ಅದೇ ರೀತಿ, 78ರ ಹರೆಯದ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಹೋಲಿಸಿದರೆ, 34ರ ಹರೆಯದ ಹೀನಾ ಅವರ ಮಾತಿನ ನಿರರ್ಗಳತೆ, ಕಡ್ಡಿ ಮುರಿದಂತೆ ಮಾತನಾಡುವ ಛಾತಿ, ತ್ವರಿತ ಪ್ರತಿಕ್ರಿಯೆ... ಇವೆಲ್ಲವೂ ನೆಟ್ ಓದುಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನದ ಅತ್ಯಂತ ಕಿರಿಯ ಸಚಿವೆ ಹೀನಾ ಅವರ ಕೈಯಲ್ಲಿದ್ದ ಸ್ವಲ್ಪ ದೊಡ್ಡದೆಂದೇ ತೋರುವ ಹ್ಯಾಂಡ್‌ಬ್ಯಾಗ್ ಕೂಡ ನೆಟ್ ಓದುಗರಲ್ಲಿ ತೀರಾ ಕುತೂಹಲ ಕೆರಳಿಸಿದ್ದು. ಯಾಕೆಂದರೆ ಈ ಬಿರ್ಕಿನ್ ಬ್ಯಾಗ್‌ನ ಬೆಲೆ 17 ಲಕ್ಷ ರೂಪಾಯಿ! ಇದಲ್ಲದೆ, ಮಿರ ಮಿರ ಮಿರುಗುವ ಮುತ್ತಿನ ಸರ, ಕಿವಿಯೋಲೆಗಳು ಕೂಡ ಬಹುಚರ್ಚಿತ ವಿಷಯ.