ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೊಲೀಸರ ಗುಂಡುಗಳನ್ನು ಎದುರಿಸಲು ಸಿದ್ಧ : ಹಜಾರೆ (Anna Hazare | Lokpal Bill | Parliament)
PTI
ಸಶಕ್ತ ಲೋಕಪಾಲ ಮಸೂದೆ ಜಾರಿಗೆ ತರಲು ಹೋರಾಟ ನಡೆಸುತ್ತಿರುವ ತಮಗೆ ದೇಶದ ಜನತೆ ಬೆಂಬಲ ನೀಡುವಂತೆ ಕರೆ ನೀಡಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಜೈಲಿಗೆ ಹೋಗಲು ಸಿದ್ಧ ಹಾಗೂ ಪೊಲೀಸರ ಗುಂಡಿಗೆ ಎದೆಯೊಡ್ಡಲು ಕೂಡಾ ಸಿದ್ಧ ಎಂದು ಘೋಷಿಸಿದ್ದಾರೆ.

ಸಶಕ್ತ ಲೋಕಪಾಲ ಮಸೂದೆಯನ್ನು ಜಾರಿಗೆ ತರುವುದಾಗಿ ಹೇಳಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜನತೆಯನ್ನು ವಂಚಿಸಿದೆ. ಲೋಕಪಾಲ ಮಸೂದೆಯಿಂದ ಪ್ರಧಾನಿ ಹಾಗೂ ನ್ಯಾಯಾಂಗವನ್ನು ಕೂಡಾ ಹೊರಗಿಟ್ಟಿರುವುದನ್ನು ವಿರೋಧಿಸಿ ಆಗಸ್ಟ್ 16 ರಿಂದ ಅಮರಣಾಂತ ನಿರಶನ ಆರಂಭಿಸುವುದಾಗಿ ನಿನ್ನೆ ಹೇಳಿಕೆ ನೀಡಿದ್ದರು.

ಸರಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡ ಹಜಾರೆ, ಸರಕಾರ ದೇಶದ ಜನಸಾಮಾನ್ಯರನ್ನು ವಂಚಿಸುತ್ತಿದೆ. ಸರಕಾರಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶ ಹೊಂದಿದೆಯೇ ಎನ್ನುವ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಣ್ಣಾ ಹಜಾರೆ ಕಳೆದ ಏಪ್ರಿಲ್ 5 ರಂದು ಜಂತರ್ ಮಂತರ್‌ನಲ್ಲಿ ನಡೆಸಿದ್ದ ಅಮರಣಾಂತ ನಿರಶನ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಸಶಕ್ತ ಲೋಕಪಾಲ ಮಸೂದೆಗಾಗಿ ಹೋರಾಟ ನಡೆಸುವುದು ಎರಜನೇ ಬಾರಿಗೆ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿದಂತೆ ಎಂದು ರಣಕಹಳೆ ಮೊಳಗಿಸಿದ್ದಾರೆ.

ಇದೊಂದು ಪ್ರಜಾಪ್ರಭುತ್ವ ರಾಷ್ಟ್ರ.ಜನತೆಯ ಅನಿಸಿಕೆಗಳ ಅನುಗುಣವಾಗಿ ಸರಕಾರ ನಡೆಯಬೇಕು. ದೇಶದ ಪ್ರತಿಯೊಬ್ಬ ನಾಗರಿಕ ಲೋಕಪಾಲ ಮಸೂದೆಯ ವ್ಯಾಪ್ತಿಯಡಿಯಲ್ಲಿ ಬರಬೇಕು. ಒಂದು ವೇಳೆ ದೇಶದ ಜನತೆ ಇಂದಿನ ಸಂದರ್ಭದಲ್ಲಿ ಜಾಗೃತಗೊಳ್ಳದಿದ್ದಲ್ಲಿ. ಭ್ರಷ್ಟಾಚಾರ ಯಾವತ್ತು ಅಂತ್ಯಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲು ಯತ್ನಿಸುತ್ತಿದೆ. ಬಾಬಾ ರಾಮದೇವ್ ಅವರ ನಿರಶನದ ಮೇಲೆ ಪೊಲೀಸರ ನಡೆಸಿದ ದೌರ್ಜನ್ಯವನ್ನು ಕಂಡ ನಮ್ಮ ತಂಡ, ಅಂತಹ ಕ್ಷಣಗಳನ್ನು ಎದುರಿಸಲು ಕೂಡಾ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಲೋಕಪಾಲ ಮಸೂದೆ, ಸಂಸತ್ತು