ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಹುನಿರೀಕ್ಷಿತ ಕೃಷ್ಣ-ರಬ್ಬಾನಿ ಮಾತುಕತೆ ಆರಂಭ (India | Pakistan | SM Krishna | Hina Rabbani Khar | India-Pak talks)
ಬಹುನಿರೀಕ್ಷಿತ ಕೃಷ್ಣ-ರಬ್ಬಾನಿ ಮಾತುಕತೆ ಆರಂಭ
ನವದೆಹಲಿ, ಬುಧವಾರ, 27 ಜುಲೈ 2011( 12:18 IST )
PTI
ಬಹುನಿರೀಕ್ಷಿತ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಅವರ ಮಧ್ಯ ಮಾತುಕತೆ ಆರಂಭವಾಗಿದೆ.
ನಗರದಲ್ಲಿರುವ ಹೈದ್ರಾಬಾದ್ ಹೌಸ್‌ನಲ್ಲಿ ಪಾಕ್ ವಿದೇಶಾಂಗ ಸಚಿವೆ ರಬ್ಬಾನಿಯವರನ್ನು ಸ್ವಾಗತಿಸಿದ ವಿದೇಶಾಂಗ ಸಚಿವ ಕೃಷ್ಣ, ವಿದೇಶಾಂಗ ಸಚಿವೆಯಾಗಿ ನಿಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂಧನೆಗಳು. ಪಾಕಿಸ್ತಾನದ ಗೌರವಾನ್ವಿತ ವಿದೇಶಾಂಗ ಸಚಿವೆಯಾದ ನಿಮ್ಮೊಂದಿಗೆ ಸಹಕಾರ ಸಂಬಂಧಗಳೊಂದಿಗೆ ಕಾರ್ಯನಿರ್ವಹಿಸಲು ಭಾರತ ಬಯಸುತ್ತದೆ ಎಂದು ಹೇಳಿದ್ದಾರೆ.
ಉಭಯ ಸಚಿವರ ಮಾತುಕತೆ ಕೇವಲ ಎರಡು ರಾಷ್ಟ್ರಗಳಲ್ಲಿ ಶಾಂತಿ ಸಾರುವುದಲ್ಲ. ಏಷ್ಯಾ ವಲಯದಲ್ಲಿ ಶಾಂತಿ ಸೌಹಾರ್ದತೆ ತರುವ ಉದ್ದೇಶವಾಗಿದೆ. ಉಭಯ ದೇಶಗಳ ಮುಂದಿನ ಪೀಳಿಗೆಗಳಿಗೆ ಕೂಡಾ ಶಾಂತಿ ಸಂದೇಶ ಸಾರುವಂತಹದಾಗಲಿ. ಸ್ಥಿರತೆ, ಶಾಂತಿ ಮತ್ತು ಏಳಿಗೆಯನ್ನು ಹೊಂದಿದಂತಹ ಪಾಕಿಸ್ತಾನವನ್ನು ಭಾರತ ಬಯಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಕಿರಿಯ ವಯಸ್ಸಿನ ಮೊದಲ ಮಹಿಳಾ ವಿದೇಶಾಂಗ ಸಚಿವೆಯಾದ 34 ವರ್ಷ ವಯಸ್ಸಿನ ಖಾರ್ ಮಾತನಾಡಿ, ಭಾರತಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ. ಮಹತ್ವದ ನೆರೆಯ ರಾಷ್ಟ್ರವಾದ ಭಾರತದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ. ಉಭಯ ದೇಶಗಳು ಜವಾಬ್ದಾರಿಯುತ ರಾಷ್ಟ್ರಗಳಾಗಿವೆ. ನಮ್ಮ ಗುರಿ ಒಂದೇ ಆಗಿದೆ ಎಂದು ಹೇಳಿದ್ದಾರೆ.
ಸಕಾರಾತ್ಮಕ ಫಲಿತಾಂಶಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದೇವೆ. ಕೆಲ ವಿವಾದಗಳಿಂದ ನಮ್ಮ ಸಂಬಂಧಗಳು ಸೆರೆಯಾಗಬಾರದು ಎಂದು ಖಾರ್, ಕೃಷ್ಣ ಅವರೊಂದಿಗೆ ಮಾತುಕತೆಗೆ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ.