ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಗತ್ಯವಾದಲ್ಲಿ ಆಮರಣ ನಿರಶನ ಗಡುವು ವಿಸ್ತರಣೆ: ಬೇಡಿ (Kiran Bedi | Anna Hazare | Hunger strike | Jan Lokpal | Ramlila Ground)
PTI
ಗಾಂಧಿವಾದಿ ಅಣ್ಣಾ ಹಜಾರೆಯವರಿಗೆ ನಿರಶನಕ್ಕಾಗಿ 15 ದಿನಗಳ ಗಡುವ ನೀಡಲಾಗಿದ್ದು, ಅಗತ್ಯವಾದಲ್ಲಿ ವಿಸ್ತರಣೆಗೆ ಅನುಮತಿ ನೀಡಲಾಗಿದೆ ಎಂದು ಅಣ್ಣಾ ತಂಡದ ಸದಸ್ಯೆ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ತಿಳಿಸಿದ್ದಾರೆ.

ಅಣ್ಣಾ ಹಜಾರೆ ಇಂದು ಮಧ್ಯಾಹ್ನ ತಿಹಾರ್ ಜೈಲಿನಿಂದ ಹೊರಬಂದು, ಜನಲೋಕಪಾಲ ಮಸೂದೆ ಜಾರಿಗಾಗಿ ಆಮರಣ ನಿರಶನ ಆರಂಭಿಸುವ ಮುನ್ನ ನೇರವಾಗಿ ರಾಜ್‌ಘಾಟ್‌ಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಸಂಸತ್ತಿನಲ್ಲಿ ಜನತೆಯ ಆಶೋತ್ತರಗಳಿಗೆ ಅನುಗುಣವಾದ ಹೊಸ ಲೋಕಪಾಲ ಮಸೂದೆಯನ್ನು ಮಂಡಿಸಬೇಕು ಎಂದು ಬೇಡಿ ಒತ್ತಾಯಿಸಿದ್ದಾರೆ.

ದೆಹಲಿ ಪೊಲೀಸರಿಂದ ಯಾವುದೇ ಷರತ್ತುಗಳನ್ನು ಪಾಲಿಸುವಂತೆ ಅಣ್ಣಾ ಹಜಾರೆಯವರ ಮೇಲೆ ಒತ್ತಡವಿಲ್ಲ. ಆದರೆ, ಆಮರಣ ನಿರಶನಕ್ಕಾಗಿ ದೆಹಲಿ ಪೊಲೀಸರು ನೀಡಿದ 15 ದಿನಗಳ ಗಡುವು ಉತ್ತಮವಾಗಿದೆ. ಅಗತ್ಯವಾದಲ್ಲಿ ವಿಸ್ತರಿಸಬಹುದು ಎನ್ನುವ ಅನುಮತಿಯನ್ನು ಕೂಡಾ ಪಡೆದಿದ್ದೇವೆ ಎಂದು ವಿವರಣೆ ನೀಡಿದ್ದಾರೆ.

ಹಜಾರೆಯವರು ತಿಹಾರ್ ಜೈಲಿನಲ್ಲಿದ್ದಾಗ, ಜೈಲಿನ ವೈದ್ಯರಾದ ನೀರಜ್ ಕುಮಾರ್ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಆಮರಣ ನಿರಶನದ ಸಮಯದಲ್ಲಿ, ವೇದಾಂತಾ ಮೆಡಿಸಿಟಿ ಆಸ್ಪತ್ರೆಯ ಖ್ಯಾತ ಹೃದಯರೋಗ ತಜ್ಞರಾದ ನರೇಶ್ ಟ್ರೆಹಾನ್ ಮತ್ತು ಸರಕಾರಿ ವೈದ್ಯರು ಅಣ್ಣಾ ಹಜಾರೆಯವರ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿವಹಿಸಲಿದ್ದಾರೆ ಎಂದು ಕಿರಣ್ ಬೇಡಿ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕಿರಣ್ ಬೇಡಿ, ಅಣ್ಣಾ ಹಜಾರೆ, ಆಮರಣ ನಿರಶನ, ಜನಲೋಕಪಾಲ ಮಸೂದೆ, ರಾಮಲೀಲಾ ಮೈದಾನ