ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಸ್ಲಾಂ ಬಗೆಗಿನ ಸುಬ್ರಹ್ಮಣ್ಯಂ ಸ್ವಾಮಿ ಲೇಖನ ವಿವಾದದಲ್ಲಿ (National Commission for Minorties| Mumbai blasts | Subramanian Swamy| Hate article)
ಇಸ್ಲಾಂ ಬಗೆಗಿನ ಸುಬ್ರಹ್ಮಣ್ಯಂ ಸ್ವಾಮಿ ಲೇಖನ ವಿವಾದದಲ್ಲಿ
ನವದೆಹಲಿ, ಶನಿವಾರ, 30 ಜುಲೈ 2011( 17:24 IST )
PTI
ಮುಂಬೈ ಸ್ಫೋಟದ ನಂತರ ಭಾರತ ಇಸ್ಲಾಮಿಕ್ ಭಯೋತ್ಪಾದನೆಯನ್ನು ಹೇಗೆ ನಿಗ್ರಹಿಸಿತು ಎನ್ನುವ ಬಗ್ಗೆ ಜನತಾ ಪಾರ್ಟಿ ಮುಖ್ಯಸ್ಥ ಸುಬ್ರಹ್ಮಣ್ಯಂ ಸ್ವಾಮಿ ಲೇಖನ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದೊಂದು ದ್ವೇಷಿಸುವ ಲೇಖನ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಿಡಿಕಾರಿದೆ.
ಅಲ್ಪ ಸಂಖ್ಯಾತರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಸ್ವಾಮಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕಾನೂನು ಸಲಹೆಗಾರರೊಂದಿಗೆ ಸ್ವಾಮಿ ಲೇಖನವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಸಂವಿಧಾನದ ಕಾಯ್ದೆ 153a, 153ಬಿ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ವಜಾಹತ್ ಹಬೀಬುಲ್ಲಾ ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಎಕಾನಾಮಿಕ್ಸ್ ವಿಷಯ ಬೋಧನೆ ಮಾಡುತ್ತಿರುವ ಸ್ವಾಮಿಯವರನ್ನು ವಜಾಗೊಳಿಸುವಂತೆ ನೂರಾರು ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕ ಸಿಬ್ಬಂದಿಗಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನನ್ನ ಮನಸ್ಸಿನಲ್ಲಿರುವ ಭಾವನೆಗಳನ್ನು ಬಹಿರಂಗಪಡಿಸಿದ್ದೇನೆ. ಉಗ್ರರ ದಾಳಿಗಳಿಂದ ಆತಂಕಗೊಂಡಿರುವ ಭಾರತೀಯರು ನನ್ನ ಅನಿಸಿಕೆಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸ್ವಾಮಿ ದೂರವಾಣಿ ಮೂಲಕ ತಿಳಿಸಿದ್ದಾರೆ.
ಇದೊಂದು ಕೆಟ್ಟ ಹಾಗೂ ಸರಕಾರಿ ವಿರೋಧಿ ಲೇಖನ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.