ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾವುದೇ ಪ್ರಮುಖ ಹಗರಣವನ್ನು ವ್ಯಾಪಿಸದ ಸರಕಾರಿ ಲೋಕಪಾಲ (Lokpal Bill | Kejriwal | Government | Anna hazare | Kiran bedi)
ಯಾವುದೇ ಪ್ರಮುಖ ಹಗರಣವನ್ನು ವ್ಯಾಪಿಸದ ಸರಕಾರಿ ಲೋಕಪಾಲ
ನವದೆಹಲಿ, ಗುರುವಾರ, 28 ಜುಲೈ 2011( 16:03 IST )
PTI
ಇತ್ತೀಚೆಗೆ ಬಹಿರಂಗವಾದ ಆದರ್ಶ್ ಹೌಸಿಂಗ್ ಹಗರಣ, ಕಾಮನ್‌ವೆಲ್ತ್ ಗೇಮ್ಸ್, ರೆಡ್ಡಿ ಸಹೋದರರ ಗಣಿ ಹಗರಣ, ಜೆಎಂಎಂ ಹಗರಣ, ಓಟಿಗಾಗಿ ನೋಟು ಪ್ರಕರಣ, ತಾಜ್ ಕಾರಿಡಾರ್ ಹಗರಣಗಳು ಸರಕಾರ ಮಂಡಿಸುತ್ತಿರುವ ಲೋಕಪಾಲ್ ಮಸೂದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾದರೆ ಯಾವ ಹಗರಣಗಳು ಸರಕಾರ ಮಂಡಿಸುತ್ತಿರುವ ಲೋಕಪಾಲ್ ಮಸೂದೆಯ ವ್ಯಾಪ್ತಿಗೆ ಬರುತ್ತವೆ? ಎಂದು ನಾಗರಿಕ ಸಮಿತಿ ಸದಸ್ಯ ಪ್ರಶಾಂತ್ ಭೂಷಣ್ ಕಿಡಿಕಾರಿದ್ದಾರೆ.
ಕೇಂದ್ರ ಸರಕಾರ ದುರ್ಬಲ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವುದು ಸರಿಯಲ್ಲ. ಆರಂಭಿಕ ಹಂತದಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರ ನಿಗ್ರಹಿಸಲು ಬಯಸಿದೆ ಎಂದು ಭೂಷಣ್ ವ್ಯಂಗ್ಯವಾಡಿದ್ದಾರೆ.
ಒಂದು ವೇಳೆ, ಸರಕಾರ ಇಂತಹ ದುರ್ಬಲ ಲೋಕಪಾಲ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಲ್ಲಿ ಸಂಸತ್ತಿನಲ್ಲಿ ಸ್ಥಾಯಿ ಸಮಿತಿ ಕೂಡಾ ಅಸಹಾಯಕವಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸಂಸತ್ತು ಮತ್ತು ಸ್ಥಾಯಿ ಸಮಿತಿಗಳಿಗೆ ತನ್ನದೇ ಆದ ಇತಿ ಮಿತಿಗಳಿರುತ್ತವೆ. ಸಂಸತ್ತಿನ ಸ್ಥಾಯಿ ಸಮಿತಿ, ಲೋಕಪಾಲ್ ಮಸೂದೆಗೆ ಕೆಲ ಸಲಹೆ ಹಾಗೂ ಕೆಲ ತಿದ್ದುಪಡಿಗಳಿಗಾಗಿ ಸಲಹೆ ನೀಡಬಹುದು. ಆದರೆ, ಮಸೂದೆಯನ್ನು ಸಂಪೂರ್ಣವಾಗಿ ತಿದ್ದುವ ನ್ಯಾಯಾಂಗ ವ್ಯಾಪ್ತಿಯನ್ನು ಹೊಂದಿಲ್ಲ. ಮಸೂದೆಯ ಮೂಲ ನೀತಿಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.