ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟಿಗಾಗಿ ನೋಟು: ಅಮರ್ ಸಿಂಗ್ ಆಪ್ತ ಸಕ್ಸೇನಾ ಸೆರೆ (Amar Singh | cash for votes scandal | Supreme Court | Sanjiv Saxena | UPA)
PTI
2008ರಲ್ಲಿ ಯುಪಿಎ-1 ವಿಶ್ವಾಸ ಮತ ಕೋರುವ ಸಂದರ್ಭದಲ್ಲಿ ನಡೆದ ಮತಕ್ಕಾಗಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಏನೇನೂ ಪ್ರಗತಿ ಸಾಧಿಸದಿದ್ದ ಪೊಲೀಸರಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಎರಡು ದಿನಗಳ ನಂತರ, ದೆಹಲಿ ಪೊಲೀಸರು ಈ ಪ್ರಕರಣದ ಕುರಿತಂತೆ ಮೊದಲ ಬಾರಿಗೆ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರ ಆಪ್ತ ಸಂಜೀವ್ ಸಕ್ಸೇನಾ ಎಂಬಾತನನ್ನು ಬಂಧಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2008ರ ಜುಲೈನಲ್ಲಿ ನಡೆದ ಈ ಪ್ರಕರಣದಲ್ಲಿ ಬಿಜೆಪಿಯ ಸಂಸದರಿಗೆ ಲಂಚ ನೀಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಸಿಂಗ್ ನಿಕಟವರ್ತಿ ಎನ್ನಲಾದ ಸಕ್ಸೇನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಕ್ಸೇನಾ ಅಮರ್ ಸಿಂಗ್ ಅವರ ಬಲಗೈಬಂಟನಾಗಿದ್ದು, ಅವರು ಬಿಜೆಪಿ ಸಂಸದರಿಗೆ ಲಂಚ ನೀಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಸಕ್ಸೇನಾ ಮೊಬೈಲ್‌ನಲ್ಲಿ ಅಮರ್ ಸಿಂಗ್ ಅವರನ್ನು ಸಂಪರ್ಕಿಸಿದ್ದಲ್ಲದೆ, ಮಾತುಕತೆ ನಡೆಸಲು ಮೂವರು ಸಂಸದರನ್ನು ಅವರ ಬಳಿಗೆ ಕರೆದೊಯ್ದಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಅಮರ್ ಸಿಂಗ್ ಈ ಆರೋಪವನ್ನು ಅಲ್ಲಗಳೆದಿದ್ದರು. ಸಕ್ಸೇನಾ ಅವರನ್ನು ದೆಹಲಿ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

2008ರಲ್ಲಿ ಭಾರತ ಮತ್ತು ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಅಲ್ಪಮತಕ್ಕಿಳಿದ ಯುಪಿಎ-1 ಸರ್ಕಾರದ ಉಳಿವಿಗಾಗಿ ನಡೆದಿದೆ ಎನ್ನಲಾದ ಓಟಿಗಾಗಿ ನೋಟು ಪ್ರಕರಣದ ಬಗ್ಗೆ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಕಾರ್ಯವೈಖರಿಯನ್ನು ಏನು ಕಥೆ ಹೇಳ್ತಾ ಇದ್ದೀರಾ ಎಂದು ಸರ್ವೋಚ್ಛನ್ಯಾಯಾಲಯ ಎರಡು ದಿನಗಳ ಹಿಂದಷ್ಟೇ ಪ್ರಕರಣದ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿತ್ತು.

ಯುಪಿಎ ಸರ್ಕಾರ ವಿಶ್ವಾಸಮತ ಪಡೆಯುವ ಸಂದರ್ಭದಲ್ಲಿ ನಡೆದ ಓಟಿಗಾಗಿ ನೋಟು ಪ್ರಕರಣದಲ್ಲಿ ಭಾಗಿಯಾದ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮಾಜಿ ಚುನಾವಣಾ ಆಯುಕ್ತ ಜೆ.ಎಂ.ಲಿಂಗ್ಡೊ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇವನ್ನೂ ಓದಿ