ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಲೋಕಪಾಲ ಮಸೂದೆಗೆ ಜನತೆಯ ಬೆಂಬಲ: ಅಣ್ಣಾ ಹಜಾರೆ (Anna Hazare | Jan Lokpal Bill | Arvind Kejriwal | Corruption | Prime Minister)
PTI
ಜನಲೋಕಪಾಲ ಮಸೂದೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಸರಕಾರದ ಲೋಕಪಾಲ ಮಸೂದೆ ಜನಸಾಮಾನ್ಯರ ಬಡವರ ವಿರೋಧಿಯಾಗಿದೆ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಹಜಾರೆ ತಂಡದ ಸದಸ್ಯ ಕೇಜ್ರಿವಾಲ್ ಮಾತನಾಡಿ, ಕೆಲ ಸಂಸದೀಯ ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸಾರ್ವಜನಿಕರಿಗೆ ಸಶಕ್ತ ಲೋಕಪಾಲ ಮಸೂದೆ ಜಾರಿಯಾಗುವ ಪರವಾಗಿದ್ದಾರೆ. ಶೇ.85 ರಷ್ಟು ಜನತೆ ಪ್ರಧಾನಿ ಲೋಕಪಾಲ ಮಸೂದೆ ವ್ಯಾಪ್ತಿಗೆ ಬರಬೇಕು ಎನ್ನುವ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ನಾಗರಿಕ ಸಮಿತಿ ತಂಡ, ಕೇಂದ್ರ ಸಚಿವ ಕಪಿಲ್ ಸಿಬಲ್ ಸಂಸದೀಯ ಕ್ಷೇತ್ರವಾದ ಚಾಂದಿನಿ ಚೌಕ್‌ನಲ್ಲಿ ಸಮೀಕ್ಷೆ ನಡೆಸಿತ್ತು. ನಂತರ ಮಹಾರಾಷ್ಟ್ರದ ಅಮರಾವತಿ ಸಂಸದೀಯ ಕ್ಷೇತ್ರದಲ್ಲಿ ಶೇ.96ರಷ್ಟು ಜನತೆ ಪ್ರದಾನಿ ಲೋಕಪಾಲ ವ್ಯಾಪ್ತಿಗೆ ಒಳಪಡಬೇಕು ಎಂದು ಬಯಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಜನಲೋಕಪಾಲ ಮಸೂದೆಗೆ ಸಾರ್ವಜನಿಕರ ಭಾರಿ ಬೆಂಬಲವಿದೆ.ಸರಕಾರಿ ಲೋಕಪಾಲ ಮಸೂದೆ ಮಂಡನೆಗೆ ಸರಕಾರ ಆಸಕ್ತಿವಹಿಸಿದೆ.ಸರಕಾರ ಜನತೆಯ ಭಾವನೆಗಳಿಗೆ ಸ್ಪಂದಿಸದಿದ್ದಲ್ಲಿ ಇದು ಪ್ರಜಾಪ್ರಭುತ್ವವೇ ಎಂದು ಸರಕಾರದ ಕಿಡಿಕಾರಿದ್ದಾರೆ.

ಅಣ್ಣಾ ಹಜಾರೆ ಮಾತನಾಡಿ, ಜನಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತೆ ಒತ್ತಾಯಿಸಿ ಆಗಸ್ಟ್ 16 ರಂದು ಜಂತರ್ ಮಂತರ್‌ನಲ್ಲಿ ಅಮರಣ ನಿರಶನ ಆರಂಭಿಸಲಾಗುವುದು. ಸರಕಾರಕ್ಕೆ ಭ್ರಷ್ಟಾಚಾರ ನಿರ್ಮೂಲನೆಗೊಳಿಸವ ಇಚ್ಚೆಯಿಲ್ಲ. ಭ್ರಷ್ಟಾಚಾರ ತಡೆಗಾಗಿ ಪೊಲೀಸರ ಗುಂಡುಗಳನ್ನು ಎದುರಿಸಲು ಸಿದ್ಧ ಎಂದು ಘೋಷಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ, ಅರವಿಂದ್ ಕೇಜ್ರಿವಾಲ್, ಭ್ರಷ್ಟಾಚಾರ, ಪ್ರಧಾನಮಂತ್ರಿ