ಸಿಬಿಐ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ: ಚಾಂಡೋಲಿಯಾ
ನವದೆಹಲಿ, ಶುಕ್ರವಾರ, 29 ಜುಲೈ 2011( 16:32 IST )
PTI
ಬಹುಕೋಟಿ 2ಜಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಸಹಚರ ಹಾಗೂ ಹಗರಣದ ಆರೋಪಿ ಆರ್‌ಕೆ.ಚಾಂಡೋಲಿಯಾ ಆರೋಪಿಸಿದ್ದಾರೆ.
ಚಾಂಡೋಲಿಯಾ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ನೀಡಿ, ಸಿಬಿಐ ಅಧಿಕಾರಿಗಳು 2ಜಿ ಹಗರಣದಲ್ಲಿ ಆರೋಪಿಯಾಗಿ ಅಥವಾ ಸಾಕ್ಷಿಯಾಗಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಟೆಲಿಕಾಂ ಸಚಿವ ಎ.ರಾಜಾ ವಿರುದ್ಧ ಕಿಡಿಕಾರಿದ ಚಾಂಡೋಲಿಯಾ, ಅವರು ನಮ್ಮ ಬಾಸ್ ಆಗಿದ್ದರೂ ಸಹ ವಿವಾದಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ತಾವು ದೂರವಿರುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
2ಜಿ ತರಂಗಗುಚ್ಚ ಹಗರಣದಲ್ಲಿ ಎಲ್ಲಾ ನಿರ್ಧಾರಗಳನ್ನು ರಾಜಾ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದರು. ತಾವು ಕೇವಲ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದುದಾಗಿ ಚಾಂಡೋಲಿಯಾ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.