ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಲಪಂಥೀಯ 'ಉಗ್ರ'ರನ್ನು ಕಟ್ಟಿಹಾಕಿದ್ದೇ ಬಿಜೆಪಿಗೆ ಕೋಪ: ಚಿದು (Right Wing Terror | P Chidambaram | BJP | 2G Scam)
PTI
2ಜಿ ಹಗರಣದ ಬಾಂಬ್ ನೇರವಾಗಿ ತಮ್ಮ ಕಾಲಬುಡಕ್ಕೇ ಬಿದ್ದಾಗ ಕೇಂದ್ರ ಗೃಹ ಸಚಿವ ಚಿದಂಬರಂ ಕೆಂಡವಾಗಿದ್ದಾರೆ. ಮಾಜಿ ಟೆಲಿಕಾಂ ಸಚಿವ ಎ.ರಾಜಾ ತಮ್ಮ ಮೇಲೆಯೇ ಆರೋಪ ಮಾಡಿದ ಹಿನ್ನೆಲೆಯಲ್ಲಿ, ತಮ್ಮ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ವಿರುದ್ಧ ಕೆರಳಿ ಕೆಂಡವಾಗಿರುವ ಚಿದಂಬರಂ, ಯುಪಿಎ ಸರಕಾರವು ಬಲಪಂಥೀಯ ಭಯೋತ್ಪಾದನಾ ತಂಡಗಳ ಕೊರಳಿನ ಉರುಳು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಕೇಂದ್ರ ಮಂತ್ರಿಗಳ ಮೇಲೆ ಮುಗಿಬೀಳುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಬಲಪಂಥೀಯ ಉಗ್ರರಿಂದ ಬಾಂಬ್ ತಯಾರಿ ಮತ್ತು ಜನರ ಹತ್ಯೆಯ ಕುರಿತು 9 ಕೇಸುಗಳ ಬಗ್ಗೆ ಯುಪಿಎ ತನಿಖೆಯನ್ನು ತೀವ್ರಗೊಳಿಸಿರುವುದರಿಂದಾಗಿ ಕಸಿವಿಸಿಗೊಂಡಿರುವ ಬಿಜೆಪಿ ಇದೀಗ ತಮ್ಮ ಹಾಗೂ ಪ್ರಧಾನಿ ರಾಜೀನಾಮೆಗೆ ಆಗ್ರಹಿಸುತ್ತಿವೆ ಎಂದು ಸೋಮವಾರ ಆಪಾದಿಸಿದರು.

ಪಿಟಿಐ ಜತೆ ಮಾತನಾಡಿದ ಅವರು, ಭಯೋತ್ಪಾದನೆ ಮಾಡುವುದೇ ಈ ಮೂಲಭೂತವಾದಿ ಗುಂಪುಗಳ ಉದ್ದೇಶ ಮತ್ತು ಸರಕಾರವು ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕಾಗಿದೆ ಎಂದರು. 2ಜಿ ಹಗರಣದಲ್ಲಿ ತಾನು ಸಂಪುಟದ ನಿರ್ಣಯವನ್ನೇ ಪಾಲಿಸಿದ್ದೇನೆ. 2ಜಿ ತರಂಗಗುಚ್ಛ ಹಂಚಿಕೆಗೆ ಅಂದಿನ ವಿತ್ತ ಸಚಿವ ಚಿದಂಬರಂ ಅವರು ಪ್ರಧಾನಿ ಸಮ್ಮುಖದಲ್ಲೇ ಅನುಮೋದನೆ ನೀಡಿದ್ದರು. ಹೀಗಾಗಿ ತನ್ನನ್ನು ಮಾತ್ರ ಬಲಿಪಶುವಾಗಿ ಮಾಡಲಾಗುತ್ತಿದೆಯೇಕೆ ಎಂದು ಈಗ ತಿಹಾರ್ ಜೈಲಿನಲ್ಲಿರುವ ಎ.ರಾಜಾ ಅವರು ನ್ಯಾಯಾಲಯದ ವಿಚಾರಣೆ ಸಂದರ್ಭ ಪ್ರಶ್ನಿಸಿದ್ದರು.

ಇದರಿಂದ ಪ್ರೇರಣೆ ಪಡೆದ ಬಿಜೆಪಿ, ಚಿದಂಬರಂ ಹಾಗೂ ಪ್ರಧಾನಿ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಚಿದಂಬರಂ, ಅಯೋಧ್ಯೆಗೆ ಸಂಬಂಧಿಸಿದ ಎರಡು ಕೇಸುಗಳ ಮರುವಿಚಾರಣೆಗೆ ಕೇಂದ್ರವು ಪ್ರಯತ್ನ ಮಾಡುತ್ತಿರುವುದರಿಂದಾಗಿಯೇ ಬಿಜೆಪಿ ಹತಾಶೆಯಿಂದ ಈ ಆಗ್ರಹ ಮಾಡುತ್ತಿದೆ ಎಂದು ಹೇಳಿದರು.

"ನಾವು ಬಲಪಂಥೀಯ ಮೂಲಭೂತವಾದಿ ಸಂಘಟನೆಗಳನ್ನೊಳಗೊಂಡ ಹಲವಾರು ಬಾಂಬ್ ಸ್ಫೋಟ ಪ್ರಕರಣಗಳ ತನಿಖೆ ಚುರುಕು ಮಾಡುತ್ತಿದ್ದೇವೆ. ಈ ಬಲಪಂಥೀಯ ಗುಂಪುಗಳಿಗೆ ಆರೆಸ್ಸೆಸ್ ಸಂಬಂಧವಿದೆ. ಅಯೋಧ್ಯೆ ಪ್ರಕರಣದ ಮರು ವಿಚಾರಣೆಗೂ ಯತ್ನಿಸುತ್ತಿದ್ದೇವೆ. ಇದೇ ಕಾರಣಕ್ಕೆ ಬಿಜೆಪಿ ಕೆಲವು ಆಯ್ದ ಮಂತ್ರಿಗಳ ಮೇಲೆ ದಾಳಿ ಮಾಡುತ್ತಿದೆ" ಎಂದು ಚಿದಂಬರಂ ತಿಳಿಸಿದರು.

ಆರೆಸ್ಸೆಸ್ಸನ್ನು ಬಾಂಬ್ ತಯಾರಿಸುವ ಕಾರ್ಖಾನೆ ಎಂದು ಬಣ್ಣಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿಕೆಯ ಬಗ್ಗೆ ಕೇಳಿದಾಗ, "ಅವುಗಳು ಬಾಂಬ್ ತಯಾರಿಕಾ ಕಾರ್ಖಾನೆಗಳೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ಬಾಂಬ್ ತಯಾರಿಸುತ್ತಾರೆ ಮತ್ತು ಬಾಂಬ್‌ಗಳು ಸ್ಫೋಟಿಸಿವೆ. ಬಾಂಬ್‌ಗಳು ಜನರನ್ನು ಕೊಂದಿವೆ" ಎಂದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಲ ಪಂಥೀಯ ಉಗ್ರವಾದ, ಪಿ ಚಿದಂಬರಂ, ಆರೆಸ್ಸೆಸ್, ಬಿಜೆಪಿ, 2ಜಿ ಹಗರಣ, ಯುಪಿಎ, ರಾಜಾ