ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಪವಾಸಕ್ಕೆ ಕಾಂಗ್ರೆಸ್ ಅಡ್ಡಿ ಭೀತಿ: ಸುಪ್ರೀಂಗೆ ಅಣ್ಣಾ ಮೊರೆ (Anna Hazare | Lokpal Bill | Ramlila Maidan | Baba Ramdev | Supreme Court)
PTI
ಭ್ರಷ್ಟಾಚಾರ ವಿರುದ್ಧ ಆಮರಣ ಉಪವಾಸ ಹೋರಾಟ ಮಾಡಿದ್ದ ಬಾಬಾ ರಾಮದೇವ್ ಮತ್ತು ಬೆಂಬಲಿಗರಿಗೆ ಆದಂತೆ ಆಗಸ್ಟ್ 16ರಿಂದ ಉಪವಾಸ ಕೈಗೊಳ್ಳಲಿರುವ ತನ್ನ ಮೇಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ ಮೇಲೂ ಬಲ ಪ್ರಯೋಗ ಮಾಡದಂತಾಗಲು ಖ್ಯಾತ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ಈಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ಅವರು, ಪ್ರತಿಭಟನೆ ನಡೆಸುವುದು ಪ್ರಜೆಗಳ ಮೂಲಭೂತ ಹಕ್ಕು ಮತ್ತು ಸರಕಾರವು ಅದಕ್ಕೆ ತಡೆಯೊಡ್ಡಬಾರದು ಎಂದು ತಿಳಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಲಲೋಕಪಾಲ ಮಸೂದೆ ಜಾರಿಗೊಳಿಸಲು ಒತ್ತಾಯಿಸಿ ತಮ್ಮ ಪ್ರಯತ್ನವು ಬಹುತೇಕ ವಿಫಲವಾಗಿರುವುದರಿಂದ ಅಣ್ಣಾ ಹಜಾರೆ ಅವರು ಆ.16ರಿಂದ ಜಂತರ್ ಮಂತರ್‌ನಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ರಾಮದೇವ್ ಆಂದೋಲನವನ್ನು ಹತ್ತಿಕ್ಕಿದ್ದೇವೆ, ಅದೇ ರೀತಿ ಅಣ್ಣಾ ಚಳವಳಿಯನ್ನೂ ಬಗ್ಗುಬಡಿಯುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವವೇ? ಎಂದು ಅಣ್ಣಾ ಹಜಾರೆ ಪ್ರಶ್ನಿಸಿದ್ದಾರೆ.

ವಾಸ್ತವವಾಗಿ, ಯಾರಿಗೂ ತೊಂದರೆ ಮಾಡದೆ ಉಪವಾಸ ಸತ್ಯಾಗ್ರಹ ನಡೆಸಿ ಮಲಗಿ ನಿದ್ರಿಸುತ್ತಿದ್ದ ವೃದ್ಧರು, ಮಹಿಳೆಯರ ಸಹಿತ ಸತ್ಯಾಗ್ರಹಿಗಳ ಮೇಲೆ ಪೊಲೀಸರು ರಾತೋರಾತ್ರಿ ಲಾಠಿ ಬೀಸಿ ಓಡಿಸಿರುವುದಕ್ಕೆ ಈಗಾಗಲೇ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ, ದೆಹಲಿ ಸರಕಾರ ಮತ್ತು ದೆಹಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲಿ ನಿದ್ರಿಸುತ್ತಿದ್ದವರ ಮೇಲೆ ಅಶ್ರುವಾಯು ಪ್ರಯೋಗಿಸಲು ಪ್ರಚೋದನೆ ನೀಡಿದ ಅಂಶವಾದರೂ ಏನು ಎಂದು ಸುಪ್ರೀಂ ಕೋರ್ಟು ದೆಹಲಿ ಪೊಲೀಸರಿಂದ ವಿವರಣೆ ಕೇಳಿತ್ತು.

ಏಪ್ರಿಲ್ ತಿಂಗಳಲ್ಲಿ ಅಣ್ಣಾ ಹಜಾರೆ ಅವರು ಲಕ್ಷಾಂತರ ಬೆಂಬಲಿಗರೊಂದಿಗೆ ಲೋಕಪಾಲ ಮಸೂದೆಗಾಗಿ ಉಪವಾಸ ಸತ್ಯಾಗ್ರಹ ನಡೆಸಿದಾಗ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿ, ಕೊನೆಗೂ ಸರಕಾರವು ಮಣಿಯಲೇಬೇಕಾಗಿಬಂದಿತ್ತು. ಲೋಕಪಾಲ ಮಸೂದೆಯನ್ನು ಜನರೇ ರೂಪಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಆದರೆ, ಸರಕಾರವು ಅವರ ಬೇಡಿಕೆಗೆ ಅರ್ಧ ಒಪ್ಪಿ, 5 ಮಂದಿ ಮಂತ್ರಿಗಳು ಹಾಗೂ 5 ಮಂದಿ ನಾಗರಿಕ ಸದಸ್ಯರನ್ನೊಳಗೊಂಡ ಕರಡು ಸಮಿತಿಯನ್ನು ರಚಿಸಿತ್ತು. ನಾಗರಿಕ ಸಮಿತಿ ಕಠಿಣ ನಿಯಮಗಳನ್ನು ಕರಡಿನಲ್ಲಿ ಸೇರಿಸಿರುವುದು ಮಂತ್ರಿಗಳಿಗೆ ನುಂಗಲಾರದ ತುತ್ತಾಗಿ, ಉಭಯ ಬಣಗಳ ಮಧ್ಯೆ ಅಸಮಾಧಾನ ಸ್ಫೋಟಿಸಿ, ಕೊನೆಗೆ ಎರಡು ಲೋಕಪಾಲ ಕರಡು ಮಸೂದೆಗಳನ್ನು ಪ್ರತ್ಯೇಕವಾಗಿ ರೂಪಿಸಲಾಗಿತ್ತು.

ಲೋಕಪಾಲರನ್ನು ನೇಮಿಸುವುದು, ಅವರ ಅಧಿಕಾರ ವ್ಯಾಪ್ತಿ ಇತ್ಯಾದಿಗಳ ಕುರಿತು ಸರಕಾರದ ಪ್ರತಿನಿಧಿಗಳು 'ಸುರಕ್ಷಿತ'ವಾಗಿರಲು ನೋಡಿಕೊಂಡಿರುವುದರಿಂದಾಗಿ ಅಣ್ಣಾ ಹಜಾರೆ ಮತ್ತೆ ಉಪವಾಸ ನಡೆಸುವುದಾಗಿ ಬೆದರಿಕೆಯೊಡ್ಡಿದ್ದರು.
ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ