ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ಸ್ಫೋಟದಲ್ಲಿ ಕಾಣೆಯಾದ 65 ವಜ್ರಗಳ ಪತ್ತೆ (Mumbai blasts | Opera House | Bomb blasts | 65 diamonds | Bharat Shah)
ಕಳೆದ ವಾರ ನಗರದ ಓಪೆರಾ ಹೌಸ್ ಬಳಿ ನಡೆದ ಬಾಂಬ್ ಸ್ಫೋಟಕ್ಕೆ ತುತ್ತಾಗಿದ್ದ ಅಂಗಡಿಗಳಿಂದ ಕಾಣೆಯಾಗಿರುವ ವಜ್ರಗಳು, ಇದೀಗ ಪರಿಹಾರ ಕಾರ್ಯದಲ್ಲಿ ತೊಡಗಿದ ಕಾರ್ಯಕರ್ತರಿಗೆ ಹಾಗೂ ಪೊಲೀಸರಿಗೆ ಒಟ್ಟು 65 ವಜ್ರಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.

ಓಪೆರಾ ಹೌಸ್ ಪ್ರದೇಶ ಸಗಟು ಮತ್ತು ರಿಟೇಲ್ ವಜ್ರಗಳ ವಹಿವಾಟಿಗೆ ಹೆಸರುವಾಸಿ. ಕಿರಿದಾದ ರಸ್ತೆಗಳು, ತುಂಬಿದ ಜನನಿಬಿಡತೆಯಿರುತ್ತದೆ. ಇಲ್ಲಿಯವರೆಗೆ 65 ವಜ್ರದ ಹರಳುಗಳು ದೊರೆತಿವೆ ಎಂದು ಮುಂಬೈ ಡೈಮಂಡ್ ಮರ್ಚೆಂಟ್ಸ್ ಅಸೋಸಿಯೇಶನ್ ಸದಸ್ಯ ಜಯೇಶ್ ಲಬ್ದಿ ತಿಳಿಸಿದ್ದಾರೆ.

ಅಸೋಸಿಯೇಶನ್ ಸದಸ್ಯರು ಸಭೆಯಲ್ಲಿ ಚರ್ಚಿಸಿದ ನಂತರ, ಗಾಯಗೊಂಡವರಿಗೆ ಹಾಗೂ ಮೃತರಾದವರ ಕುಟುಂಬಗಳಿಗೆ ಪರಿಹಾರ ನೀಡಲು ದೊರೆತ ವಜ್ರಗಳನ್ನು ಹರಾಜು ಹಾಕಬಹುದಾಗಿದೆ ಎಂದು ತಿಳಿಸಿದ್ದಾರೆ.

ಅಸೋಸಿಯೇಶನ್‌ನಲ್ಲಿರುವ ದೊರೆತ ವಜ್ರಗಳ ಮೌಲ್ಯವನ್ನು ಇಲ್ಲಿಯವರೆಗೆ ಮಾಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಡೈಮಂಡ್ ಮರ್ಚೆಂಟ್ಸ್ ಅಧ್ಯಕ್ಷ ಭರತ್ ಶಾ ಮಾತನಾಡಿ, ಬಾಂಬ್‌ಸ್ಫೋಟದಿಂದ ವರ್ತಕರಿಗೆ ಆದ ಆಸ್ತಿ ಪಾಸ್ತಿ ನಷ್ಟವನ್ನು ಅಂದಾಜು ಮಾಡಲಾಗುತ್ತಿದೆ. ದೊರೆತ ವಜ್ರಗಳ ಮೌಲ್ಯವನ್ನು ಕೂಡಾ ಅಂದಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೆಮ್ ಆಂಡ್ ಜೆವೆಲ್ಲರಿ ಎಕ್ಸ್‌ಪೋರ್ಟ್ ಪ್ರಮೋಶನ್ ಕೌನ್ಸಿಲ್ ಉಪಾಧ್ಯಕ್ಷ ಸಂಜಯ್ ಕೊಠಾರಿ ಮಾತನಾಡಿ, ದೊರೆತ ವಜ್ರಗಳನ್ನು ಹರಾಜು ಹಾಕುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಾಂಬ್‌ಸ್ಫೋಟ ನಡೆದ ದಿನ ಭಾರಿ ಮಳೆ ಸುರಿಯುತ್ತಿದ್ದ ಕಾರಣ, ಜನರು ಬಹುಬೇಗನೆ ಮನೆಗೆ ತೆರಳಿದ್ದರಿಂದ ಕಡಿಮೆ ಜೀವಹಾನಿಯಾಗಿದೆ. ವಜ್ರಗಳ ವರ್ತಕರಿಗೂ ಕಡಿಮೆ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಡೈಮಂಡ್ಸ್ ಅಸೋಸಿಯೇಶನ್ ಸಂಘದ ಮೂರು ಅಥವಾ ನಾಲ್ಕು ವರ್ತಕರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯಾವುದೇ ಲೂಟಿ ಘಟನೆಗಳು ನಡೆದಿಲ್ಲ. ಒಬ್ಬ ವ್ಯಕ್ತಿ ಮಾತ್ರ ನೆಲದ ಮೇಲೆ ಬಿದ್ದ ವಜ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ