ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 22 ಷರತ್ತು-ನಾ ಮಧ್ಯಪ್ರವೇಶಿಸಲ್ಲ: ಅಣ್ಣಾಗೆ ಪ್ರಧಾನಿ ಉತ್ತರ (Manmohan Singh | Anna Hazare | Delhi Police | Lokpal Bill | corruption)
PTI
ಭ್ರಷ್ಟಚಾರ ವಿರೋಧಿಸಿ ಆ.16ರಿಂದ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಹೇಳಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಗೆ ದೆಹಲಿ ಪೊಲೀಸರು 22 ಷರತ್ತುಗಳನ್ನೊಡ್ಡಿ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಅಣ್ಣಾ ಬರೆದ ಪತ್ರಕ್ಕೆ ನಿರಾಶದಾಯಕ ಉತ್ತರ ದೊರಕಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಉಪವಾಸ ಸತ್ಯಾಗ್ರಹ ಮಾಡಬೇಕಿದ್ದರೆ ಸರಕಾರದ 22 ಷರತ್ತುಗಳನ್ನು ಪಾಲಿಸಬೇಕಾ ಎಂದು ಕಿಡಿಕಾರಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, 'ಐ ಡೋಂಟ್ ಕೇರ್' ಎಂದಿದ್ದಾರಲ್ಲದೆ, ಸರಕಾರದ ಷರತ್ತುಗಳನ್ನು ತಿರಸ್ಕರಿಸಿದ್ದು, ಪೊಲೀಸರು ಏನು ಬೇಕಾದರೂ ಮಾಡಲಿ, ನಾವಂತೂ ಷರತ್ತುಗಳನ್ನು ಪಾಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ತಿರುಗೇಟು ನೀಡಿದ್ದರು.

ದೆಹಲಿ ಪೊಲೀಸರು ಒಡ್ಡಿದ್ದ ಷರತ್ತಿನಿಂದ ಕೋಪಗೊಂಡಿದ್ದ ಅಣ್ಣಾ ಹಜಾರೆ ಅವರು, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಷರತ್ತು ಸಡಿಲಿಸಬೇಕು ಅಲ್ಲದೇ ಈ ವಿಷಯದಲ್ಲಿ ತಾವು ಮಧ್ಯಪ್ರವೇಶಿಸಿ ಸ್ಥಳ ನಿಗದಿ ಮಾಡಬೇಕೆಂಬುದಾಗಿಯೂ ವಿನಂತಿ ಮಾಡಿಕೊಂಡಿದ್ದರು.

ಏತನ್ಮಧ್ಯೆ ದೆಹಲಿ ಪೊಲೀಸರು ಕೈಗೊಂಡ ನಿರ್ಧಾರದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಅಣ್ಣಾ ಹಜಾರೆ ಬರೆದ ಪತ್ರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಈ ರೀತಿ ಉತ್ತರ ನೀಡಿದ್ದಾರೆ.

ಪೊಲೀಸ್ ವ್ಯವಸ್ಥೆ ಒಂದು ಶಾಸನಬದ್ಧ ಪ್ರಾಧಿಕಾರ. ಅದಕ್ಕೆ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಈ ವಿಷಯದಲ್ಲಿ ನಮ್ಮ ಕಚೇರಿಯೂ ಯಾವುದೇ ರೀತಿಯಲ್ಲಿ ಮೂಗು ತೂರಿಸುವುದಿಲ್ಲ ಎಂದು ಎಂದು ಪ್ರಧಾನಿ ಉತ್ತರಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಮನಮೋಹನ್ ಸಿಂಗ್, ಉಪವಾಸ ಸತ್ಯಾಗ್ರಹ, ದೆಹಲಿ ಪೊಲೀಸ್, ಷರತ್ತು, ಜನಲೋಕಪಾಲ್