ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಾಠಿಚಾರ್ಜ್: ಪೊಲೀಸ್ ದೌರ್ಜನ್ಯ ಸಹಿಸಲಾಗದು: ಅಡ್ವಾಣಿ (L K Advani | Pranab Mukherjee | P Chidambaram | BJP | Parliament,)
ಲಾಠಿಚಾರ್ಜ್: ಪೊಲೀಸ್ ದೌರ್ಜನ್ಯ ಸಹಿಸಲಾಗದು: ಅಡ್ವಾಣಿ
ನವದೆಹಲಿ, ಗುರುವಾರ, 11 ಆಗಸ್ಟ್ 2011( 11:49 IST )
PTI
ಗೃಹ ಸಚಿವಾಲಯದ ನೇರ ಆದೇಶದ ಮೇರೆಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ವಿರುದ್ಧ ಪೊಲೀಸರು ಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ಮಾಡಿರುವ ಸಾಧ್ಯತೆಗಳಿವೆ. ಪೊಲೀಸ್ ದೌರ್ಜನ್ಯ ಸಹಿಸಲಾಗದು ಎಂದು ಕೇಂದ್ರದ ವಿತ್ತಖಾತೆ ಪ್ರಣಬ್ ಮುಖರ್ಜಿಯವರಿಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ದೂರಿದ್ದಾರೆ.
ಮುಖರ್ಜಿಯವರನ್ನು ಭೇಟಿ ಮಾಡಿದ ಅಡ್ವಾಣಿ, ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿ ಪೊಲೀಸರು ಗೃಹ ಸಚಿವಾಲಯದ ಆಧೀನದಲ್ಲಿರುವುದರಿಂದ, ಗೃಹ ಸಚಿವ ಪಿ.ಚಿದಂಬರಂ ಅಥವಾ ಉನ್ನತಾಧಿಕಾರಿಗಳ ಆದೇಶವಿಲ್ಲದೆ ಲಾಠಿಚಾರ್ಜ್ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ಕಾರ್ಯಕರ್ತರನ್ನು ದಾಖಲಿಸಿದ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅಡ್ವಾಣಿ, ಘಟನೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಮತ್ತೊಂದು ಅಯೋಧ್ಯೆಯಂತಹ ಘಟನೆ ಮರುಕಳಿಸುವುದು ಬೇಡ ಎಂದು ಮಾಧ್ಯಮಗಳ ಮುಂದೆ ಚಿದಂಬರಂ ಹೇಳಿಕೆ ನೀಡಿದ್ದಾರೆ ಎನ್ನುವ ವರದಿಗಳ ಕುರಿತಂತೆ, ಸಚಿವ ಮುಖರ್ಜಿಯವರಿಗೆ ಅಡ್ವಾಣಿ ಮಾಹಿತಿ ನೀಡಿದ್ದಾರೆ.