ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಕತ್ತಿದ್ದರೆ ಸಿಬಲ್ ಕ್ಷೇತ್ರದಿಂದ ಸ್ಪರ್ಧಿಸಿ: ಅಣ್ಣಾಗೆ ತಿವಾರಿ (Kapil sibal constituency | Anna HazareTeam | Anna)
ಸಚಿವ ಕಪಿಲ್ ಸಿಬಲ್ ಕ್ಷೇತ್ರವಾದ ಚಾಂದಿನಿ ಚೌಕ್‌ನಲ್ಲಿ ಜನಲೋಕಪಾಲ ಮಸೂದೆಗೆ ಸಂಬಂಧಿಸಿದ ಜನಮತಗಣನೆಯ ಫಲಿತಾಂಶವನ್ನು ಹಜಾರೆ ತಂಡ ಘೋಷಿಸುತ್ತಿದ್ದಂತೆ ಕಾಗ್ರೆಸ್ ವಲಯದಲ್ಲಿ ಆಕ್ರೋಶ ಮೂಡಿಸಿತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಚಾಂದಿನಿ ಚೌಕ್‌ನ ಶೇ.85ರಷ್ಟು ಮತದಾರರು ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಸೇರ್ಪಡೆಯನ್ನು ಬೆಂಬಲಿಸಿದ್ದಾರೆ ಎಂದು ಹಜಾರೆ ಘೋಷಿಸಿದ ಬೆನ್ನಲ್ಲೇ, ತಾಕತ್ತಿದ್ದರೆ ಕಪಿಲ್ ಸಿಬಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಅಣ್ಣಾಗೆ ಕಾಂಗ್ರೆಸ್ ಸವಾಲು ಹಾಕಿದೆ.

ಅಣ್ಣಾ ತಂಡ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ ನಂತರವೂ ಕಪಿಲ್ ಸಿಬಲ್ ಚಾಂದಿನಿ ಚೌಕ್ ಜನತೆಯನ್ನು ಪ್ರತಿನಿಧಿಸುತ್ತಾರಾ? ಎಂದು ಕ್ರೇಜಿವಾಲ್ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ, ತಾಕತ್ತಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಣ್ಣಾ ತಂಡ ಚಾಂದಿನಿ ಚೌಕ್‌ನಿಂದ ಸ್ಪರ್ಧಿಸಿ ತೋರಿಸಲಿ ಆಗ ನಿಜ ಗೊತ್ತಾಗುತ್ತದೆ ಎಂದು ಸವಾಲೆಸೆದರು.

ನೀವು ಸಮೀಕ್ಷೆ ಕೈಗೊಳ್ಳಿ. ಆದರೆ ಸಂವಿಧಾನದ ಮೂಲರಚನೆಯ ಜೊತೆ ಆಟವಾಡುವುದು ಬೇಡ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ ಅಣ್ಣಾ ತಂಡಕ್ಕೆ ಸಲಹೆ ನೀಡಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕಪಿಲ್ ಸಿಬಲ್ ಸಂಸತ್ ಕ್ಷೇತ್ರ, ಅಣ್ಣಾ ಹಜಾರೆ ತಂಡ, ಮನೀಷ್ ತಿವಾರಿ, ಕಾಂಗ್ರೆಸ್