ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಸಭೆಯಲ್ಲಿ ಜನಲೋಕಪಾಲ ಆವೃತ್ತಿ ಮಂಡನೆ: ವರುಣ್ (Anna Hazare | version | Lokpal Bill | BJP MP Varun Gandhi | Jan Lokpal Bill)
PTI
ಬಿಜೆಪಿ ಸಂಸದ ವರುಣ್ ಗಾಂಧಿ ಪಕ್ಷಕ್ಕಿಂತ ಒಂದು ಹೆಜ್ಜೆ ಮುಂದಿರಿಸಿದ್ದಾರೆ. ಅಣ್ಣಾ ಹಜಾರೆಯವರ ಜನಲೋಕಪಾಲ ಆವೃತ್ತಿಯನ್ನು ಖಾಸಗಿ ಸದಸ್ಯರ ಪರವಾಗಿ ನಾಳೆ ನಡೆಯಲಿರುವ ಲೋಕಸಭಾ ಅಧಿವೇಶನದಲ್ಲಿ ಮುಂದಿಡಲಾಗುವುದು ಎಂದು ತಿಳಿಸಿದ್ದಾರೆ.

ಅಣ್ಣಾ ಹಜಾರೆ ಜೈಲಿನಲ್ಲಿದ್ದರೂ ಕೂಡಾ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ. ಸಾರ್ವಜನಿಕರ ಭಾವನೆಗಳನ್ನು ಬಿಂಬಿಸಿ ಮತ್ತು ಅರ್ಥಪೂರ್ಣ ಪ್ರಭಾವಿ ಬದಲಾವಣೆಯನ್ನು ನೀಡುವ ವೇದಿಕೆಯಾದ ಸಂಸತ್ತಿನಲ್ಲಿ ಜನಲೋಕಪಾಲ ಆವೃತ್ತಿಯನ್ನು ಮುಂದಿಡಲಿದ್ದೇನೆ. ದೇಶದ ಏಳಿಗೆಗಾಗಿ ಚಿಂತನೆ ನಡೆಸುವ ಪ್ರತಿಯೊಬ್ಬ ಸಂಸದ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

ಬಿಜೆಪಿ ಪಕ್ಷ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ, ಜನಲೋಕಪಾಲ ಮಸೂದೆಯಲ್ಲಿರುವ ಕೆಲ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರೋತ್ಸವದ ದಿನವಾದ ಮಂಗಳವಾರದಂದು, ಅಣ್ಣಾ ಹಜಾರೆಯವರ ಬಂಧನದ ಸುದ್ದಿ ಕೇಳಿ ಆಘಾತ ಮತ್ತು ನಾಚಿಕೆಯಾಯಿತು. ಇದೆಂತಹ ಸ್ವಾತಂತ್ರ್ಯ. ಒಂದು ವೇಳೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವುದು ಅಪರಾಧ ಎಂದಾದಲ್ಲಿ, ಈಡೀ ದೇಶ ಅಪರಾಧಿಯಾಗಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿಕಾರಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಲೋಕಪಾಲ ಮಸೂದೆ, ಬಿಜೆಪಿ ಸಂಸದ, ವರುಣ್ ಗಾಂಧಿ, ಜನಲೋಕಪಾಲ ಮಸೂದೆ