ ಮೇಲ್ಭಾಗದಲ್ಲಿ, ಮೇಲ್ಮುಖವಾಗಿ ಬಾಂಬ್ ಇರಿಸಿದ್ದರಿಂದ, ಬಾಂಬ್ ಮೇಲ್ಮುಖವಾಗಿ ಸ್ಫೋಟಗೊಂಡಿದ್ದರಿಂದ ಹೆಚ್ಚಿನ ಜೀವಹಾನಿಯಾಗುವುದು ತಪ್ಪಿದ್ದು 10 ಜನ ಗಾಯಗೊಂಡಿದ್ದಾರೆ. ಒಂದು ವೇಳೆ ಬಾಂಬ್‌ನ್ನು ಕೆಳಮುಖವಾಗಿ ಇರಿಸಿದ್ದಲ್ಲಿ ಭಾರಿ ಜೀವಹಾನಿಯಾಗುವ ಸಾಧ್ಯತೆಗಳಿದ್ದವು. ಓಪೆರಾ ಹೌಸ್ ಮತ್ತು ಝವೇರಿ ಬಜಾರ್‌ನಲ್ಲಿ ನಡೆದ ಬಾಂಬ್‌ಸ್ಫೋಟದಲ್ಲಿ 19 ಜನರು ಸಾವನ್ನಪ್ಪಿ 133ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ದಾದರ್ ಪ್ರದೇಶದಲ್ಲಿ ಸಂಜೆ ಭಾರಿ ಜನನಿಬಿಡತೆ ಇರುವುದರಿಂದ ಉಗ್ರನು ಜನನಿಬಿಡ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಹೆಚ್ಚಿನ ಜನನಿಬಿಡವಿರುವ ಪ್ರದೇಶದ ಹತ್ತಿರ ಬಾಂಬ್ ಇಡಲು ಉಗ್ರ ಬಯಸಿದ್ದ. ಆದರೆ, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಸ್‌ನಿಲ್ದಾಣದ ಮೇಲ್ಭಾಗದಲ್ಲಿ ಇರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪ್ರಕಾರ, ದಾದರ್‌ನಲ್ಲಿ ನಡೆದ ಬಾಂಬ್‌ಸ್ಫೋಟದಿಂದ ಬಸ್‌ನಿಲ್ದಾಣಕ್ಕೆ ಹತ್ತಿರವಿರುವ ಮರದ ಕೊಂಬೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.ಉಗ್ರನು ಬಾಂಬ್‌ನ್ನು ಸರಿಯಾದ ದಿಕ್ಕಿನಲ್ಲಿ ಇಡಲು ವಿಫಲವಾಗಿರಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಉಗ್ರರು ಸದಾ ಬಾಂಬ್‌ನ್ನು ಎತ್ತರದ ಪ್ರದೇಶದಲ್ಲಿ ಕೆಳಮುಖವಾಗಿ ಬಾಂಬ್ ಇರಿಸುತ್ತಾರೆ. ಕೆಳಗಿರುವ ಜನತೆಯ ದೇಹದ ಮೇಲ್ಭಾಗದಲ್ಲಿ ಅಪ್ಪಳಿಸುವುದರಿಂದ ಸಾಧ್ಯವಾದಷ್ಟು ಸಾವು ನೋವು ಸಂಭವಿಸಲು ಬಯಸುತ್ತಾರೆ. ಕಳೆದ 2008ರಲ್ಲಿ ಇಂಡಿಯನ್ ಮುಜಾಹಿದಿನ್ ಉಗ್ರರ ಗುಂಪು, ಸೂರತ್‌ನಲ್ಲಿ ಮರಗಳು ಹಾಗೂ ಜಾಹೀರಾತು ಫಲಕಗಳ ಮೇಲೆ ಅಳವಡಿಸಿತ್ತು. ಆದರೆ, ತಾಂತ್ರಿಕ ಧೋಷದಿಂದ ಸ್ಫೋಟಗೊಳ್ಳಲಿಲ್ಲ. ನಂತರ ಪೊಲೀಸರು ಬಾಂಬ್‌ಗಳನ್ನು ವಶಪಡಿಸಿಕೊಂಡರು ಎಂದು ಬಾಂಬ್ ತಜ್ಞರು ತಿಳಿಸಿದ್ದಾರೆ.