ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಾಜಪೇಯಿ ಕೂಡ 2ಜಿ ಹಗರಣದಲ್ಲಿ ಭಾಗಿ: ತಿವಾರಿ ತಿರುಗೇಟು (Vajpayee | 2G scam | BJP | A Raja | Congress)
PTI
2ಜಿ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಪ್ರಧಾನಿ ಮತ್ತು ಅಂದಿನ ವಿತ್ತಸಚಿವ ಪಿ.ಚಿದಂಬರಂ ಹೆಸರುಗಳನ್ನು ಬಹಿರಂಗಗೊಳಿಸಿದ್ದರಿಂದಾಗಿ ಬಿಜೆಪಿಯ ರಾಜೀನಾಮೆ ಆಗ್ರಹದಿಂದ ಕಿಡಿಕಿಡಿಯಾಗಿರುವ ಕಾಂಗ್ರೆಸ್, ಇದೀಗ ಮಾಜಿ ಪ್ರಧಾನಿ ವಾಜಪೇಯಿ ಹೆಸರನ್ನೂ ಈ ಹಗರಣದಲ್ಲಿ ಎಳೆದು ತಂದಿದೆ.

ರಾಜಾ ಹೇಳಿಕೆಯ ಕೇವಲ ಒಂದು ಭಾಗವನ್ನು ತೆಗೆದುಕೊಂಡು ಬಿಜೆಪಿ ಟೀಕಿಸುತ್ತದೆಯೆಂದಾದರೆ, ಅದೇ ಹೇಳಿಕೆಯ ಮತ್ತೊಂದು ಭಾಗದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಹೆಸರನ್ನು ಕೂಡ ಪರೋಕ್ಷವಾಗಿ ಉಲ್ಲೇಖಿಸಲಾಗಿದೆ ಎಂಬುದನ್ನೂ ಗಮನಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ಒಂದು ವೇಳೆ ನನ್ನ ಟೆಲಿಕಾಂ ನೀತಿಗಳು ತಪ್ಪಾಗಿದ್ದಲ್ಲಿ, 1993ರಿಂದ ಇಲ್ಲಿಯವರೆಗೆ ಅಧಿಕಾರದಲ್ಲಿದ್ದ ಮಾಜಿ ಟೆಲಿಕಾಂ ಸಚಿವರು ಕೂಡಾ ನನ್ನೊಂದಿಗೆ ಜೈಲಿನಲ್ಲಿರಬೇಕಾಗಿತ್ತು ಎಂದು 2ಜಿ ಹಗರಣದ ರೂವಾರಿ ಎಂದು ಆರೋಪಿಸಲಾಗುತ್ತಿರುವ ಎ.ರಾಜಾ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು ಟೆಲಿಕಾಂ ಸಚಿವರಾಗಿದ್ದ ಜಗ್‌ಮೋಹನ್ ಅವರಿಂದ ಟೆಲಿಕಾಂ ಖಾತೆಯನ್ನು ಪಡೆದು ನಿರ್ವಹಣೆ ಮಾಡಿದ್ದರು ಎಂದು ಕಾಂಗ್ರೆಸ್ ವಕ್ತಾರ ತಿವಾರಿ ಈ ಹಿಂದೆಯೂ ಆರೋಪಿಸಿದ್ದರು.

ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ರೂಪಿಸಿದ ಟೆಲಿಕಾಂ ವಲಸೆ ನೀತಿಯಿಂದಾಗಿ, ಸರಕಾರದ ಬೊಕ್ಕಸಕ್ಕೆ 43,000 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ತಿವಾರಿ ಟೀಕಿಸಿದ್ದಾರೆ.

2ಜಿ ಹಗರಣದಲ್ಲಿ ರಾಜಾ ಕೇವಲ "ಆರೋಪಿ" ಮಾತ್ರ. ಮತ್ತು ಅವರ ಹೇಳಿಕೆಗಳನ್ನು ನಂಬುವುದೂ ಸಾಧ್ಯವಿಲ್ಲ. ಅಲ್ಲದೆ ಅವರೇನೂ ಸಂಪುಟದಲ್ಲಿರುವ ಸಚಿವರಲ್ಲ. ರಾಜಾ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳಿಗೆ ವಿರೋಧ ಪಕ್ಷವಾದ ಬಿಜೆಪಿ ಅನಗತ್ಯವಾಗಿ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ತಿವಾರಿ ಹೇಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ವಾಜಪೇಯಿ, 2ಜಿ ಹಗರಣ, ಬಿಜೆಪಿ, ಎರಾಜಾ, ಕಾಂಗ್ರೆಸ್