ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ವಿವಾದ: ಕಾಂಗ್ರೆಸ್ ಕೋರ್ ಕಮಿಟಿ ತುರ್ತು ಸಭೆ (Tihar jail | Lokpal Bill | Congress core committee meeting | Anna Hazare)
ಅಣ್ಣಾ ವಿವಾದ: ಕಾಂಗ್ರೆಸ್ ಕೋರ್ ಕಮಿಟಿ ತುರ್ತು ಸಭೆ
ನವದೆಹಲಿ, ಬುಧವಾರ, 17 ಆಗಸ್ಟ್ 2011( 11:39 IST )
PTI
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತಿಹಾರ್ ಜೈಲಿನಿಂದ ಹೊರಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ನಿಭಾಯಿಸುವ ಕುರಿತಂತೆ ಚರ್ಚಿಸಲು ಇಂದು ಬೆಳಿಗ್ಗೆ ಕಾಂಗ್ರೆಸ್ ಕೋರ್ ಕಮಿಟಿ ತುರ್ತು ಸಭೆ ಕರೆಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೋರ್ ಕಮಿಟಿ ಸಭೆಯ ನೇತೃತ್ವವಹಿಸಲಿದ್ದು, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಉನ್ನತ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಂಗಳವಾರದಂದು ಸಂಜೆ ರಾಹುಲ್ ಗಾಂಧಿ, ಪಕ್ಷದ ಅನೇಕ ಹಿರಿಯ ನಾಯಕರೊಂದಿಗೆ ಸರಣಿ ಚರ್ಚೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಸಶಕ್ತ ಲೋಕಪಾಲ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಿ ಆಮರಣ ನಿರಶನಕ್ಕಾಗಿ ತೆರಳುತ್ತಿರುವ ಸಂದರ್ಭದಲ್ಲಿ ದೆಹಲಿ ಪೊಲೀಸರು ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು.
ಮಂಗಳವಾರದಂದು ರಾತ್ರಿ 9 ಗಂಟೆಯ ವೇಳೆಗೆ ಅಣ್ಣಾ ಹಜಾರೆಯವರನ್ನು ಬಿಡುಗಡೆ ಮಾಡುವುದಾಗಿ ಸರಕಾರ ಘೋಷಿಸಿತ್ತು.ಆದರೆ, ಜೆಪಿ ಪಾರ್ಕ್‌ನಲ್ಲಿ ಬೇಷರತ್ತಾಗಿ ಆಮರಣ ನಿರಶನಕ್ಕೆ ಅನುಮತಿ ನೀಡಿದಲ್ಲಿ ಮಾತ್ರ ಜೈಲಿನಿಂದ ಹೊರಬರುವುದಾಗಿ ಅಣ್ಣಾ ಬಿಗಿಪಟ್ಟು ಹಿಡಿದಿದ್ದಾರೆ.