ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಖಿ: ರಾಹುಲ್, ಸೋನಿಯಾ ಪ್ರಧಾನಿ ಮೀರಿಸಿದ ಅಣ್ಣಾ ಹಜಾರೆ (Rakshabandhan | Rakhis | Rakhi | Lokpal Bill | Anna Hazare | The demand for rakhis)
PTI
ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ ಭಾವಚಿತ್ರಗಳನ್ನೊಳಗೊಂಡ ರಾಖಿಗಳ ಮಾರಾಟ ಗಗನಕ್ಕೇರಿದೆ. ಜನಪ್ರಿಯತೆಯಲ್ಲಿ ರಾಹುಲ್, ಸೋನಿಯಾ, ಪ್ರಧಾನಿ ಮತ್ತು ಧೋನಿಯನ್ನೂ ಕೂಡಾ ಅಣ್ಣಾ ಹಜಾರೆ ಮೀರಿಸಿದ್ದಾರೆ.

ಆಸಕ್ತಿಕರ ವಿಷಯವೆಂದರೆ, ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಜನಪ್ರಿಯ ಕ್ರಿಕೆಟಿಗ ಧೋನಿ ಅವರ ಭಾವಚಿತ್ರವಿರುವ ರಾಖಿಗಳ ಮಾರಾಟದಲ್ಲಿ ಭಾರಿ ಕುಸಿತವಾಗಿದೆ.

ರಕ್ಷ ಬಂಧನ ಹಬ್ಬವನ್ನು ರಾಖಿ ಹಬ್ಬ ಎಂದು ಕೂಡಾ ಕರೆಯಲಾಗುತ್ತದೆ. ರಾಖಿಯಲ್ಲಿ 74 ವರ್ಷ ವಯಸ್ಸಿನ ಹಜಾರೆಯವರ ಭಾವಚಿತ್ರವಿರುವುದರಿಂದ ರಾಜ್ಯದಲ್ಲಿ ಭಾರಿ ಬೇಡಿಕೆ ಉಂಟಾಗಿದೆ ಎನ್ನುತ್ತವೆ ವಹಿವಾಟಿನ ಮೂಲಗಳು.

ರಾಜ್ಯದ ಮುಖ್ಯಮಂತ್ರಿ ನಿತಿಷ್ ಕುಮಾರ್ ಮತ್ತು ಲಾಲು ಪ್ರಸಾದ್ ಕೂಡಾ ಅಣ್ಣಾ ಹಜಾರೆಯವರ ಭರಾಟೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಅಣ್ಣಾ ಹೆಸರಿರುವ ರಾಖಿಗಳು ಪಟಪಟನೆ ಮಾರಾಟವಾಗುತ್ತಿವೆ. ಗ್ರಾಹಕರು 'ಅಣ್ಣಾ' ರಾಖಿಗೆ ಮೊದಲ ಆದ್ಯತೆ ನೀಡುತ್ತಾರೆ. ಒಂದು ವೇಳೆ 'ಅಣ್ಣಾ" ರಾಖಿ ದೊರೆಯದಿದ್ದಲ್ಲಿ ನಿತಿಷ್ ಅಥವಾ ಲಾಲು ರಾಖಿಯನ್ನು ಖರೀದಿಸುತ್ತಾರೆ ಎಂದು ನಗರದಲ್ಲಿರುವ ರಾಖಿ ಅಂಗಡಿಯ ಮಾಲೀಕ ಗುಡ್ಡು ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ರಾಖಿ ಅಂಗಡಿಯ ಮಾಲೀಕ ಸುರೇಂದರ್ ಮಾತನಾಡಿ, 'ಅಣ್ಣಾ ಹಜಾರೆ' ಭಾವಚಿತ್ರವಿರುವ ರಾಖಿಗಳಿಗೆ ಯುವಕ, ಯುವತಿಯರು, ಮಕ್ಕಳಿಂದ ಭಾರಿ ಬೇಡಿಕೆಯಿದೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಕ್ಷಾ ಬಂಧನ, ರಾಖಿ ಹಬ್ಬ, ಅಣ್ಣಾ ಹಜಾರೆ, ಲೋಕಪಾಲ ಮಸೂದೆ, ರಾಖಿ ಬೇಡಿಕೆ ಹೆಚ್ಚಳ