ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಬಿಗಿ ಪಟ್ಟು: ಇಕ್ಕಟ್ಟಿನಲ್ಲಿ ಕೇಂದ್ರ ಸರಕಾರ (UPA | Tihar jail | Team Anna | Lokpal Bill | Anna Hazare)
PTI
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಪ್ರತಿಭಟನೆಗೆ ಬೆದರಿದ ಕೇಂದ್ರ ಸರಕಾರ, ಅಣ್ಣಾ ಬಿಡುಗಡೆಗೆ ಆದೇಶ ನೀಡಿತ್ತು. ಆದರೆ, ಜೈಲಿನಿಂದ ಅಣ್ಣಾ ಹೊರಬರಲು ನಿರಾಕರಿಸಿದ್ದರಿಂದ ಜೈಲು ಅಧಿಕಾರಿಗಳು ಕೋಣೆಯೊಂದನ್ನು ನೀಡಿದ್ದರಿಂದ ಅಣ್ಣಾ ಆಮರಣ ನಿರಶನ ಮುಂದುವರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶಾದ್ಯಂತ ಅಣ್ಣಾ ಪರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆದರಿದ ಸರಕಾರ, ಅವರ ಬಿಡುಗಡೆಗೆ ನಿನ್ನೆ ರಾತ್ರಿ ಆದೇಶ ಹೊರಡಿಸಿತ್ತು. ಆದರೆ, ಬೇಷರತ್ತಾಗಿ ಜೆಪಿ ಪಾರ್ಕ್‌ನಲ್ಲಿ ಆಮರಣ ನಿರಶನ ನೀಡಿದಲ್ಲಿ ಮಾತ್ರ, ತಿಹಾರ್ ಜೈಲಿನಿಂದ ಹೊರಬರುವುದಾಗಿ ಹಜಾರೆ ಹೇಳಿದ್ದರಿಂದ ಸರಕಾರ ಅಸಹಾಯಕವಾಗಬೇಕಾಯಿತು.

ಕೇಂದ್ರ ಸರಕಾರದ ಆದೇಶದ ಮೇರೆಗೆ ದೆಹಲಿ ಪೊಲೀಸರು ಅಣ್ಣಾ ಹಜಾರೆಯವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದಾಗ, ಏಳು ದಿನಗಳ ನ್ಯಾಯಾಂಗ ಅವಧಿಗೆ ಒಪ್ಪಿಸಲಾಗಿತ್ತು. ಆದರೆ, ಕೇವಲ 12 ಗಂಟೆಗಳಲ್ಲಿ ಅಣ್ಣಾ ಪರ ಹೋರಾಟ ದೇಶಾದ್ಯಂತ ವ್ಯಾಪಿಸಿದ ಹಿನ್ನೆಲೆಯಲ್ಲಿ, ಆಂತಕಕ್ಕೆ ಒಳಗಾದ ಸರಕಾರ ನಿನ್ನೆ ರಾತ್ರಿ 9 ಗಂಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ಒಂದು ವೇಳೆ ಅಣ್ಣಾ ಹಜಾರೆಯವರಿಗೆ ಆಮರಣ ನಿರಶನಕ್ಕೆ ಅನುಮತಿ ನೀಡಿದಲ್ಲಿ, ಮುಂಬರುವ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎನ್ನುವ ಆತಂಕ ಕಾಂಗ್ರೆಸ್ ನೇತೃತ್ವದ ಯುಪಿಎ ಪಾಳಯದಲ್ಲಿ ಕಂಡುಬರುತ್ತಿದೆ.

ದೆಹಲಿಯಲ್ಲಿ ಅಟೋ ಚಾಲಕರು ಅಣ್ಣಾ ಹಜಾರೆ ಪರ ಹೋರಾಟಕ್ಕೆ ಬೆಂಬಲ ನೀಡಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಗರದ ಹಲವು ಭಾಗಗಳಲ್ಲಿ ಅಣ್ಣಾ ಪರ ಕೂಗು ಗಗನಕ್ಕೇರಿದೆ. ದೇಶಾದ್ಯಂತ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಯುಪಿಎ ಸರಕಾರ, ಟೀಂ ಅಣ್ಣಾ, ಲೋಕಪಾಲ ಮಸೂದೆ