ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಸಾಚಾ ಅಲ್ಲ ಸ್ವತಃ ಭ್ರಷ್ಟ: ಕಾಂಗ್ರೆಸ್ ಕಿಡಿ (Anna Hazare | corruption | Lokpal Bill | Manish Tewari | Congress | fast)
PTI
ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ವಿರೋಧಿಸಿ ಆ.16ರಿಂದ ಆಮರಣಾಂತ ಉಪವಾಸ ಕೈಗೊಳ್ಳಲು ನಿರ್ಧರಿಸಿರುವ ಅಣ್ಣಾ ಹಜಾರೆ ಚಳವಳಿಯನ್ನು ಹತ್ತಿಕ್ಕಲ್ಲು ದೆಹಲಿ ಪೊಲೀಸರು 22ಷರತ್ತುಗಳನ್ನು ಒಡ್ಡಿ ಅನುಮತಿ ನೀಡಿ ಕೇಂದ್ರ ಚಾಣಕ್ಯ ನೀತಿಯನ್ನು ಅನುಸರಿಸುತ್ತಿರುವ ಬೆನ್ನಲ್ಲೇ, ಗಾಂಧಿವಾದಿಯಾಗಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯೇ ಸ್ವತ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದಾಗಿ ಆರೋಪಿಸುವ ಮೂಲಕ ಕಾಂಗ್ರೆಸ್ ಬಹಿರಂಗವಾಗಿಯೇ ಸಮರಕ್ಕಿಳಿದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುಪ್ರೀಂಕೋರ್ಟ್ ನೇಮಕ ಮಾಡಿರುವ ಜಸ್ಟೀಸ್ ಸಾವಂತ್ ಕಮಿಷನ್ ಅಣ್ಣಾ ಹಜಾರೆಯ ಭ್ರಷ್ಟಾಚಾರವನ್ನು ದೃಢಪಡಿಸಿರುವುದಾಗಿಕಾಂಗ್ರೆಸ್ ಪಕ್ಷದ ವಕ್ತಾರ ಮನೀಶ್ ತಿವಾರಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಅಣ್ಣಾ ಮತ್ತು ಅವರ ತಂಡದ ವಿರುದ್ಧ ಕಿಡಿಕಾರಿದರು.

ಯಾವ ಮುಖ ಹೊತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯದ ದಿನದಂದು ಧ್ವಜಾರೋಹಣ ಮಾಡುವರು? ಎಂದು ಕೇಳುವ ಮೂಲಕ ಅಣ್ಣಾ ಹಜಾರೆ ಅವರು ಭಾರತದ ಧ್ವಜ ಮಾತ್ರವಲ್ಲ, ಸ್ವಾತಂತ್ರ್ಯ ತಂದುಕೊಟ್ಟ ವೀರಯೋಧರಿಗೆ ಅವಮಾನ ಮಾಡಿದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸ್ವತಃ ಅಣ್ಣಾ ಹಜಾರೆಯೇ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುದಲ್ಲದೇ, ಅವರ ಟೀಮ್ ಸದಸ್ಯರು ಭ್ರಷ್ಟಾಚಾರ, ಹಣ ಸುಲಿಗೆ, ಭೂ ಮಾಫಿಯಾ ಹಾಗೂ ಬ್ಲ್ಯಾಕ್ ಮೇಲ್ ಸೇರಿದಂತೆ ಹಲವು ಗಂಭೀರ ಆರೋಪ ಎದುರಿಸುತ್ತಿರುವುದಾಗಿಯೂ ಗಂಭೀರವಾಗಿ ಆರೋಪಿಸಿದರು.

ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುತ್ತಿರುವ ನಾಗರಿಕ ಸಮಾಜದ ತಂಡ 'ಎ-ಕಂಪನಿ' ಎಂಬುದಾಗಿ ಕಟುವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೇ ಅಣ್ಣಾ ಹಜಾರೆಯವರು ಎಲ್ಲಾ ರೀತಿಯಿಂದ ಸಹಜ ಸ್ವಭಾವದ ರೇಖೆಯನ್ನೂ ಮೀರಿ ವರ್ತಿಸುತ್ತಿದ್ದಾರೆ ಎಂದರು.

ಅಣ್ಣಾಗೆ ಮೇಲೆ ಭ್ರಷ್ಟಾಚಾರದ ಆರೋಪ:
ಅಣ್ಣಾ ಹಜಾರೆಯವರಿಗೆ ನಾಲ್ಕು ಸಂಸ್ಥೆ ಜತೆ ಸಂಪರ್ಕ ಇದ್ದು, ಅವೆಲ್ಲವನ್ನೂ ಭ್ರಷ್ಟಾಚಾರದ ಆರೋಪದಡಿಯಲ್ಲಿ ವಿಚಾರಣೆ ನಡೆಸಲಾಗಿದೆ. ಆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನಿಯೋಜಿಸಿದ ಜಸ್ಟೀಸ್ ಪಿಬಿ ಸಾವಂತ್ ಸಮಿತಿ, ಅಣ್ಣಾ ಹಜಾರೆ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂಬುದನ್ನು ಪತ್ತೆ ಹಚ್ಚಿರುವುದಾಗಿ ತಿವಾರಿ ಹೇಳಿದರು.

2003ರಲ್ಲಿ ಭ್ರಷ್ಟಾಚಾರದ ತನಿಖೆಗಾಗಿಯೇ ಜಸ್ಟೀಸ್ ಸಾವಂತ್ ಆಯೋಗ ರಚಿಸಿತ್ತು. ನಂತರ 2005 ಫೆಬ್ರವರಿ 22ರಂದು ಆಯೋಗ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿತ್ತು. ವರದಿಯನ್ವಯ ಹಿಂದ್ ಸ್ವರಾಜ್ ಟ್ರಸ್ಟ್ ಅಣ್ಣಾ ಹಜಾರೆ ಹುಟ್ಟುಹಬ್ಬದ ಸಂಭ್ರಮಕ್ಕಾಗಿಯೇ 2.20 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದು, ಇದು ಭ್ರಷ್ಟಾಚಾರದ ಪ್ರಾಕ್ಟೀಸ್ ಆಗಿರುವುದಾಗಿ ಉಲ್ಲೇಖಿಸಿತ್ತು. ಅಲ್ಲದೇ ಅಣ್ಣಾ ಪಾಲುದಾರಿಕೆಯ ಸಂತ ಯಾದವ್ ಬಾಬಾ ಶಿಕ್ಷಣ್ ಪ್ರಸಾರಕ್ ಮಂಡಲ್ ಟ್ರಸ್ಟ್‌ನ ಆಡಿಟ್ ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಕೊಡದಿರುವ ಬಗ್ಗೆಯೂ ವರದಿ ಆರೋಪಿಸಿದೆ.

ಇಷ್ಟೆಲ್ಲಾ ಆರೋಪ ಹೊತ್ತಿರುವ ಅಣ್ಣಾ ಹಜಾರೆ ಯಾವ ನೈತಿಕತೆ ಆಧಾರದ ಮೇಲೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತೀರಿ ಎಂದು ಪ್ರಶ್ನಿಸಿರುವ ತಿವಾರಿ, ಮೊದಲು ನಿಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಡಿ ಎಂದು ತಿರುಗೇಟು ನೀಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಜನಲೋಕಪಾಲ್, ಮನೀಶ್ ತಿವಾರಿ, ಕಾಂಗ್ರೆಸ್, ಯುಪಿಎ, ಉಪವಾಸ ಸತ್ಯಾಗ್ರಹ