ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣಕ್ಕೆ ಕೇಂದ್ರ ಸರಕಾರ ನೇರ ಹೊಣೆ: ಬೆಹುರಾ (Siddhartha Behura | 2G scam| Government | A Raja| P Chidambaram | Prime Minister)
PTI
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಪಿ.ಚಿದಂಬರಂ ಅವರ ವಿರುದ್ಧ ಮಾಜಿ ಟೆಲಿಕಾಂ ಸಚಿವ ಎ.ರಾಜಾ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಇದೀಗ 2ಜಿ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ್ ಬೆಹುರಾ, 2ಜಿ ಹಗರಣಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

2ಜಿ ಹಗರಣದ ಬಿಕ್ಕಟ್ಟಿಗೆ ಕೇಂದ್ರ ಸರಕಾರ ನೇರ ಜವಾಬ್ದಾರಿಯಾಗಿದೆ. ನನ್ನ ಕಕ್ಷಿದಾರ 2ಜಿ ನಿಯಮಗಳಲ್ಲಿರುವ ದೋಷಗಳ ಬಗ್ಗೆ ಸಾರ್ವಜನಿಕವಾಗಿ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಸರಕಾರ ರೂಪಿಸಿದ ನಿಯಮಗಳಿಗೆ ಬದ್ಧವಾಗುವ ಅನಿವಾರ್ಯತೆ ಎದುರಾಗಿತ್ತು. ಸರಕಾರಿ ನೌಕರರಾಗಿ ಸರಕಾರದ ನಿಯಮಗಳನ್ನು ಪಾಲಿಸಿದ್ದಾರೆಯೇ ಹೊರತು ಯಾವುದೇ ತಪ್ಪೆಸಗಿಲ್ಲ ಎಂದು ಬೆಹುರಾ ಪರ ವಕೀಲ ಅಮನ್ ಲೇಖಿ, ಸಿಬಿಐ ವಿಶೇಷ ನ್ಯಾಯಮೂರ್ತಿ ಒಪಿ ಸೈಯಾನಿಯವರಿಗೆ ತಿಳಿಸಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ 2ಜಿ ತರಂಗ ಗುಚ್ಚ ಹಗರಣದ ವಿಚಾರಣೆಯಲ್ಲಿ ,ಆರೋಪಿ ಬೆಹುರಾ ತಮ್ಮ ವಾದವನ್ನು ಮಂಡಿಸಿದ್ದಾರೆ.

ಬೆಹುರಾ ಅವರಿಗೆ ಸರಕಾರದ ನಿಯಮಗಳನ್ನು ಜಾರಿಗೊಳಿಸುವುದನ್ನು ಹೊರತುಪಡಿಸಿ ಬೇರೆ ದಾರಿಯಿರಲಿಲ್ಲ. ಸರಕಾರ ಕೂಡಾ ಅವರ ಮನವಿಗಳನ್ನು ತಿರಸ್ಕರಿಸಿತ್ತು ಎಂದು ಲೇಖಿ ನ್ಯಾಯಾಲದ ಮುಂದೆ ವಾದಿಸಿದ್ದಾರೆ.

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2 ರಂದು ಬೆಹುರಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು, ಅಪರಾಧ ಸಂಚು, ವಂಚನೆ, ಫೋರ್ಜರಿ, ಸೇರಿದಂತೆ ಹಲವು ಆರೋಪಗಳ ಆರೋಪಪಟ್ಟಿಯನ್ನು ಏಪ್ರಿಲ್ 2 ರಂದು ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದರು.

2ಜಿ ತರಂಗ ಗುಚ್ಚ ಹಗರಣದಲ್ಲಿ ಅವ್ಯವಹಾರ ನಡೆದಿರುವದು ಗಮನಕ್ಕೆ ಬಂದಿದ್ದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ತನಿಖೆಗಾಗಿ ಉನ್ನತಾಧಿಕಾರ ಸಮಿತಿಯನ್ನು ಏಕೆ ರಚಿಸಲಿಲ್ಲ? ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಕಿಡಿಕಾರಿದ್ದಲ್ಲದೇ, ಅಂದಿನ ವಿತ್ತಖಾತೆ ಸಚಿವ ಚಿದಂಬರಂ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಬೇಕು ಎಂದು ನಿನ್ನೆ ಒತ್ತಾಯಿಸಿರುವುದನ್ನು ಸ್ಮರಿಸಬಹುದು.
ಇವನ್ನೂ ಓದಿ