ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತದಾನಕ್ಕೆ ಸರಕಾರ ಅಸ್ತು: ನಾಳೆಯಿಂದ ಸುಗಮ ಕಲಾಪ (Monsoon Session | Parliament | Manmohan Singh)
PTI
ಮುಂಗಾರು ಅಧಿವೇಶನ ಆರಂಭವಾಗಿ ಎರಡು ದಿನಗಳ ಕೋಲಾಹಲದ ನಂತರ, ಇದೀಗ ಸಂಸತ್ತು ಸುಗಮವಾಗಿ ಸಾಗುವ ಸಾಧ್ಯತೆಗಳಿವೆ.

ಸರಕಾರ ಮತ್ತು ವಿರೋಧ ಪಕ್ಷಗಳು, ನಾಳೆಯಿಂದ ಸುಗಮವಾಗಿ ಚರ್ಚೆ ನಡೆಯಲು ಸಮ್ಮತಿಸುವ ಒಪ್ಪಂದಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ದರ ಏರಿಕೆ ಕುರಿತಂತೆ ಚರ್ಚೆ ನಡೆಯಲಿದೆ. ರಾಜ್ಯಸಭೆಯಲ್ಲಿ ಮುಂಬೈ ಸರಣಿ ಸ್ಫೋಟದ ಕುರಿತಂತೆ ಚರ್ಚೆ ನಡೆಸಲು ಸರಕಾರ ಮತ್ತು ವಿರೋಧ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ..

ಲೋಕಸಭೆಯಲ್ಲಿ ಚರ್ಚೆಯ ನಂತರ ಮತದಾನದ ಪ್ರಕ್ರಿಯೆ ಹೊಂದಿರುವ ಕಾಯ್ದೆ 184ರ ಅಡಿಯಲ್ಲಿ ದರ ಏರಿಕೆ ಕುರಿತಂತೆ ಚರ್ಚೆ ನಡೆಯಲಿದೆ.ನಂತರದ ದಿನಗಳಲ್ಲಿ ರಾಜ್ಯಸಭೆಯಲ್ಲಿ ಕೂಡಾ ದರ ಏರಿಕೆಯ ಚರ್ಚೆಯಾಗಲಿವೆ

ಇದಕ್ಕಿಂತ ಮೊದಲು ಸರಕಾರ, ದರ ಏರಿಕೆ ಬಗ್ಗೆ ಚರ್ಚೆಗೆ ಸಿದ್ಧವಾಗಿತ್ತು,ಆದರೆ ಮತದಾನ ಬೇಡ ಎಂದು ತಿರಸ್ಕರಿಸಿತ್ತು.

ದರ ಏರಿಕೆ ಚರ್ಚೆಯ ನಂತರ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾಗಿರುವ ಮಾಯಾವತಿ ಸರಕಾರ ವಜಾ ಹಾಗೂ ಅಜ್ಮಲ್ ಕಸಬ್ ಮತ್ತು ಅಫ್ಜಲ್ ಗುರು ವಿವಾದಗಳು ಕೇಂದ್ರ ಸರಕಾರವನ್ನು ಬೆಚ್ಚಿಬೀಳಿಸಲಿವೆ.

ಬಿಜೆಪಿ, ಬಿಎಸ್‌ಪಿ, ಎಸ್‌ಪಿ ಮತ್ತು ಶಿವಸೇನಾ ಪಕ್ಷಗಳು ಹಲವು ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸದನದ ಬಾವಿಗೆ ತೆರಳಲು ಯತ್ನಿಸಿದಾಗ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ನಂತರ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣದಿರುವುದರಿಂದ ಅಂತಿಮವಾಗಿ ನಾಳೆಗೆ ಮುಂದೂಡಲಾಯಿತು.

ಬಿಜೆಪಿ ಮುಖಂಡ ವೇಕಯ್ಯನಾಯ್ಡು ನೇತೃತ್ವದಲ್ಲಿ ಎಡಪಕ್ಷಗಳು, ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಿ, ದರ ಏರಿಕೆ ಹಾಗೂ ಹಣದುಬ್ಬರ ಏರಿಕೆ ಕುರಿತಂತೆ ಚರ್ಚೆಗೆ ಅವಕಾಶ ನೀಡುವಂತೆ ಉಪಸಭಾಪತಿಗಳನ್ನು ಒತ್ತಾಯಿಸಿದಾಗ ಅಡಳಿತ ಪಕ್ಷದ ಸದಸ್ಯರಿಂದ ತೀವ್ರ ಪ್ರತಿರೋಧ ಎದುರಾಗಿ ಕೋಲಾಹಲ ಸೃಷ್ಟಿಯಾಗಿ ಸದನ ಮುಂದೂಡಲಾಯಿತು ಎಂದು ಸಂಸತ್ ಮೂಲಗಳು ತಿಳಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮನಮೋಹನ್ ಸಿಂಗ್, ಸಂಸತ್ತು, ಬಿಜೆಪಿ, ಮುಂಗಾರು ಅಧಿವೇಶನ, ಎನ್ಡಿಎ, ಯುಪಿಎ