ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈಸ್ಫೋಟದಲ್ಲಿ ಮೃತರ ಸಂಖ್ಯೆ 26ಕ್ಕೆ ಏರಿಕೆ (Mumbai blasts | Toll rises | Died | Opera House | Kabootar Khana | J J Hospital)
PTI
ಕಳೆದ 13 ರಂದು ನಡೆದ ಮುಂಬೈ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪುವುದರೊಂದಿಗೆ ಸ್ಫೋಟದಲ್ಲಿ ಮೃತರಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

42 ವರ್ಷ ವಯಸ್ಸಿನ ಚಂದ್ರಕಾಂತ್ ವಾಂಕರ್, ಹರ್ಕಿಸನ್‌ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಿಗ್ಗೆ 6.20ಕ್ಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಓಪೆರಾ ಹೌಸ್‌ನಲ್ಲಿ ನಡೆದ ಸ್ಫೋಟದಲ್ಲಿ ಗಂಭೀರವಾಗಿ ಸುಟ್ಟಗಾಯಗಳಿಂದ ಬಳಲುತ್ತಿದ್ದ ಚಂದ್ರಕಾಂತ್ ಇಂದು ಸಾವನ್ನಪ್ಪಿದ್ದಾರೆ. 48 ವರ್ಷ ವಯಸ್ಸಿನ ವಲ್ಲಭ್ ಗಡಿಯಾ ಕೂಡಾ ಓಪೆರಾ ಹೌಸ್‌ನಲ್ಲಿ ಗಾಯಗೊಂಡಿದ್ದು
ಕಳೆದ ವಾರ ಸಾವನ್ನಪ್ಪಿದ್ದರು.

ದಾದರ್‌ನ ಕಬೂತರ್‌ಖಾನದಲ್ಲಿ ನಡೆದ ಸ್ಫೋಟದಲ್ಲಿ ವೃತ್ತಿಯಿಂದ ಬಡಿಗನಾಗಿರುವ ಮನ್‌ಕೇಶ್ವರ್ ವಿಶ್ವಕರ್ಮ ಕೂಡಾ ಗಂಭೀರ ಗಾಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಜೆಜೆ ಆಸ್ಪತ್ರೆಯಲ್ಲಿ 22 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಆರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಹರ್ಕಿಸನ್‌ದಾಸ್ ಆಸ್ಪತ್ರೆಯಲ್ಲಿ 12 ಮಂದಿ ದಾಖಲಾಗಿದ್ದು, ಕೆಲವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಂಬೈ ಸ್ಫೋಟ, ಮೃತರ ಸಂಖ್ಯೆ ಏರಿಕೆ, ಓಪೆರಾ ಹೌಸ್, ಕಬೂತರ್ ಖಾನಾ, ಜೆಜಿ ಆಸ್ಪತ್ರೆ