ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರದ ದಾಳಿ-ಪ್ರತಿದಾಳಿ: 'ಮುಂಗಾರು' ಮಳೆಗೆ ಸಂಸತ್ ಸಿದ್ಧತೆ (Monsoon Session | Parliament | Corruption | BJP | UPA)
PTI
ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದ ಬಳಿಕ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಆನೆಬಲ ಒಗ್ಗೂಡಿಸಿಕೊಂಡಿರುವ ಬಿಜೆಪಿ, ಸೋಮವಾರ ಆರಂಭವಾಗುತ್ತಿರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಭ್ರಷ್ಟಾಚಾರ ಆರೋಪಗಳ ಸುರಿಮಳೆಯನ್ನೇ ಎದುರಿಸುತ್ತಿರುವ ಯುಪಿಎ ವಿರುದ್ಧ ಮುಗಿಬೀಳಲು ಸಕಲ ರೀತಿಯಲ್ಲೂ ಸಜ್ಜಾಗಿದೆ.

ಅದೇ ರೀತಿ, ಬಿಜೆಪಿಯ ಈ ಪ್ರತಿದಾಳಿಯನ್ನು ಎದುರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಡ ಸರ್ವ ಸನ್ನದ್ಧವಾಗಿದ್ದು, ಈ ಎರಡೂ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಹೋರಾಟ-ಹಾರಾಟದ ನಡುವೆ ಸಂಸತ್ ಅಧಿವೇಶನವಿಡೀ ಗದ್ದಲಕ್ಕೆ ಕಾರಣವಾಗಿ, ನಾಗರಿಕ ಸಮಾಜ ಬಯಸುತ್ತಿರುವ ಸಮರ್ಥ, ಪ್ರಬಲವಾದ ಭ್ರಷ್ಟಾಚಾರ ನಿಗ್ರಹಕ್ಕಾಗಿರುವ ಲೋಕಪಾಲ ಕಾಯ್ದೆ ಮೂಲೆಗುಂಪಾಗಲಿದೆಯೇ ಎಂಬುದು ಪ್ರಜೆಗಳ ಆತಂಕ.

ಭ್ರಷ್ಟಾಚಾರ ಪ್ರಕರಣಗಳು, 2ಜಿ ಹಗರಣದಲ್ಲಿ ಪ್ರಧಾನಿ, ಗೃಹ ಸಚಿವರ ಹೆಸರು ಕೇಳಿಬರುತ್ತಿರುವುದು, ತೆಲಂಗಾಣ ಪ್ರತ್ಯೇಕ ರಾಜ್ಯ ಕೋಲಾಹಲ, ಮತ್ತೆ ಎದ್ದು ನಿಂತಿರುವ ಭಯೋತ್ಪಾದನೆ, ವಿದೇಶದಲ್ಲಿ ಕಪ್ಪು ಹಣ, ಸತ್ಯಾಗ್ರಹಿ ರಾಮದೇವ್ ಬೆಂಬಲಿಗರ ಮೇಲೆ ರಾತೋರಾತ್ರಿ ಪೊಲೀಸ್ ಬಲ ಪ್ರಯೋಗ... ಇವೆಲ್ಲವೂ ಐದು ವಾರಗಳ ಕಾಲ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳಿಗೆ ಯುಪಿಎ ಮೇಲೆ ಹರಿಹಾಯಲು ಸೂಕ್ತ ಆಯುಧಗಳನ್ನು ಒದಗಿಸಿಕೊಟ್ಟಿದೆ.

ಎಡಪಕ್ಷಗಳು ಹಾಗೂ ಬಲಪಂಥೀಯ ಪಕ್ಷಗಳು - ಎರಡೂ ಬಣಗಳು ಸರಕಾರದ ವಿರುದ್ಧ ಮುಗಿಬಿದ್ದಿವೆ ಎಂಬುದು ಯುಪಿಎಗೆ ಈಗಾಗಲೇ ಮನವರಿಕೆಯಾಗತೊಡಗಿದ್ದು, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಂಗಾರು ಅಧಿವೇಶನ, ಸಂಸತ್, ಭ್ರಷ್ಟಾಚಾರ, ಯುಪಿಎ, ಕಾಂಗ್ರೆಸ್, ಬಿಜೆಪಿ, ಮನಮೋಹನ್ ಸಿಂಗ್, ಯಡಿಯೂರಪ್ಪ