ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಹ್! ಅಣ್ಣಾ ಆಂದೋಲನ ಹಿಂದೆ ವಿದೇಶೀ ಕೈವಾಡ: ಕಾಂಗ್ರೆಸ್ (Anna Hazare | Congress | Corruption | US statement)
PTI
ಭ್ರಷ್ಟಾಚಾರ ವಿರುದ್ಧ ದೇಶಾದ್ಯಂತ ಜನರು ಬೀದಿಗಿಳಿದಿರುವುದರಿಂದ ಕಂಗಾಲಾಗಿರುವ ಕಾಂಗ್ರೆಸ್, ಏಕಾಂಗಿಯಾಗಿದ್ದ ಅಣ್ಣಾ ಹಜಾರೆಗೆ ದೇಶಾದ್ಯಂತ ಇಷ್ಟೊಂದು ಬೆಂಬಲ ವ್ಯಕ್ತವಾಗಿದ್ದು ಹೇಗೆ, ಇದರಲ್ಲಿ ವಿದೇಶೀ ಕೈವಾಡವಿರಬಹುದೇ ಎಂಬುದರ ಕುರಿತಾಗಿ ತನಿಖೆಯಾಗಬೇಕಿದೆ ಎಂಬ ಹೇಳಿಕೆ ನೀಡಲಾರಂಭಿಸಿದೆ.

"ಅಣ್ಣಾ ಹಜಾರೆಯವರ ಶಾಂತಿಯುತ ಪ್ರತಿಭಟನೆಯ ವಿಷಯವನ್ನು ಭಾರತವು ಯಾವುದೇ ಪ್ರಚೋದನೆಗೀಡಾಗದೆ ನಿರ್ವಹಿಸಲಿದೆ" ಎಂಬ ಅಮೆರಿಕ ಹೇಳಿಕೆಯನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಸ್ವಾತಂತ್ರ್ಯ ಬಂದಂದಿನಿಂದ ಇದುವರೆಗೂ ಭಾರತದ ಯಾವುದೇ ಹೋರಾಟವನ್ನು ಬೆಂಬಲಿಸದ ಅಮೆರಿಕ, ಇದೇ ಮೊದಲ ಬಾರಿಗೆ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಅವಕಾಶ ಕೊಡಬೇಕು, ಯಾವುದೇ ರೀತಿಯಲ್ಲಿ ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯಬಾರದು ಎಂದು ಹೇಳಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅಮೆರಿಕಕ್ಕೆ ಇಂಥಹ ಹೇಳಿಕೆಯನ್ನು ಕೊಡುವ ಅಗತ್ಯವಾದರೂ ಏನಿತ್ತು ಎಂದಿದೆ.

ಸರಕಾರವನ್ನು ಮಾತ್ರವಲ್ಲ, ದೇಶವನ್ನೇ ಅಸ್ಥಿರತೆಯತ್ತ ತಳ್ಳುವ ನಿಟ್ಟಿನಲ್ಲಿ ಯಾವುದಾದರೂ ಶಕ್ತಿಗಳು ಅಣ್ಣಾ ಹೋರಾಟವನ್ನು ಬೆಂಬಲಿಸುತ್ತಿವೆಯೇ ಎಂಬುದರ ಬಗೆಗೂ ಯೋಚಿಸಬೇಕಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದು ತಮ್ಮ ಪಕ್ಷದ ಅಧಿಕೃತ ಅಭಿಪ್ರಾಯವೋ ಹಾಗೂ ಇಡೀ ಪಕ್ಷದ ನಿಲುವೋ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅಲ್ವಿ ಅವರು ತಾನೇನೆಲ್ಲಾ ಹೇಳಿದ್ದೇನೆಯೋ ಅದನ್ನು ಪಕ್ಷದ ಪರವಾಗಿಯೇ ನೀಡುತ್ತಿರುವುದಾಗಿ ತಿಳಿಸಿದರು.

ಅಣ್ಣಾ ಹಜಾರೆಯ ಹೋರಾಟದ ಹಿಂದೆ ಅಮೆರಿಕ ಕೈವಾಡವಿರುವ ಶಂಕೆಯ ಕುರಿತಾದ ಈ ಹೇಳಿಕೆ ಕೊಡುವ ಮೊದಲು, ಕಾಂಗ್ರೆಸ್ ಪಕ್ಷವು ಈ ಕುರಿತು ಯಾವುದಾದರೂ ಪ್ರಾಥಮಿಕ ವಿಚಾರಣೆಗಳನ್ನು ನಡೆಸಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಲ್ವಿ, ಈ ಕುರಿತು ಸರ್ಕಾರ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಬೇಕು ಎಂದರು.

ಏಕಾಂಗಿಯಾಗಿದ್ದ ಅಣ್ಣಾಗೆ ಇಷ್ಟು ಬೆಂಬಲ ಹೇಗೆ ಬಂತು?
ಅಣ್ಣಾ ಬೆಂಬಲಕ್ಕೆ ದೇಶದೊಳಗಿರುವ ಕೆಲವು ಶಕ್ತಿಗಳು ಕೂಡ ನಿಂತಿವೆ. ಅವುಗಳ್ಯಾವುವು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ನಾನೇನೂ ಅಮೆರಿಕ ಅಥವಾ ಬೇರಾವುದೇ ದೇಶವನ್ನು ಟೀಕಿಸುತ್ತಿಲ್ಲ. ಆದರೆ ಈ ಆಂದೋಲನಕ್ಕೆ ಅಮೆರಿಕ ಬೆಂಬಲಿಸುತ್ತಿರುವುದೇಕೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದ ಅಲ್ವಿ, "ಅಣ್ಣಾ ಏಕಾಂಗಿಯಾಗಿದ್ದರು. ಅವರಿಗೆ ಯಾವುದೇ ಸಂಘಟನೆಗಳಿರಲಿಲ್ಲ. ಕೆಲವೊಂದಷ್ಟು ಮಿತ್ರರು ಮಾತ್ರವೇ ಇದ್ದರು. ದೊಡ್ಡ ಪ್ರಶ್ನೆಯೆಂದರೆ ಈ ಆಂದೋಲನವು ಇಷ್ಟು ದೊಡ್ಡ ರೂಪ ಪಡೆದದ್ದಾದರೂ ಹೇಗೆ? ಇಷ್ಟೊಂದು ಸಂಖ್ಯೆಯಲ್ಲಿ ಜನರು ಅವರ ಬೆಂಬಲಕ್ಕೆ ನಿಲ್ಲಲು ಕಾರಣಗಳೇನು?" ಎಂದು ಕಾಂಗ್ರೆಸ್ ಮುಖಂಡ ಪ್ರಶ್ನಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಕಾಂಗ್ರೆಸ್, ಭ್ರಷ್ಟಾಚಾರ, ಅಮೆರಿಕ, ಪ್ರತಿಭಟನೆ