ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಮುಖವಾಡ ಧರಿಸಿರುವ ಫಕೀರ: ಕಾಂಗ್ರೆಸ್ (Anna hazare | Prime minister | Congress | BJP | Lokpall bill)
PTI
ಹಜಾರೆ ಮುಖವಾಡ ಧರಿಸಿರುವ ಫಕೀರ. ಅವರ ಹೋರಾಟದ ಹಿಂದೆ ಬಲಪಂಥೀಯರ ನೆರಳಿದೆ. ಬಲಪಂಥೀಯರ ಅಜೆಂಡಾದ ಭಾಗವಾಗಿ ಹಜಾರೆ ಹೋರಾಟ ನಡೆಯುತ್ತಿದೆ ಎಂದು ಸಚಿವ ಕಪಿಲ್ ಸಿಬಲ್ ಆರೋಪಿಸಿದ್ದಾರೆ.

ಹಿರಿಯ ಮುತ್ಸದ್ಧಿ ವಿಶ್ವ ಕಂಡ ಖ್ಯಾತ ಅರ್ಥಶಾಸ್ತ್ರಜ್ಞ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಬಗ್ಗೆ ಕಳೆದ 64 ವರ್ಷಗಳಲ್ಲಿ ಇಷ್ಟು ಲಘುವಾಗಿ ಯಾರು ಮಾತನಾಡಿರಲಿಲ್ಲ. ಆದರೆ, ಅಣ್ಣಾ ಹಜಾರೆ ಮಾತನಾಡಿದ್ದಾರೆ. ಅವರು ತಮ್ಮಭಾಷೆಯ ಮೇಲೆ ನಿಯಂತ್ರಣ ಇಡುವುದು ಒಳಿತು ಎಂದು ಕಾಂಗ್ರೆಸ್ ಎಚ್ಚರಿಸಿದೆ.

ಮನಮೋಹನ್ ಸಿಂಗ್ ಕುರಿತ ಅಣ್ಣಾ ಹಜಾರೆ ಹೇಳಿಕೆ ಬಗ್ಗೆ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಮತ್ತು ಅಂಬಿಕಾ ಸೋನಿ ಕಿಡಿಕಾರಿದ್ದಾರೆ.

ಪ್ರಧಾನಿಗೆ ಬರೆದ ಪತ್ರದ ರೀತಿ ಗಾಂಧಿ ತತ್ವವನ್ನು ಪ್ರತಿಪಾದಿಸುತ್ತಿದೆಯೇ? ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಗಳಿಗೆ ಎಲ್ಲಿಂದ ಹಣ ಬರುತ್ತದೆ? ಯಾರು ಹಣ ನೀಡುತ್ತಾರೆ.ಅಷ್ಟೋಂದು ಹಣ ಯಾರು ನೀಡುತ್ತಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಅಣ್ಣಾ ತಂಡದಲ್ಲಿರುವ ಕೇಜ್ರಿವಾಲ್ ಆರ್‌ಟಿಐ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಾರೆ. ಆರ್‌ಟಿಐ ಜಾರಿ ಮಾಡಿದ್ದು, ಇದೇ ಯುಪಿಎ ಸರಕಾರ ಎನ್ನುವುದನ್ನು ಮರೆಯಬಾರದು ಎಂದರು.

ಬಿಜೆಪಿ ಟೀಕೆ

ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ ಭ್ರಷ್ಟ ಮತ್ತು ಕ್ರಿಮಿನಲ್ ಎಂದು ಕಾಂಗ್ರೆಸ್ ಹೇಳಿರುವುದು ದೌರ್ಭಾಗ್ಯದ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಅಣ್ಣಾ ಹಜಾರೆ ಅವರಿಗೆ ಸತ್ಯಾಗ್ರಹ ನಡೆಸಲು ಷರತ್ತು ವಿಧಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮಧ್ಯಪ್ರವೇಶಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಪ್ರಧಾನ ಮಂತ್ರಿ, ಕಾಂಗ್ರೆಸ್, ಬಿಜೆಪಿ, ಲೋಕಪಾಲ ಮಸೂದೆ