ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕತ್ರಿನಾ ಕೈಫ್ ಯಾರು?: ಕಾಂಗ್ರೆಸ್ ವಕ್ತಾರ ತಿವಾರಿ ಪ್ರಶ್ನೆ (Katrina Kaif | Rahul Gandhi | Half Indian | Bollywood Actress)
ಕತ್ರಿನಾ ಕೈಫ್ ಯಾರು?: ಕಾಂಗ್ರೆಸ್ ವಕ್ತಾರ ತಿವಾರಿ ಪ್ರಶ್ನೆ
ನವದೆಹಲಿ, ಗುರುವಾರ, 21 ಜುಲೈ 2011( 09:33 IST )
ಕತ್ರಿನಾ ಕೈಫ್ ಯಾರು? ನನಗಂತೂ ಗೊತ್ತಿಲ್ಲವಪ್ಪಾ... ನಾಳೆ ಜಾನಿ ಲಿವರ್ ಏನಾದ್ರೂ ಹೇಳಿಕೆ ಕೊಟ್ರೆ, ಅದರ ಬಗ್ಗೆ ಕೂಡ ನೀವು ಅಭಿಪ್ರಾಯ ಕೇಳ್ತೀರಿ. ದೇಶದ ರಾಜಕೀಯ ಚರ್ಚೆಯನ್ನು ನೀವು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೀರಿ?
- ಹೀಗಂತ ಕೆರಳಿ ಕೆಂಡವಾದವರು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ. ನಾನು ಕೂಡ ಅರೆ-ಭಾರತೀಯಳು, ರಾಹುಲ್ ಗಾಂಧಿ ಕೂಡ ಅರೆ-ಭಾರತೀಯ ಎಂದು ಬಾಲಿವುಡ್ ಬೆಡಗಿ ನೀಡಿದ ಹೇಳಿಕೆಯ ಕುರಿತು ಪತ್ರಕರ್ತರು ಪ್ರತಿಕ್ರಿಯೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ.
ಕತ್ರಿನಾ ಕ್ಷಮೆ ಯಾಚನೆ ಇದೇ ವೇಳೆ, ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ ನಟಿ ಕತ್ರಿನಾ ಕೈಫ್. ನಾನು ಕೂಡ ರಾಹುಲ್ ಅವರಂತೆಯೇ ಅರ್ಧ-ಭಾರತೀಯಳು ಎಂದು ಹೇಳಿದ್ದರಲ್ಲಿ, ರಾಹುಲ್ ಕುರಿತ ಹೇಳಿಕೆಯನ್ನು ಮಾತ್ರವೇ ಹೈಲೈಟ್ ಮಾಡಿ, ಅಪಾರ್ಥ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ವಿಷಯದಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿಯೂ ಕತ್ರಿನಾ ಹೇಳಿದ್ದಾರೆ.
ಇದೇ ಕತ್ರಿನಾ ಕೈಫ್ ಅವರು ಪ್ರಕಾಶ್ ಝಾ ಅವರ 'ರಾಜನೀತಿ' ಚಿತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಮಾತಿನ ಶೈಲಿಯನ್ನೇ ಅನುಕರಿಸಿದ್ದರಿಂದಾಗಿ ಈ ಹಿಂದೆಯೂ ವಿವಾದಕ್ಕೆ ಕಾರಣರಾಗಿದ್ದರು.