ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ಮಸೂದೆ: ನಾಗರಿಕ ಸಮಿತಿಗೆ ಕೈಕೊಟ್ಟ ಕೇಂದ್ರ (Lokpal Bill |Government| Draft | Cabinet approval | Pranab Mukherjee | Shanti Bhushan)
ಲೋಕಪಾಲ ಮಸೂದೆ: ನಾಗರಿಕ ಸಮಿತಿಗೆ ಕೈಕೊಟ್ಟ ಕೇಂದ್ರ
ನವದೆಹಲಿ, ಬುಧವಾರ, 27 ಜುಲೈ 2011( 11:54 IST )
PTI
ಭ್ರಷ್ಟಾಚಾರ ವಿರೋದಿ ಲೋಕಾಪಾಲ ಮಸೂದೆಯ ಅಂಗೀಕಾರಕ್ಕಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟ ಸಮಿತಿಗೆ, ಪ್ರಸಕ್ತ ವಾರದಲ್ಲಿ ಸಲ್ಲಿಸಲಾಗುತ್ತದೆ. ಆದರೆ, ಅಣ್ಣಾ ಹಜಾರೆ ನೇತೃತ್ವದ ಸಮಿತಿ, ರಚಿಸಿದ ಕರಡು ಸಂಪುಟಕ್ಕೆ ನೀಡಲಾಗುತ್ತಿಲ್ಲ ಎಂದು ಸರಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಮಿತಿ ಹಾಗೂ ಇತರ ಸಲಹೆಗಳೊಂದಿಗೆ ಹಾಗೂ ನಾಗರಿಕ ಸಮಾಜ ಸಮಿತಿ ಜಂಟಿಯಾಗಿ ರಚಿಸಿದ ಕರಡು ಸೇರಿಸಿ ಸಿದ್ಧಪಡಿಸಲಾದ ಏಕೈಕ ಕರಡು ಸಂಪುಟ ಸಮಿತಿ ಸಭೆಗೆ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ನಾಗರಿಕ ಸಮಿತಿ ಹಾಗೂ ಸರಕಾರದ ಸಮಿತಿಯ ಮಧ್ಯದ ಭಿನ್ನಾಭಿಪ್ರಾಯಗಳನ್ನು ಸರಕಾರಕ್ಕೆ ಸಲ್ಲಿಸಲಿರುವ ಕರಡು ರಚನೆಯಲ್ಲಿ ಎತ್ತಿ ತೋರಿಸಿಲ್ಲ ಅಥವಾ ಪ್ರಣಬ್ ನೇತೃತ್ವದ ಕರಡು ರಚನೆಯಲ್ಲಿ ಬಹಿರಂಗಪಡಿಸಿಲ್ಲ ಎಂದು ಅಣ್ಣಾ ಹಜಾರೆ ನೇತೃತ್ವದ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಸಚಿವ ಸಂಪುಟ ಅಂಗೀಕರಿಸಿದ ಕರಡು ಮಸೂದೆಯನ್ನು ಸಂಸತ್ತಿನಲ್ಲಿ ಮತ್ತು ಸ್ಟ್ಯಾಂಡಿಂಗ್ ಸಮಿತಿಯಲ್ಲಿ ಮಂಡಿಸಲಾಗುತ್ತದೆ. ಸರಕಾರ ಪ್ರಬಲ ಲೋಕಪಾಲ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಜಾರಿಗೆ ತರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರದ ಸಮಿತಿ ರಟಿಸಿದ ಕರಡು ಹಾಗೂ ನಾಗರಿಕ ಸಮಿತಿ ರಚಿಸಿದ ಕರಡು ಎರಡನ್ನು ಸಂಪುಟ ಸಮಿತಿಗೆ ಅನುಮತಿಗಾಗಿ ನೀಡಬೇಕು ಎಂದು ನಾಗರಿಕ ಸಮಿತಿ ಸರಕಾರವನ್ನು ಆಗ್ರಹಿಸಿದೆ.
ಸಚಿವ ಸಂಪುಟ ಸಮಿತಿಗೆ ಕರಡು ಮಂಡನೆಗೆ ಮುನ್ನ ಎರಡು ಆವೃತ್ತಿಯ ಕರಡು ಸಾರಾಂಶಗಳ ಬಗ್ಗೆ ಜಂಟಿ ಸಮಿತಿ ಸಭೆಯಲ್ಲಿ ಚರ್ಚಿಸಿದ ನಂತರ ನಿರ್ಧರಿಸಬೇಕು. ಲೋಕಪಾಲ ಮಸೂದೆಯ ಬಗ್ಗೆ ಚರ್ಚಿಸಲು ಶೀಘ್ರದಲ್ಲಿ ಸಂಪುಟ ಸಮಿತಿ ಸಭೆ ಸೇರಲಿದೆ ಎನ್ನುವ ಮಾಹಿತಿಗಳಿವೆ. ಆದ್ದರಿಂದ, ಎರಡು ಕರಡುಗಳನ್ನು ಸಂಪುಟದ ಮುಂದೆ ಮಂಡಿಸುವಂತೆ ಮನವಿ ಮಾಡುವುದಾಗಿ ಜಂಟಿ ಸಮಿತಿಯ ಸಹ-ಅಧ್ಯಕ್ಷ ಶಾಂತಿಭೂಷಣ್ ಸಚಿವ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ.