ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಿಕ್ಷಣ ಹಕ್ಕು ಕಾಯ್ದೆ ವಿರೋಧಿಸಿದ ದಿಯೋಬಂದ್ (Right to Education Act | Darul Uloom Deoband | Madarsas | Minority institutions)
PTI
ಕೇಂದ್ರ ಸರಕಾರದ ಶಿಕ್ಷಣ ಹಕ್ಕು ಕಾಯ್ದೆ ಮದರಸಾಗಳು ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಾರ್ವಭೌಮತೆ ವಿರುದ್ಧದ ದಾಳಿಯಾಗಲಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುವುದಾಗಿ ಇಸ್ಲಾಮಿಕ್ ಸಂಸ್ಥೆಯಾದ ದರೂಲ್ ಉಲೂಮ್ ದಿಯೋಬಂದ್ ಕಿಡಿಕಾರಿದೆ.

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಈಗಾಗಲೇ ಹೋರಾಡುತ್ತಿರುವ ಆಲ್ ಇಂಡಿಯಾ ಮುಸ್ಲಿಂ ಪರ್ಸೋನಲ್ ಲಾ ಬೋರ್ಡ್‌ನೊಂದಿಗೆ ದರೂಲ್ ಉಲೂಮ್ ದಿಯೋಬಂದ್ ಕೂಡಾ ಹೋರಾಟಕ್ಕೆ ಕೈಜೋಡಿಸಲಿದೆ ಎಂದು ಉಪ-ಕುಲಪತಿ ಮೌಲಾನಾ ಅಬುಲ್ ಖಾಸೀಂ ನೊಮನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂತಹ ಕಾಯ್ದೆ ಜಾರಿಗೆ ತರುವುದರಿಂದ ಮದರಸಾಗಳ ಸ್ವತಂತ್ರಕ್ಕೆ ಹಾಗೂ ಅದರ ಶಿಕ್ಷಣ ವ್ಯವಸ್ಥೆಗೆ ಬೆದರಿಕೆಯೊಡ್ಡಲಿದೆ. ಶಿಕ್ಷಣ ಹಕ್ಕು ಕಾಯ್ದೆಯಿಂದ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹೊರಗಿಡದಿದ್ದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಳೆದ ವರ್ಷ ನಡೆದ ಜಮಿಯತ್ ಉಲಾಮಾ-ಎ-ಹಿಂದ್ ಆಯೋಜಿಸಿದ ಕಾರ್ಯಕಮದಲ್ಲಿ, ಮಾನವ ಸಂಪನ್ಮೂಲ ಸಚಿವರಾಗಿದ್ದ ಕಪಿಲ್ ಸಿಬಲ್, ಶಿಕ್ಷಣ ಹಕ್ಕು ಕಾಯ್ದೆಯಿಂದ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹೊರಗಿಡುವುದಾಗಿ ಭರವಸೆ ನೀಡಿದ್ದರು.ಆದರೆ, ಭರವಸೆಯನ್ನು ಈಡೇರಿಸಿಲ್ಲ ಎಂದು ಮೌಲಾನಾ ಅಬುಲ್ ಹೇಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶಿಕ್ಷಣ ಹಕ್ಕು ಕಾಯ್ದೆ, ದರೂಲ್ ಉಲೂಮ್ ದಿಯೋಬಂದ್, ಮದರಸಾ, ಅಲ್ಪಸಂಖ್ಯಾತ ಸಂಸ್ಥೆ