ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧಿವಾದಿ ಅಣ್ಣಾ ಹಜಾರೆಗೆ ಮಾಯಾವತಿ ಬೆಂಬಲ (Mayawati on anna | India against corruption | Anti Corruption | Anna Hazare arrest)
PTI
ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕೊನೆಗೂ ಮೌನವನ್ನು ಮುರಿದಿದ್ದು, ಭ್ರಷ್ಟಾಚಾರ ವಿರುದ್ಧದ ಅಮ್ಣಾ ಹಜಾರೆ ಹೋರಾಟಕ್ಕೆ ಬಿಎಸ್‌ಪಿ ಪಕ್ಷ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಉತ್ತರಪ್ರದೇಶದ ಲೋಕಾಯುಕ್ತರ ವರದಿಯಲ್ಲಿ ಭ್ರಷ್ಟಾಚಾರದ ಆರೋಪದಿಂದಾಗಿ ಪಶುವೈದ್ಯಕೀಯ ಹಾಗೂ ಜೈರಿ ಅಭಿವೃದ್ಧಿ ನಿಗಮದ ಸಚಿವ ಅವಧ್ ಪಾಲ್ ಸಿಂಗ್ ರಾಜೀನಾಮೆ ನೀಡಿದ ನಂತರ ಮಾಯಾವತಿ ಹಜಾರೆಯವರಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ.

ಲೋಕಾಯುಕ್ತರು ಸಚಿವ ಅವಧ್ ಪಾಲ್ ಸಿಂಗ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ನೇರ ಆರೋಪಿಯಾಗಿಸಿದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಮಾಯಾವತಿ ಆದೇಶಿಸಿದ್ದರು.

ಅನೇಕ ಭ್ರಷ್ಟಾಚಾರ ಹಾಗೂ ಇತ್ತೀಚೆಗೆ ನಡೆದ ತ್ರಿವಳಿ ಹತ್ಯಾ ಪ್ರಕರಣದಲ್ಲಿ ಕೂಡಾ ಸಚಿವರ ಹೆಸರು ಬಹಿರಂಗವಾಗಿತ್ತು. ಆರಂಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಮಾಯಾವತಿ ಸರಕಾರ ಕೂಡಾ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿತ್ತು. ಆದರೆ, ವಿರೋಧ ಪಕ್ಷದ ಒತ್ತಡ ಹಿನ್ನೆಲೆಯಲ್ಲಿ ಸರಕಾರ ಅನಿವಾರ್ಯವಾಗಿ ರಾಜೀನಾಮೆ ಪಡೆಯುತು.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಬಂಧನ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಬಿಎಸ್‌ಪಿ ಪಕ್ಷ ಕೇವಲ ಅಣ್ಣಾ ಹಜಾರೆ ಪರವಾಗಿಲ್ಲ.ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಲ್ಲಾ ಸಂಘಟನೆಗಳ ಪರವಾಗಿದೆ ಎಂದು ಮುಖ್ಯಮಂತ್ರಿ ಮಾಯಾವತಿ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮಾಯಾವತಿ, ಅಣ್ಣಾ ಹಜಾರೆ, ಭ್ರಷ್ಟಾಚಾರ ವಿರೋಧಿ, ಆಮರಣ ನಿರಶನ