ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದೀಯ ಸಮಿತಿಯ ಮುಂದೆ ಹಾಜರಾಗಲಿರುವ ಅಣ್ಣಾ ತಂಡ (Shanti Bhushan | Prashant Bhushan | Lokpal Bil l | Arvind Kejriwal | Anna Hazare)
PTI
ಲೋಕಪಾಲ ಮಸೂದೆ ವಿವಾದಗಳಿಂದ ತತ್ತರಿಸಿದ ಕಾಂಗ್ರೆಸ್, ಇದೀಗ ಸಂಸದೀಯ ಸ್ಥಾಯಿ ಸಮಿತಿ ಹಾಜರಾಗುವಂತೆ ನಾಗರಿಕ ಸಮಿತಿಯ ಅಣ್ಣಾ ಹಜಾರೆ ತಂಡಕ್ಕೆ ಅಹ್ವಾನ ನೀಡಿದೆ.

ಅರವಿಂದ್ ಕೇಜ್ರಿವಾಲ್ ಮಾತನಾಡಿ, ಅಭೀಷೇಕ್ ಸಿಂಘ್ವಿ ನೇತೃತ್ವದ ಸಂಸದೀಯ ಸಮಿತಿಯ ಅಹ್ವಾನ ಸ್ವೀಕರಿಸಿದ್ದು, ಅಣ್ಣಾ ಹಜಾರೆ,ಶಾಂತಿ ಭೂಷಣ್, ಪ್ರಶಾಂತ್ ಭೂಷಣ್ ಕೂಡಾ ಸಭೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಬಲಿಷ್ಠ ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಾಗರಿಕ ಸಮಿತಿಯ ಸದಸ್ಯರು, ಸರಕಾರದ ವಿರುದ್ಧ ಪ್ರಚಾರ ಆರಂಭಿಸಿದ್ದರಿಂದ, ಕಾಂಗ್ರೆಸ್ ಇಮೇಜ್‌ಗೆ ಧಕ್ಕೆಯಾಗಲಿದೆ ಎನ್ನುವ ಆತಂಕ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.

ಸಿಂಘ್ವಿ ನೇತೃತ್ವದ ಸಮಿತಿ, ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರವನ್ನು ತಡೆಯಲು ಸಿದ್ಧಪಡಿಸಲಾದ ನ್ಯಾಯಾಂಗ ಲೋಕಪಾಲ ಮಸೂದೆಯನ್ನು ಕೂಡಾ ಸಂಸತ್ತಿಗೆ ವಾಪಸ್ ಕಳುಹಿಸಿಕೊಡಲು ಯೋಜನೆಯನ್ನು ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶಾಂತಿಭೂಷಣ್, ಪ್ರಶಾಂತ್ ಭೂಷಣ್, ಲೋಕಪಾಲ ಮಸೂದೆ, ಅರವಿಂದ್ ಕೇಜ್ರಿವಾಲ್, ಅಣ್ಣಾ ಹಜಾರೆ