ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ್ ಪ್ರತಿಗೆ ಬೆಂಕಿ, ಸಂಸತ್‌ಗೆ ಅಗೌರವ: ಸಿಬಲ್ (Lokpal Bill | Kiran Bedi | Kapil Sibal | Arvind Kejriwal | Anna Hazare)
ಲೋಕಪಾಲ್ ಪ್ರತಿಗೆ ಬೆಂಕಿ, ಸಂಸತ್‌ಗೆ ಅಗೌರವ: ಸಿಬಲ್
ನವದೆಹಲಿ, ಗುರುವಾರ, 4 ಆಗಸ್ಟ್ 2011( 20:20 IST )
PTI
ಲೋಕಪಾಲ ಮಸೂದೆಯ ಪ್ರತಿಗಳನ್ನು ಸುಟ್ಟಿರುವುದರಿಂದ ಸಂಸತ್ತಿಗೆ ಅಗೌರವ ತೋರಿದಂತಾಗಿದೆ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್, ಅಣ್ಣಾ ಹಜಾರೆ ತಂಡದ ವಿರುದ್ಧ ಕಿಡಿಕಾರಿದ್ದಾರೆ.
ಅಣ್ಣಾ ಹಜಾರೆ ತಂಡ ಎಸಗಿದ ಕೃತ್ಯದಿಂದ ಸಂಸತ್ತಿಗೆ ಅವಮಾನವಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಂದು ವೇಳೆ ಹಜಾರೆಯವರಿಗೆ ಲೋಕಪಾಲ ಮಸೂದೆಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಪ್ರಸ್ತಾಪಿಸಬಹುದಿತ್ತು. ಅದನ್ನು ಬಿಟ್ಟು ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿರುವುದು ಸಂಸತ್ತಿಗೆ ಅಗೌರವ ತೋರಿದಂತಾಗಿದೆ ಎಂದರು.
ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡಿಸಿರುವುದು ವರದಿಯಾಗುತ್ತಿದ್ದಂತೆ, ಮಹಾರಾಷ್ಟ್ರದ ರಾಲೇಗಾಂವ್ ಸಿದ್ಧಿಯಲ್ಲಿ ಹಜಾರೆ ಮತ್ತು ಅವರ ಬೆಂಬಲಿಗರು, ಬಡವರ ವಿರೋಧಿ ಮತ್ತು ದಲಿತ ವಿರೋಧಿ ಲೋಕಪಾಲ ಮಸೂದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪ್ರತಿಗಳಿಗೆ ಬೆಂಕಿ ಹಚ್ಚಿದ್ದರು.
ಏತನ್ಮಧ್ಯೆ, ಹಜಾರೆ ಬೆಂಬಲಿಗರಾದ ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಮತ್ತು ಕಿರಣ್ ಬೇಡಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕೌಶಾಂಬಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ, ಸರಕಾರದ ವಿರುದ್ಧ ಕಿಡಿಕಾರಿದರು.
ನಾಗರಿಕ ಸಮಿತಿಯ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದನ್ನು ಖಂಡಿಸಿ, ಆಗಸ್ಟ್ 16 ರಿಂದ ಅಮರಣಾಂತ ನಿರಶನ ಆರಂಭಿಸುವುದಾಗಿ ಹಜಾರೆ ಹೇಳಿದ್ದಾರೆ.